ಬೆಂಗಳೂರಿನ ಕೆಂಪೇಗೌಡ ನಗರದಲ್ಲಿ ಯುವಕನ ಮೇಲೆ ಬೀದಿನಾಯಿ ದಾಳಿ ಮಾಡಿ ಗಾಯಗೊಳಿಸಿದ್ದು, ಚಿಕಿತ್ಸೆಗೆಂದು ಹೋದಾಗ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ವಾಪಸ್ ಕಳಿಸಿರುವ ಘಟನೆ ನಡೆದಿದೆ.
ನಾಯಿ ದಾಳಿಗೆ ಒಳಗಾಗಿ ಯುವಕನ ದೇಹ ರಕ್ತಸಿಕ್ತವಾಗಿದ್ದರೂ ಯಾವುದೇ ಬ್ಯಾಂಡೆಜ್, ಚಿಕಿತ್ಸೆ ನೀಡದೆ ವೈದ್ಯರು ವಾಪಸ್ ಕಳಿಸಿದ್ದಾರೆ ಎನ್ನಲಾಗಿದೆ. ನಾಯಿ ದಾಳಿ ಆದ ಮೇಲೆ ಮೊದಲು ಯಲಹಂಕ ಸರ್ಕಾರಿ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವಿಕ್ಟೋರಿಯಾ ಆಸ್ಪತ್ರೆಯಿಂದ ಗಾಯಾಳು ವೀರೇಶ್ ಡಿಸ್ಚಾರ್ಜ್ ಆಗಿದ್ದು, ಯಲಹಂಕ ಆಸ್ಪತ್ರೆಯಲ್ಲಿ ನೋಡಿದ್ದಾರೆ. ಮನೆಯಲ್ಲಿಯೇ ವಿಶ್ರಾಂತಿ ಪಡೆಯಲಿ ಎಂದು ವಿಕ್ಟೋರಿಯಾದ ವೈದ್ಯರು ಮನೆಗೆ ವಾಪಸ್ ಕಳಿಸಿದ್ದಾರೆ.
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ
ಚಿಪ್ಸ್ ಕೊಡಿಸೋ ನೆಪದಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಪ್ರಕರಣ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಶಾಂತಿಪುರದಲ್ಲಿ ನಡೆದಿದೆ.
ಐದು ವರ್ಷದ ಬಾಲಕಿ ಮೇಲೆ ಪಕ್ಕದ ಮನೆ ನಿವಾಸಿ ಚಿರಂಜಿತ್ ಎಂಬಾತ ಲೈಂಗಿಕ ದೌರ್ಜನ್ಯ ಎಸಗಿದ್ದು, ಆರೋಪಿಯನನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.


