Menu

ಬಿಜೆಪಿ ಪರ ಕೆಲಸ ಮಾಡುವ ಕೆಲಸ ಮಾಡುವವರು ಕಾಂಗ್ರೆಸ್ ನಲ್ಲಿ ಇದ್ದಾರೆ: ರಾಹುಲ್ ಗಾಂಧಿ

ಬಿಜೆಪಿ ಪರವಾಗಿ ಗೌಪ್ಯವಾಗಿ ಕೆಲಸ ಮಾಡುತ್ತಿರುವ ಮುಖಂಡರು ಕಾಂಗ್ರೆಸ್ ನಲ್ಲಿ ಇದ್ದಾರೆ. ಅಂತಹವರು ಸುಧಾರಿಸಿಕೊಳ್ಳದೇ ಇದ್ದರೆ ಪಕ್ಷದಿಂದ ಉಚ್ಛಾಟನೆ ಮಾಡಲಾಗುವುದು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.

ಅಹಮದಾಬಾದ್ ನಲ್ಲಿ ಶನಿವಾರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಗುಜರಾತ್ ನಲ್ಲಿ ಬಿಜೆಪಿ ಪರ ಕೆಲಸ ಮಾಡುವ ಕಾಂಗ್ರೆಸ್ ನಲ್ಲಿ ಕೆಲವರು ಇದ್ದಾರೆ. ಅಂತಹ 30-40 ಜನರನ್ನು ಪಕ್ಷದಿಂದ ಉಚ್ಛಾಟಿಸಲು ಹಿಂಜರಿಯುವುದಿಲ್ಲ ಎಂದರು.

ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಕೆಲವು ಮುಖಂಡರಿಂದಾಗಿ ಗುಜರಾತ್ ನಲ್ಲಿ ಕಾಂಗ್ರೆಸ್ ದಶಕದಿಂದ ಅಧಿಕಾರಕ್ಕೆ ಬರಲು ಆಗುತ್ತಿಲ್ಲ. ಈಗಾಗಲೇ ೪೦ ಜನರನ್ನು ಪಕ್ಷದಿಂದ ಹೊರಹಾಕಲಾಗಿದೆ ಎಂದರು.

ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಎರಡು ರೀತಿಯ ನಾಯಕರು ಇದ್ದಾರೆ. ಕೆಲವರು ಜನರ ಜೊತೆ ನೇರ ಸಂಪರ್ಕ ಹೊಂದಿದ್ದರೆ, ಇನ್ನೊಂದು ಗುಂಪು ಜನರಿಂದ ಅಂತರ ಕಾಯ್ದುಕೊಂಡಿದೆ ಎಂದು ರಾಹುಲ್ ಹೇಳಿದರು.

ನಾವು ಗುಜರಾತ್ ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದರೆ ಎರಡು ಗುಂಪುಗಳನ್ನಾಗಿ ಪಕ್ಷವನ್ನು ವಿಂಗಡಿಸಬೇಕು. ಒಂದು ಗುಂಪಿನಲ್ಲಿ ಇರುವ 10ರಿಂದ 40 ಜನರನ್ನು ಹೊರಹಾಕಬೇಕು ಅಂದರೆ ಅದಕ್ಕೂ ಪಕ್ಷ ಸಿದ್ಧವಿದೆ ಎಂದು ಅವರು ಸ್ಪಷ್ಟ ಸಂದೇಶ ನೀಡಿದರು.

ಬಿಜೆಪಿ ಪರ ಕೆಲಸ ಮಾಡುತ್ತಿರುವವರು ಆ ಪಕ್ಷಕ್ಕೆ ಹೋಗಿ ಬಹಿರಂಗವಾಗಿ ಕೆಲಸ ಮಾಡಲಿ. ಹೀಗೆ ಕದ್ದುಮುಚ್ಚಿ ಕೆಲಸ ಮಾಡುವುದರಿಂದ ನಿಮಗೆ ಆ ಪಕ್ಷದಲ್ಲಾಗಲಿ, ಇಲ್ಲಾಗಲಿ ಯಾವುದೇ ಹುದ್ದೆ ದೊರೆಯುವುದಿಲ್ಲ. ನಿಮ್ಮನ್ನು ಬಳಸಿಕೊಂಡ ನಂತರ ಬಿಜೆಪಿ ಎಸೆಯುತ್ತಾರೆ ಎಂದು ರಾಹುಲ್ ಹೇಳಿದರು.

’ನಾನು ನಮ್ಮ ಜವಾಬ್ದಾರಿ ಅರಿತು ಎಲ್ಲಿಯವರೆಗೆ ಕೆಲಸ ಮಾಡುವುದಿಲ್ಲವೋ ಅಲ್ಲಿಯವರೆಗೆ ಜನರು ನಮ್ಮನ್ನು ಆಯ್ಕೆ ಮಾಡುವುದಿಲ್ಲ. ಮೊದಲು ಜನರ ವಿಶ್ವಾಸ ಪಡೆಯುವ ಕೆಲಸ ಮಾಡಿ ಎಂದು ಅವರು ಕರೆ ನೀಡಿದರು.

Related Posts

Leave a Reply

Your email address will not be published. Required fields are marked *