Menu

ಕೊಪ್ಪಳದಲ್ಲಿ ಶಾಲಾ ಆವರಣಕ್ಕೆ ನುಗ್ಗಿ ವಿದ್ಯಾರ್ಥಿ, ಶಿಕ್ಷಕನ ಮೇಲೆ ನಾಯಿ ದಾಳಿ

ರಾಜ್ಯದ ನಾನಾ ಕಡೆ ಬೀದಿನಾಯಿಗಳ ದಾಳಿಗಳಿಂದ ಜನ ಬೇಸತ್ತಿದ್ದು, ಕೊಪ್ಪಳದ ಕುಕನೂರು ತಾಲೂಕಿನ ತಳಕಲ್ ಗ್ರಾಮದಲ್ಲಿ ಶಾಲಾ ಆವರಣಕ್ಕೆ ಏಕಾಏಕಿ ನುಗ್ಗಿದ ನಾಯಿ ವಿದ್ಯಾರ್ಥಿ ಹಾಗೂ ಶಿಕ್ಷಕನ ಮೇಲೆ ದಾಳಿ ಮಾಡಿದೆ.

ಶಾಲಾ ಆವರಣದಲ್ಲಿ ಮಕ್ಕಳು ಆಟವಾಡುತ್ತಿದ್ದಾಗ ನಾಯಿ ನುಗ್ಗಿದ್ದು, ಆಟವಾಡುತ್ತಿದ್ದ ವಿದ್ಯಾರ್ಥಿಯ ಮೇಲೆ ದಾಳಿ ಮಾಡಿ ನಂತರ ಶಿಕ್ಷಕನ ಮೇಲೂ ದಾಳಿ ಮಾಡಿದೆ.

ಆ ನಾಯಿಯು ಶುಕ್ರವಾರದಿಂದಲೇ ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸುತ್ತಿದ್ದು, ಈಗಾಗಲೇ 10ಕ್ಕೂ ಹೆಚ್ಚು ಜನರ ಮೇಲೆ ದಾಳಿಯಾಗಿದೆ. ಗಾಯಾಳುಗಳನ್ನು ಸ್ಥಳೀಯ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳದ ಗ್ರಾಮ ಪಂಚಾಯತಿ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

Related Posts

Leave a Reply

Your email address will not be published. Required fields are marked *