ಇತಿಹಾಸದಲ್ಲೇ ಮೊದಲ ಬಾರಿಗೆ, ಸ್ವತಃ ಸನ್ಮಾನ್ಯ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಅಸಹಾಯಕರಾಗಿ ಸದನದಿಂದ ಹೊರನಡೆದು ಕಲಾಪವನ್ನು ಮುಂದೂಡಬೇಕಾಯಿತು. ಇದಕ್ಕೆ ಕಾರಣ @INCKarnataka ಸರ್ಕಾರದ ಸಚಿವರ ಅಹಂಕಾರ ಮತ್ತು ಬೇಜವಾಬ್ದಾರಿ. ಶಾಸಕರು ಕೇಳಿದ ಪ್ರಶ್ನೆಗಳಿಗೆ ಕನಿಷ್ಠ ಲಿಖಿತ ಉತ್ತರ ನೀಡಲೂ ಯೋಗ್ಯತೆ ಇಲ್ಲದ ಈ ನಾಲಾಯಕ್ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ಯಾವ ನೈತಿಕತೆ ಉಳಿದಿದೆ ಎಂದು ಪ್‌ರತಿಪಕ್ಷ ನಾಯಕ ಆರ್. ಅಶೋಕ ಪ್ರಶ್ನಿಸಿದ್ದಾರೆ.
ಕರ್ನಾಟಕದ ವಿಧಾನಸಭೆಯಲ್ಲಿ ನಡೆದ ಘಟನೆ ಕೇವಲ ನಾಚಿಕೆಗೇಡಿನ ಸಂಗತಿ ಮಾತ್ರವಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಜನಾದೇಶಕ್ಕೆ ಮಾಡಿದ ಘೋರ ಅಪಚಾರ ಎಂದ ಅವರು, ದೆಹಲಿಯಲ್ಲಿ “ಸಂವಿಧಾನ ಉಳಿಸಿ” ಎಂದು ಬೊಬ್ಬೆ ಹೊಡೆಯುವ @RahulGandhi ಅವರೇ, ಕರ್ನಾಟಕದಲ್ಲಿ ನಿಮ್ಮದೇ @INCKarnataka ಪಕ್ಷದ ಸಚಿವರು ವಿಧಾನಸಭೆಯ ಘನತೆಯನ್ನು ಕುಗ್ಗಿಸುತ್ತಿರುವುದು ನಿಮಗೆ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದ ಇತಿಹಾಸದಲ್ಲೇ ಕಪ್ಪು ಚುಕ್ಕೆ: ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವದ ಹತ್ಯೆ!
ಇತಿಹಾಸದಲ್ಲೇ ಮೊದಲ ಬಾರಿಗೆ, ಸ್ವತಃ ಸನ್ಮಾನ್ಯ ಸಭಾಧ್ಯಕ್ಷರಾದ ಶ್ರೀ ಯು.ಟಿ. ಖಾದರ್ ಅವರು ಅಸಹಾಯಕರಾಗಿ ಸದನದಿಂದ ಹೊರನಡೆದು ಕಲಾಪವನ್ನು ಮುಂದೂಡಬೇಕಾಯಿತು. ಇದಕ್ಕೆ ಕಾರಣ? @INCKarnataka ಸರ್ಕಾರದ ಸಚಿವರ ಅಹಂಕಾರ ಮತ್ತು ಬೇಜವಾಬ್ದಾರಿ.
ಶಾಸಕರು… pic.twitter.com/u1jfvxMl1l— R. Ashoka (@RAshokaBJP) March 16, 2026
ಶಾಸಕರ ಪ್ರಶ್ನೆಗಳಿಗೆ ಉತ್ತರಿಸುವ ಸೌಜನ್ಯ, ವ್ಯವಧಾನ ಇಲ್ಲದ ಅಸಮರ್ಥ ಮತ್ತು ಬೇಜವಾಬ್ದಾರಿ ಸಚಿವರು ಸಿದ್ದರಾಮಯ್ಯನವರ ಸಂಪುಟದಲ್ಲಿ ಇದ್ದಾರೆ. ಇದು ಕೇವಲ ಆಡಳಿತಾತ್ಮಕ ವೈಫಲ್ಯವಲ್ಲ. ಇದು ಸಿಎಂ @siddaramaiah ನವರಿಗೆ ಸಚಿವರ ಮೇಲೆ, ಅಧಿಕಾರಶಾಹಿ ಮೇಲೆ, ರಾಜ್ಯದ ಆಡಳಿತದ ಮೇಲೆ ಹಿಡಿತ ತಪ್ಪಿರುವುದಕ್ಕೆ ಸಾಕ್ಷಿ. ಸಚಿವರು, ಅಧಿಕಾರಿಗಳು ಶಾಸಕಾಂಗವನ್ನೇ ನಿರ್ಲಕ್ಷಿಸುತ್ತಿದ್ದಾರೆ ಎಂದರೆ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದರ್ಥ ಎಂದರು.
ಚುನಾಯಿತ ಜನಪ್ರತಿನಿಧಿಗಳಾದ ಶಾಸಕರ ಪ್ರಶ್ನೆ ಕೇಳುವ ಧ್ವನಿಯನ್ನು ಅಡಗಿಸುವುದು, ಸದನಕ್ಕೆ ಗೌರವ ನೀಡದಿರುವುದು – ಇದೇನಾ ಕಾಂಗ್ರೆಸ್ ಪಕ್ಷದ “ಕರ್ನಾಟಕ ಮಾಡೆಲ್ ಎಂದು ಪ್ರಶ್ನಿಸಿದ ಅಶೋಕ, ಸಂವಿಧಾನದ ಬಗ್ಗೆ ಪಾಠ ಮಾಡುವ ಕಾಂಗ್ರೆಸ್ ಪಕ್ಷದ ಅಸಲಿ ಮುಖವಾಡ ಇವತ್ತು ಕರ್ನಾಟಕದಲ್ಲಿ ಕಳಚಿ ಬಿದ್ದಿದೆ ಎಂದಿದ್ದಾರೆ.


