ಚಿಕ್ಕಮಗಳೂರಿನ ಕಳಸದಲ್ಲಿ ಗುರುವಾರ 23 ವರ್ಷದ ಯುವಕ ಜೀಪ್ ಸಮೇತ ಭದ್ರಾ ನದಿಗೆ ಬಿದ್ದು ಮೃತಪಟ್ಟಿದ್ದು, ಇದರಿಂದ ಮನನೊಂದ ಆತನ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಗ ನದಿಗೆ ಬಿದ್ದು ಹೋಗಿರುವುದರಿಂದ ನೊಂದ ತಾಯಿ ರವಿಕಲಾ ಕಳಸ ತಾಲೂಕಿನ ಕೊಳಮಾಗೆ ಬಳಿ ಮನೆ ಹಿಂದಿನ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯುವಕ ಜೀಪ್ ಸಮೇತ ನದಿಗೆ ಬಿದ್ದಿದ್ದು, ಜೀಪ್ ಇನ್ನೂ ಮೇಲಕ್ಕೆ ಎತ್ತಿಲ್ಲ, ಆತನ ಮೃತದೇಹವೂ ಸಿಕ್ಕಿಲ್ಲ. ಅದಕ್ಕೂ ಮೊದಲೇ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.