ಸುಡಾನ್‌ನ ಪಶ್ಚಿಮ ಡಾರ್ಫರ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, ಇಡೀ ಗ್ರಾಮವೇ ನಾಮಾವಶೇಷಗೊಂಡಿದೆ. ಈ ಭೂಕುಸಿತಕ್ಕೆ 1,000 ಕ್ಕೂ ಹೆಚ್ಚು ಜನ ಬಲಿಯಾಗಿದ್ದು, ಗ್ರಾಮದ ಒಬ್ಬ ವ್ಯಕ್ತಿ ಮಾತ್ರ ಬದುಕುಳಿದಿದ್ದಾರೆ ಎಂಬುದೇ ವಿಶೇಷ.
ಮರ್ರಾ ಪರ್ವತಗಳಲ್ಲಿರುವ ತಾರಾಸಿನ್ ಗ್ರಾಮ ಭೂಕುಸಿತದಿಂದ ಅಳಿದುಹೋಗಿರುವ ಗ್ರಾಮ. ಇಲ್ಲಿ ಕೆಲವು ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಬಳಿಕ ಭೂಕುಸಿತ ದುರಂತ ಸಂಭವಿಸಿದೆ ಎಂದು ಸುಡಾನ್ ಲಿಬರೇಶನ್ ಮೂವ್‌ಮೆಂಟ್/ಆರ್ಮಿ ತಿಳಿಸಿದೆ. ಮಣ್ಣು ಮತ್ತು ಅವಶೇಷಗಳ ಅಡಿಯಲ್ಲಿ ಹೂತುಹೋಗಿರುವ
ಮೃತದೇಹಗಳನ್ನು ಹೊರತೆಗೆಯುವದಕ್ಕಾಗಿ ಸುಡಾನ್ ವಿಶ್ವಸಂಸ್ಥೆ ಮತ್ತು ಇತರ ಸಂಸ್ಥೆಗಳಿಗೆ ಮನವಿ ಮಾಡಿದೆ. ಸುಡಾನ್ ಸೈನ್ಯ ಮತ್ತು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳ ನಡುವಿನ ಅಂತರ್ಯುದ್ಧದಲ್ಲಿ ನಲುಗಿ ಹೋಗಿದೆ. ಈ ಬೆಳವಣಿಗೆ ಸುಡಾನ್ ಅನ್ನು ವಿಶ್ವದ ಅತ್ಯಂತ ಹೀನಾಯ ಮಾನವೀಯ ಬಿಕ್ಕಟ್ಟಿನಲ್ಲಿ ತಂದು ನಿಲ್ಲಿಸಿದೆ.
2023ರಲ್ಲಿ ಆರಂಭಗೊಂಡಿರುವ ಎರಡೂ ಬಣಗಳ ನಡುವಿನ ಆಂತರಿಕ ಸಂಘರ್ಷ ಇಲ್ಲಿವರೆಗೆ 4000ಕ್ಕೂ ಹೆಚ್ಚು ಜನರನ್ನು ಬಲಿ ಪಡೆದುಕೊಂಡಿದೆ. ತಿನ್ನಲು ಆಹಾರವಿಲ್ಲದೆ ಜನ ಕಂಗೆಟ್ಟು ಹೋಗುವ ಪರಿಸ್ಥಿತಿ ಅಲ್ಲಿದೆ.