Menu

ಹಾಡು ಕದ್ದ ಆರೋಪ ಸಾಬೀತು: ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಗೆ 2 ಕೋಟಿ ರೂ. ದಂಡ!

ar rehaman

ಚೆನ್ನೈ: ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರಿಗೆ ಕೃತಿ ಚೌರ್ಯ ಮಾಡಿದ್ದಕ್ಕಾಗಿ 2 ಕೋಟಿ ರೂ. ದಂಡ ವಿಧಿಸಲಾಗಿದೆ.

ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್ -2’ ಸಿನಿಮಾದ ನಿರ್ಮಾಪಕರು ಮತ್ತು ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಬೇರೆ ಹಾಡೊಂದರ ರಾಗ, ಸಂಗೀತವನ್ನು ಕೃತಿಚೌರ್ಯ ಮಾಡಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2 ಕೋಟಿ ರೂಪಾಯಿ ದಂಡವನ್ನು ಹೈಕೋರ್ಟ್ ವಿಧಿಸಿದೆ.

‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾದಲ್ಲಿ ಜಯಂ ರವಿ ಮತ್ತು ಶೋಭಿತಾ ಧುಲಿಪಾಲ ನಡುವೆ ‘ವೀರ ರಾಜ ವೀರ’ ಎಂಬ ಹಾಡೊಂದು ಇದೆ. ಈ ಹಾಡಿನ ವಿರುದ್ಧ ಉಸ್ತಾದ್ ಫಯಾಜ್ ಡಾಗರ್ ಎಂಬುವರು ಹಾಡಿನ ವಿರುದ್ಧ ಕೃತಿಚೌರ್ಯದ ಆರೋಪದ ಮಾಡಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.

‘ವೀರ ರಾಜ ವೀರ’ ಹಾಡನ್ನು ಶಿವ ಸ್ತುತಿಯಿಂದ ಕದ್ದಿದ್ದು, ಶಿವ ಸ್ತುತಿಯನ್ನು ತಮ್ಮ ತಂದೆ ಮತ್ತು ತಮ್ಮ ಚಿಕ್ಕಪ್ಪನವರು ಕಂಪೋಸ್ ಮಾಡಿದ್ದರು, ಅದರ ರಾಗ, ಸಂಗೀತ, ಬೀಟ್​ಗಳನ್ನು ಸಹ ಯಾವುದೇ ಬದಲಾವಣೆ ಇಲ್ಲದೆ ಬಳಸಿಕೊಂಡಿದ್ದಾರೆ’ ಎಂದು ಉಸ್ತಾದ್ ಫಯಾಜ್ ಆರೋಪಿಸಿದ್ದಾರೆ.

ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಎಆರ್ ರೆಹಮಾನ್ ಅವರಿಗೆ 2 ಕೋಟಿ ರೂಪಾಯಿ ದಂಡವನ್ನು ಹೇರಿದೆ ಅದರ ಜೊತೆಗೆ ಕೋರ್ಟ್ ಕಪಾಲದ ಖರ್ಚಿಗೆ ಎರಡು ಲಕ್ಷ ರೂಪಾಯಿಯನ್ನು ಹೆಚ್ಚುವರಿಯಾಗಿ ಡಾಗರ್ ಕುಟುಂಬಕ್ಕೆ ನೀಡಬೇಕು ಎಂದಿದೆ. ಇದರ ಜೊತೆಗೆ ‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾ ಯಾವೆಲ್ಲ ವೇದಿಕೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆಯೋ ಅಲ್ಲೆಲ್ಲ ಮೂಲ ಹಾಡಿನ ಸಂಗೀತ ನಿರ್ದೇಶಕರ ಹೆಸರುಗಳನ್ನು ಸೇರಿಸುವಂತೆ ಹೈಕೋರ್ಟ್ ಆದೇಶ ನೀಡಿದೆ.

ಶಿವಸ್ತುತಿಯನ್ನು ಉಸ್ತಾದ್ ಫೈಯಾಜುದ್ದೀನ್ ಮತ್ತು ಉಸ್ತಾದ್ ಜಹೀರುದ್ಧೀನ್ ಅವರುಗಳು ಕಂಪೋಸ್ ಮಾಡಿದ್ದರು. ಮೂಲ ಹಾಡಿನ ಸಂಗೀತ, ಬೀಟ್, ರಾಗ, ಹಿನ್ನೆಲೆ ಸಂಗೀತವನ್ನು ಎಆರ್ ರೆಹಮಾನ್, ತಮ್ಮ ಹಾಡಿನಲ್ಲಿ ಯಥಾವತ್ತಾಗಿ ಬಳಸಿಕೊಂಡಿದ್ದಾರೆ.

ಮೂಲ ರಾಗ ಸಂಯೋಜಕರ ಹೆಸರನ್ನು ಸಹ ಉಲ್ಲೇಖಿಸಿಲ್ಲ. ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ಅನ್ನು ಮಣಿರತ್ನಂ ನಿರ್ದೇಶನ ಮಾಡಿದ್ದು, ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದರು. ಎರಡೂ ಭಾಗಗಳಿಗೆ ಅವರೇ ಸಂಗೀತ ನೀಡಿದ್ದು ಎರಡು ಭಾಗಗಳಲ್ಲಿ ಹಲವು ಹಾಡುಗಳನ್ನು ಅವರು ಕಂಪೋಸ್ ಮಾಡಿದ್ದರು. ಅದರಲ್ಲಿ ಒಂದು ಹಾಡಿನ ಮೇಲೆ ಕೃತಿ ಚೌರ್ಯದ ಆರೋಪ ಹೊರಿಸಲಾಗಿದೆ. ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Related Posts

Leave a Reply

Your email address will not be published. Required fields are marked *