Menu

ರಾಜ್ಯದಲ್ಲಿ ಸ್ಟಾರ್ಟ್ ಅಪ್ ಹೂಡಿಕೆ 40% ಕುಸಿತ: ಐಟಿ-ಬಿಟಿ ಸಚಿವರ ಕಾರ್ಯವೈಖರಿ ಎಂದ ಆರ್‌ ಅಶೋಕ

R Ashoka

ಸಚಿವ ಪ್ರಿಯಾಂಕ್ ಖರ್ಗೆ ಅವರ ನಿರಾಸಕ್ತಿ, ನಿಷ್ಕ್ರಿಯತೆ ಪರಿಣಾಮವಾಗಿ ಇಂದು ನಮ್ಮ ರಾಜ್ಯದಲ್ಲಿ ಸ್ಟಾರ್ಟ್ ಅಪ್ ಹೂಡಿಕೆ 40% ಭಾರಿ ಕುಸಿತ ಕಂಡಿದೆ. ನವೋದ್ಯಮಗಳ ರಾಜಧಾನಿ ಎಂದು ಖ್ಯಾತಿ ಪಡೆದಿದ್ದ ಕರ್ನಾಟಕ ಮತ್ತು ಬೆಂಗಳೂರು ಇಂದು ಅನ್ಯರಾಜ್ಯಗಳ ಮುಂದೆ ತಲೆತಗ್ಗಿಸುವಂತಾಗಿದೆ. ಇದು ನಮ್ಮ ರಾಜ್ಯದ ಐಟಿ-ಬಿಟಿ ಸಚಿವರ ಕಾರ್ಯವೈಖರಿ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಕಿಡಿ ಕಾರಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್‌ ಮಾಡಿರುವ ಅವರು, ತಮಗೆ ಸಂಬಂಧಪಡದ ವಿಷಯಗಳಲ್ಲಿ ಅನಾವಶ್ಯಕವಾಗಿ ಮೂಗು ತೂರಿಸುವುದು, ಆರ್ ಎಸ್ಎಸ್ ನಿಷೇಧದ ಹಠ, ಸಿಕ್ಕಸಿಕ್ಕವರ ಮೇಲೆ ರಾಜಕೀಯ ಕುಚೋದ್ಯ – ಇವುಗಳಲ್ಲೇ ಸದಾ ಕಾಲಹರಣ ಮಾಡುವ @PriyankKharge ಅವರಿಗೆ ತಮ್ಮ ಕರ್ತವ್ಯದ ಅರಿವೂ ಇದ್ದಂತಿಲ್ಲ, ಆಸಕ್ತಿಯಂತೂ ಮೊದಲೇ ಇಲ್ಲ ಎಂದಿದ್ದಾರೆ.

ನಮ್ಮ ನಾಡಿನ ಯುವ ನವೋದ್ಯಮಿಗಳಿಗೆ, ಹೂಡಿಕೆದಾರರಿಗೆ ಅವರ ಭವಿಷ್ಯದ ಬಗ್ಗೆ ಚಿಂತಿಸುವ, ರಾಜ್ಯದ ನವೋದ್ಯಮ ಪರಿಸರ ವ್ಯವಸ್ಥೆ ಬೆಳೆಸುವ ಒಬ್ಬ ಕ್ರಿಯಾಶೀಲ ಐಟಿ ಸಚಿವ ಬೇಕೇ ಹೊರತು ಸದಾ ರಾಜಕೀಯ ಕುಚೋದ್ಯಮದಲ್ಲೇ ಟೈಂ ಪಾಸ್ ಮಾಡುವ Troll ಮಿನಿಸ್ಟರ್ ಅಲ್ಲ. ಒಟ್ಟಿನಲ್ಲಿ ನಮ್ಮ ರಾಜ್ಯಕ್ಕೆ ಹಿಡಿದಿರುವ ಈ @INCKarnataka ಎಂಬ ಗ್ರಹಣ ಬಿಡುವವರೆಗೂ ಕರ್ನಾಟಕದ ಅಭಿವೃದ್ಧಿ ಸಾಧ್ಯವಿಲ್ಲ ಎಂದು  ಬರೆದುಕೊಂಡಿದ್ದಾರೆ.

ಮತ್ತೊಂದು ಪೋಸ್ಟ್‌ ಮಾಡಿರುವ ಅಶೋಕ, ಜನರ ವಿರೋಧ, ತಜ್ಞರ ಅಭಿಪ್ರಾಯವನ್ನು ಲೆಕ್ಕಿಸದೆ ಪರಿಸರಕ್ಕೆ ಹಾನಿಯುಂಟು ಮಾಡುವ, ಜಲಮೂಲ ಅಂತರ್ಜಲಕ್ಕೆ ಕುತ್ತು ತರುವ ಅವೈಜ್ಞಾನಿಕ ಸುರಂಗ ರಸ್ತೆ ನಿರ್ಮಿಸಲು ಮುಂದಾಗಿರುವುದು ಯಾರನ್ನು ಖುಷಿಪಡಿಸುವ ಸಲುವಾಗಿ ಡಿಸಿಎಂ @DKShivakumar ಅವರೇ ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ನಿರ್ಮಿಸಲಾಗುತ್ತಿರುವ ₹18,500 ಕೋಟಿ ವೆಚ್ಚದ ಸುರಂಗ ರಸ್ತೆ ಡಿ.ಕೆ. ಶಿವಕುಮಾರ್ ಅವರು ತಮ್ಮ ಮುಖ್ಯಮಂತ್ರಿ ಕನಸು ಈಡೇರಿಸಿಕೊಳ್ಳಲು ಹೈಕಮಾಂಡ್ ಗೆ ಸಲ್ಲಿಸಬೇಕಾದ ಕಪ್ಪ ಕಾಣಿಕೆಗಾಗಿ ಮಾಡುತ್ತಿರುವ ಕಲೆಕ್ಷನ್‌ ಸ್ಕೀಮು!! ಇದರಲ್ಲಿ ಡೌಟೇ ಬೇಡ ಎಂದು ಕಿಡಿ ಕಾರಿದ್ದಾರೆ.

Related Posts

Leave a Reply

Your email address will not be published. Required fields are marked *