ಬೆಂಗಳೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೀನಿಯರ್ ವಿದ್ಯಾರ್ಥಿನಿ ಮೇಲೆ ಜೂನಿಯರ್ ವಿದ್ಯಾರ್ಥಿಯೊಬ್ಬ ಅತ್ಯಾಚಾರ ನಡೆಸಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜೀವನ್ ಬಂಧಿತ ಎಂಜಿನಿಯರಿಂಗ್ ವಿದ್ಯಾರ್ಥಿ. ವಿದ್ಯಾರ್ಥಿನಿಯನ್ನು ಕಾಲೇಜಿನ ವಾಶ್ ರೂಂಗೆ ಎಳೆದೊಯ್ದು ಅತ್ಯಾಚಾರ ನಡೆಸಿದ್ದಾನೆ. ಹನುಮಂತನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತ್ಯಾಚಾರ ಕೇಸ್ ದಾಖಲಾಗಿದೆ.
ಸಂತ್ರಸ್ತೆಯು ಆರೋಪಿಯಿಂದ ಕೆಲವೊಂದು ಸಾಮಗ್ರಿಗಳನ್ನು ತೆಗೆದುಕೊಳ್ಳಬೇಕಿತ್ತು, ಲಂಚ್ ಬ್ರೇಕ್‌ನಲ್ಲಿ ತೆಗೆದುಕೊಳ್ಳುತ್ತೇನೆ ಅಂದಿದ್ದಳು. ಲಂಚ್ ವೇಳೆಯಲ್ಲಿ ಭೇಟಿಯಾದಾಗ ಆರೋಪಿಯು ಸಂತ್ರಸ್ತೆಯ ಬಳಿ ಸ್ವಲ್ಪ ಮಾತನಾಡಬೇಕೆಂದು ಹೇಳಿ ಡೌನ್ ಸ್ಪೇರ್ಸ್ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿಂದ ಆರೋಪಿ ಹೇಳಿದಂತೆ 7ನೇ ಮಹಡಿ ಪಿಜಿ ಬ್ಲಾಕ್ಗೆ ಹೋಗಿರುತ್ತಾರೆ. ಅಲ್ಲಿ ಆರೋಪಿಯು ಸಂತ್ರಸ್ತೆಗೆ ಕಿಸ್ ಮಾಡಲು ಬಂದಿದ್ದಾನೆ. ತಪ್ಪಿಸಿಕೊಳ್ಳಲು ಮುಂದಾದಾಗ ವಿದ್ಯಾರ್ಥಿನಿಯನ್ನು ಹಿಂಬಾಲಿಸಿಕೊಂಡು 6ನೇ ಮಹಡಿಗೆ ಬಂದ ಆರೋಪಿ ಬಲವಂತವಾಗಿ ವಾಶ್ ರೂಮ್ ಒಳಗೆ ಕರೆದುಕೊಂಡು ಡೋರ್ ಲಾಕ್ ಮಾಡಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಪುರುಷರ ಶೌಚಗೃಹದೊಳಕ್ಕೆ ಎಳೆದೊಯ್ದ ಆರೋಪಿ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ಬಲವಂತ ಮಾಡಿದ್ದಾನೆ. ನಂತರ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪೊಲೀಸ್ ನಿರ್ಲಕ್ಷ್ಯದಿಂದ ಯಾಮಿನಿ ಕೊಲೆ ?
ಕತ್ತು ಕೂಯ್ದು ಕಾಲೇಜು ವಿದ್ಯಾರ್ಥಿನಿಯನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಮಲ್ಲೇಶ್ವರಂ ಮಂತ್ರಿ ಮಾಲ್ ಹಿಂಭಾಗ ರೈಲ್ವೆ ಟ್ರಾಕ್ ಬಳಿ ನಡೆದಿದೆ. ಯಾಮಿನಿ ಪ್ರಿಯಾ ಕೊಲೆಯಾದ ವಿದ್ಯಾರ್ಥಿನಿ.
ಶ್ರೀ ರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರ ನಿರ್ಲಕ್ಷ್ಯದಿಂದಲೇ ವಿದ್ಯಾರ್ಥಿನಿ ಯಾಮಿನಿಯ ಕೊಲೆ ನಡೆದಿರುವುದಾಗಿ ಆರೋಪ ಕೇಳಿ ಬಂದಿದೆ. ಆರು ತಿಂಗಳ ಹಿಂದೆ ಕೊಲೆಗಟುಕ ಪ್ರೇಮಿ ವಿಘ್ನೇಶ್ ಕಾಟಕ್ಕೆ ಬೇಸತ್ತಿದ್ದ ಆಕೆಯ ಕುಟುಂಬಸ್ಥರು ಶ್ರೀರಾಂಪುರ ಪೊಲೀಸ್ ಠಾಣೆಗೆ ವಿಘ್ನೇಶ್ ವಿರುದ್ಧ ದೂರು ನೀಡಿದ್ದರು.
ದೂರು ಪಡೆದ ಪೊಲೀಸರು ಆತನ ಬಗ್ಗೆ ವಿಚಾರಿಸದೆ ಸುಮ್ಮನಾಗಿ ಬೇಜವಾಬ್ದಾರಿ ತೋರಿದ್ದಾರೆ. ಸರಿಯಾಗಿ ವಾರ್ನ್ ಮಾಡದ್ದರಿಂದ ಆತ ಯಾಮಿನಿಗೆ ಮತ್ತಷ್ಟು ಕಾಟ ಕೊಡುತ್ತಿದ್ದ ಎನ್ನಲಾಗಿದೆ. ಯಾಮಿನಿಯ ಕೊಲೆ ಬಳಿಕ ಕೊಲೆ ಬಳಿಕ ವಿಘ್ನೇಶ್ ಹಿನ್ನಲೆ ಬಗ್ಗೆ ಮಾಹಿತಿ ಕಲೆಹಾಕಲು ಪೊಲೀಸರು ಕಾರ್ಯಪ್ರವೃತ್ತರಾಗಿದ್ದರು. ಆಗ ಆತನೊಬ್ಬ ಸುಲಿಗೆಕೋರ ಎಂಬುದು ಪತ್ತೆಯಾಗಿದೆ.
ಪೊಲೀಸರ ಹೆಸರು ಕೇಳಿಕೊಂಡು ಸುಲಿಗೆ ಮಾಡುವ ಜೊತೆಗೆ ಬಿಬಿಎಂಪಿ ಮಾರ್ಷಲ್ ಗಳ ಬಳಿಯೂ ಸುಲಿಗೆ ಮಾಡುತ್ತಿದ್ದ. 2022 ರಲ್ಲಿ ಆತನ ವಿರುದ್ಧ ಸುಲಿಗೆ ಕೇಸ್ ಕೂಡ ದಾಖಲಾಗಿತ್ತು. ಪೊಲೀಸರು ದೂರು ಕೊಟ್ಟಾಗ ತೋರಿದ ನಿರ್ಲಕ್ಯದಿಂದ ಯಾಮಿನಿಯ ಕೊಲೆಯಾಗಿದೆ. ಜನ ಓಡಾಡೋ ಸ್ಥಳದಲ್ಲಿ ಕಣ್ಣಿಗೆ ಕಾರದಪುಡಿ ಹಾಕಿ ಕತ್ತು ಕೊಯ್ದು ಪರಾರಿಯಾಗಿದ್ದ. ಈಗ ಆರೋಪಿಗಾಗಿ ಮೂರು ವಿಶೇಷ ಪೊಲೀಸ್ ತಂಡಗಳಿಂದ ಹುಡುಕಾಟ ನಡೆಯುತ್ತಿದೆ.