ವಿಜಯಪುರದಲ್ಲಿ ಸ್ಟೋನ್ ಕ್ರಷರ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಕಲ್ಲು ತೂರಾಟದ ವೀಡಿಯೊಗಳು ವೈರಲ್ ಆಗಿವೆ.
ಕೊಲ್ಹಾರ ಪಟ್ಟಣದ ರೈತ ಸಂಪರ್ಕ ಕೇಂದ್ರದ ಮುಂಭಾಗದಲ್ಲಿ ಸ್ಟೋನ್ ಕ್ರಷರ್ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದ ವೇಳೆ ವಾಗ್ವಾದ ಉಂಟಾಗಿ ಕಲ್ಲು ತೂರಾಟ ನಡೆದಿದೆ.
ಸ್ಟೋನ್ ಕ್ರಷರ್ ಮಾಲೀಕರಾಗಿರುವ ಸ್ಥಳೀಯ ಗೀರಗಾಂವಕರ್ ಹಾಗೂ ಹೊನ್ಯಾಳ್ ಕುಟುಂಬಸ್ಥರ ಗುಂಪುಗಳ ನಡುವೆ ರಸ್ತೆಯಲ್ಲೇ ಕಲ್ಲು ತೂರಾಟ ಆಗಿದೆ. ಕಲ್ಲು ತೂರಾಟದ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.