Menu

ಅಂತ್ಯ ಸಂಸ್ಕಾರಕ್ಕೆ ಹಣ ಖರ್ಚಾಗುತ್ತೆ ಅಂತ ತಂದೆ ಶವ 2 ವರ್ಷ ಮುಚ್ಚಿಟ್ಟಿದ್ದ ಮಗ!

furnel

ಟೊಕಿಯೊ: ಅಂತ್ಯ ಸಂಸ್ಕಾರಕ್ಕೆ ಹಣವಿಲ್ಲದೇ ರೆಸ್ಟೋರೆಂಟ್ ಮಾಲೀಕ ತನ್ನ ತಂದೆಯ ಶವವನ್ನು ವಾರ್ಡ್ ರೋಬ್ ನಲ್ಲಿ 2 ವರ್ಷಗಳ ಕಾಲ ಮುಚ್ಚಿಟ್ಟಿದ್ದ ಘಟನೆ ಜಪಾನ್ ನಲ್ಲಿ ನಡೆದಿದೆ.

56 ವರ್ಷದ ನೊಬುಕಿನೊ ಸುಜುಕಿ 2023 ಜನವರಿಯಲ್ಲಿ ಮೃತಪಟ್ಟ 86 ವರ್ಷದ ಸುಜುಕಿ ಶವವನ್ನು ರೆಸ್ಟೋರೆಂಟ್ ನ ವಾರ್ಡ್ ರೋಬ್ ನಲ್ಲಿ ಮುಚ್ಚಿಟ್ಟಿದ್ದ.

ಕಳೆದ ಒಂದು ವಾರದಿಂದ ರೆಸ್ಟೋರೆಂಟ್ ಮುಚ್ಚಲಾಗಿದ್ದು, ಇದರಿಂದ ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ರೆಸ್ಟೋರೆಂಟ್ ವಾರ್ಡ್ ರೋಬ್ ನಲ್ಲಿ ಅಸ್ಥಿಪಂಜರ ಪತ್ತೆಯಾಗಿದೆ. ವಿಚಾರಣೆ ನಡೆಸಿದಾಗ ರೆಸ್ಟೋರೆಂಟ್ ಮಾಲೀಕನ ತಂದೆಯ ಶವ ಎಂಬುದು ತಿಳಿದುಬಂದಿದೆ.

ಪೊಲೀಸರು ಪುತ್ರ ನೊಬುಕಿನೊ ಸುಜುಕಿಯನ್ನು ವಿಚಾರಣೆಗೊಳಪಡಿಸಿದಾಗ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಅಂತ್ಯ ಸಂಸ್ಕಾರಕ್ಕೆ ಸಾಕಷ್ಟು ಹಣ ಖರ್ಚಾಗುತ್ತದೆ. ಅಷ್ಟೊಂದು ಖರರ್ಚು ಮಾಡಲು ಇಷ್ಟವಿಲ್ಲದೇ ಶವವನ್ನು ವಾರ್ಡ್ ರೋಮ್ ನಲ್ಲಿ ಇರಿಸಿದ್ದಾಗಿ ಹೇಳಿದ್ದಾನೆ.

ಆರಂಭದಲ್ಲಿ ತಂದೆಯ ಅಂತ್ಯಸಂಸ್ಕಾರ ಮಾಡಲು ಆಗದೇ ಇರುವುದಕ್ಕೆ ಆರಂಭದಲ್ಲಿ ಮಗನಿಗೆ ಕೀಳರಿಮೆ ಹೊಂದಿದ್ದ.  ಆದರೆ ನಂತರ ಇದರಿಂದ ಶೀಘ್ರ ಹೊರಗೆ ಬಂದ. ಪ್ರಕರಣದಲ್ಲಿ ಮಗನನ್ನು ಪೊಲೀಸರು ಬಂಧಿಸಿಲ್ಲ.

ಜಪಾನ್ ನಲ್ಲಿ ಅಂತ್ಯ ಸಂಸ್ಕಾರದ ವೆಚ್ಚ ದುಬಾರಿ ಆಗಿದ್ದು, 1.300 ದಶಲಕ್ಷ ಯೆನ್ (8900 ಡಾಲರ್) ವೆಚ್ಚವಾಗುತ್ತದೆ. ಕೋವಿಡ್ ನಂತರ ದರ ಕಡಿಮೆ ಆಗಿದ್ದು, ಶೇ.60ರಷ್ಟು ಕಡಿತಗೊಂಡಿದ್ದು, 1 ದಶಲಕ್ಷ ಯೆನ್ ಖರ್ಚಾಗುತ್ತದೆ ಎಂದು ವರದಿ ತಿಳಿಸಿದೆ.

Related Posts

Leave a Reply

Your email address will not be published. Required fields are marked *