Menu

ಮಳವಳ್ಳಿಯಲ್ಲಿ ವಿವಾಹಿತನ ಜೊತೆ ವಿದ್ಯಾರ್ಥಿನಿಯ ಪ್ರೀತಿ: ಮಗಳು, ತಾಯಿ ಆತ್ಮಹತ್ಯೆ

ಮಂಡ್ಯದ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ತಾಯಿ-ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಕುಂತಲಾದೇವಿ (46), ಪ್ರಿಯಾಂಕ (19) ಆತ್ಮಹತ್ಯೆ ಮಾಡಿಕೊಂಡಿರುವ ತಾಯಿ ಮತ್ತು ಮಗಳು.

ಮಗಳು ಪ್ರಿಯಾಂಕಳ ಮಗಳ ಮದುವೆಗೆ ಕುಟುಂಬಸ್ಥರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆಕೆ ಕೋಡಿಹಳ್ಳಿ ಗ್ರಾಮದ ನಿವಾಸಿ, ವಿವಾಹಿತ, ಎರಡು ಮಕ್ಕಳ ತಂದೆಯಾಗಿರುವ 34 ವರ್ಷದ ಮುತ್ತುರಾಜ್‌ ಎಂಬಾತನನ್ನು ಪ್ರೀತಿಸುತ್ತಿದ್ದಳು. ಕೆಲವು ದಿನಗಳ ಹಿಂದೆಯಷ್ಟೇ ಪೋಷಕರಿಗೆ ಮಗಳ ಪ್ರೀತಿಯ ವಿಷಯ ಗೊತ್ತಾಗಿತ್ತು. ಮುತ್ತುರಾಜ್‌ಗೆ ಈಕೆಯ ಪೋಷಕರು ಬೈದು ಬುದ್ಧಿ ಹೇಳಿದ್ದರು. ಮಗಳಿಗೂ ಆತನಿಂದ ದೂರವಿರುವಂತೆ ಎಚ್ಚರಿಸಿದ್ದರು.

ಪ್ರಿಯಾಂಕಾಗೆ ಮದುವೆ ಮಾಡಲು ಪೋಷಕರು ಮುಂದಾಗಿದ್ದರು. ಮದುವೆಗೆ ಗಂಡು ಹುಡುಕಿದ ನಂತರವೂ ಪ್ರಿಯಾಂಕಾ-ಮುತ್ತುರಾಜ್ ಲವ್ ಮುಂದುವರಿದಿತ್ತು. ಈಗ ಮರ್ಯಾದೆಗೆ ಹೆದರಿ ಮಗಳು ಮತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಿಯಾಂಕಾ ತಂದೆ ಮಹೇಶ್‌ ಹಲಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಿಯಾಂಕಾ ಮತ್ತು ಮುತ್ತುರಾಜ್​​ ಪ್ರೇಮದ ವಿಷಯ ಮೊದಲು ತಾಯಿ ಶಕುಂತಲಾದೇವಿ ಅವರಿಗೆ ಗೊತ್ತಾಗಿತ್ತು. ಬಳಿಕ ಅವರು ಪತಿಗೆ ತಿಳಿಸಿದ್ದರು ಎನ್ನಲಾಗಿದೆ. ಕಾಲೇಜಿಗೆ ತೆರಳುತ್ತಿದ್ದ ಮಗಳಿಗೆ ಸಂಬಂಧದಲ್ಲೇ ಹುಡುಗನನ್ನು ಹುಡುಕಿ ಮದುವೆ ಸಿದ್ಧತೆ ನಡೆಸಿದ್ದರು.

Related Posts

Leave a Reply

Your email address will not be published. Required fields are marked *