Menu

ಜಿಎಸ್‌ಟಿ 12% ಸ್ಲ್ಯಾಬ್‌ ರದ್ದಾಗಿ 5% ಸ್ಲ್ಯಾಬ್‌ಗೆ ಸೇರ್ಪಡೆ: ಮಧ್ಯಮ ವರ್ಗಕ್ಕೆ ನೆರವು?

ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆ ತರಲು ಚಿಂತನೆ ನಡೆಸಿದೆ ಎನ್ನಲಾಗಿದ್ದು, 12% ಸ್ಲ್ಯಾಬ್ ಅನ್ನು ರದ್ದು ಮಾಡಿ ಇದರಲ್ಲಿರುವ ವಸ್ತುಗಳ ಮೇಲಿನ ಜಿಎಸ್ಟಿಯನ್ನು 5% ಸ್ಲ್ಯಾಬ್‌ಗೆ ಸೇರ್ಪಡೆ ಮಾಡಲು ಸಿದ್ಧತೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.

12% ಜಿಎಸ್‌ಟಿ ಸ್ಲ್ಯಾಬ್‌ಗಳಲ್ಲಿ ಹೆಚ್ಚಿನ ವಸ್ತುಗಳು ಸಾಮಾನ್ಯ ನಾಗರಿಕರು ದೈನಂದಿನ ಜೀವನದಲ್ಲಿ ಬಳಸುವ ಸರಕುಗಳಾಗಿವೆ. ಸರ್ಕಾರವು 12% ಸ್ಲ್ಯಾಬ್ ಸಂಪೂರ್ಣ ರದ್ದುಗೊಳಿಸಲು ಮತ್ತು ಅಸ್ತಿತ್ವದಲ್ಲಿರುವ ಕಡಿಮೆ ಅಥವಾ ಹೆಚ್ಚಿನ ಸ್ಲ್ಯಾಬ್‌ಗಳಿಗೆ ವಸ್ತುಗಳನ್ನು ಮರುಹಂಚಿಕೆ ಮಾಡಲು ಆಯ್ಕೆ ಮಾಡಬಹುದು. ಮುಂಬರುವ 56 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಕೌನ್ಸಿಲ್ ಸಭೆ ಕರೆಯುವ ಮೊದಲು 15 ದಿನಗಳ ಸೂಚನೆ ಅಗತ್ಯವಿದೆ ಎಂಬುದು ಶಿಷ್ಟಾಚಾರ. ಮೂಲಗಳು ಈ ತಿಂಗಳ ಕೊನೆಯಲ್ಲಿ ಅಧಿವೇಶನ ನಡೆಯಬಹುದು ಎಂದು ತಿಳಿಸಿವೆ. ಕೇಂದ್ರ ಹಣಕಾಸು ಸಚಿವರು ಅಧ್ಯಕ್ಷತೆ ವಹಿಸಿರುವ ಮತ್ತು ರಾಜ್ಯ ಹಣಕಾಸು ಸಚಿವರನ್ನು ಒಳಗೊಂಡ ಜಿಎಸ್‌ಟಿ ಮಂಡಳಿಯು ತೆರಿಗೆ ದರಗಳಲ್ಲಿ ಬದಲಾವಣೆಗಳನ್ನು ಶಿಫಾರಸು ಮಾಡುವ ಅಧಿಕಾರವನ್ನು ಹೊಂದಿದೆ.

12% ಜಿಎಸ್‌ಟಿ ಸ್ಲ್ಯಾಬ್‌ನಲ್ಲಿರುವ ವಸ್ತುಗಳು: ಬೆಣ್ಣೆ, ಚೀಸ್, ತುಪ್ಪ, ಒಣಗಿದ ಹಣ್ಣುಗಳು, ಫ್ರೂಟ್ ಜಾಮ್, ಜೆಲ್ಲಿ, ಮಾರ್ಮಲೇಡ್, ಪಿಜ್ಜಾ ಬ್ರೆಡ್, ಪಾಸ್ತಾ, ಕಾರ್ನ್ ಫ್ಲೇಕ್ಸ್, ಫ್ರೂಟ್ ಜ್ಯೂಸ್, ತರಕಾರಿ ರಸ, ಖಾದ್ಯ ತೈಲ, ಟೂತ್‌ಪೇಸ್ಟ್, ಸಾಬೂನು, ಹೇರ್ ಆಯಿಲ್, ಶಾಂಪೂ, ಒಣಗಿದ ಮೆಹಂದಿ, ಅಗರಬತ್ತಿ, ಮೇಣದಬತ್ತಿಗಳು, ಪೊಟೊ ಫ್ರೇಮ್, ಗಾಜಿನ ಸಾಮಾನುಗಳು, ತಾಮ್ರದ ಒಡವೆಗಳು.1,000 ರೂ.ಗಿಂತ ಕಡಿಮೆ ಮೌಲ್ಯದ ಗಾರ್ಮೆಂಟ್ಸ್, ಔಷಧಿಗಳು, ಫರ್ನಿಚರ್, ಎಲೆಕ್ಟ್ರಿಕಲ್ ಟ್ರಾನ್ಸ್‌ಫಾರ್ಮರ್‌ಗಳು, ಸೈಕಲ್‌ಗಳು, ಆಟಿಕೆಗಳು, ಕ್ರೀಡಾ ಸಾಮಗ್ರಿಗಳು, ಕಾಗದದ ಉತ್ಪನ್ನಗಳು. ರೈಲ್ವೆ ಟಿಕೆಟ್‌ಗಳು, ಏರ್ ಟಿಕೆಟ್‌ಗಳು (ಎಕಾನಮಿ ಕ್ಲಾಸ್), ಕೆಲವು ಹೋಟೆಲ್‌ಗಳು, ಕೆಲವು ರೆಸ್ಟೋರೆಂಟ್ ಸೇವೆಗಳು, ಒಡವೆ ತಯಾರಿಕೆ ಸೇವೆಗಳು, ಚಲನಚಿತ್ರ ಟಿಕೆಟ್‌ಗಳು.  ಸರ್ಕಾರ ನಿರ್ಧಾರದಿಂದ ಈ ಎಲ್ಲ ವಸ್ತುಗಳು 12% ರಿಂದ 5% ಜಿಎಸ್‌ಟಿಗೆ ಇಳಿಕೆಯಾದರೆ ಬೆಲೆಯಲ್ಲಿ ಇಳಿಕೆಯಾಗಲಿದ್ದು, ಮಧ್ಯಮ ವರ್ಗದ ಜನರಿಗೆ ಹೊರೆ ಇಳಿಕೆ ಮಾಡಲಿದೆ.

Related Posts

Leave a Reply

Your email address will not be published. Required fields are marked *