Menu

ಸೋಮಣ್ಣ, ನಿರಾಣಿ ಬಿಜೆಪಿ ಅಧ್ಯಕ್ಷರಾಗಲಿ: ಬಸನಗೌಡ ಪಾಟೀಲ್ ಯತ್ನಾಳ್

ವಿಜಯಪುರ: ಕೇಂದ್ರ ಸಚಿವ ವಿ. ಸೋಮಣ್ಣ ಮತ್ತು ಮಾಜಿ ಸಚಿವ ಮುರುಗೇಶ್ ನಿರಾಣಿ ಬಿಜೆಪಿ ರಾಜ್ಯಾಧ್ಯಕ್ಷರಾಗಲಿ. ವಿಜಯೇಂದ್ರ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಯಾರ ಹೆಸರನ್ನು ಶಿಫಾರಸು ಮಾಡುತ್ತೇನೋ ಅವರಿಗೆ ಆ ಸ್ಥಾನ ನೀಡುವುದಿಲ್ಲ. ಇವರು ಯತ್ನಾಳ್ ಗಿರಾಕಿಗಳು ಅಂತ ಆ ಸ್ಥಾನ ಕೊಡಲ್ಲ ಎಂದರು.

ಬಿಜೆಪಿಯ ರಾಜ್ಯಾಧ್ಯಕ್ಷನಾಗಿ ಬಿವೈ ವಿಜಯೇಂದ್ರರನ್ನೇ ಮುಂದುವರಿಸಿದರೆ ತಾನು ಬಿಜೆಪಿಗೆ ವಾಪಸ್ಸು ಹೋಗುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮುರುಗೇಶ್ ನಿರಾಣಿಯವರು ತನ್ನ ಬಗ್ಗೆ ಧೋರಣೆ ಬದಲಾಯಿಸಿರುವ ಬಗ್ಗೆ ಯತ್ನಾಳ್ ಹೆಚ್ಚು ಮಾತಾಡಲಿಲ್ಲ. ನಿರಾಣಿ ಮನೆಯಲ್ಲಿನ ಮದುವೆ ಕಾರ್ಯ್ರಮ ಮತ್ತು ಬಿಎಸ್ ಯಡಿಯೂರಪ್ಪನವರ ಮೊಮ್ಮಗನ ಮದುವೆ-ಎರಡಕ್ಕೂ ತಾನು ಹೋಗಲಿಲ್ಲ ಎಂದು ಅವರು ಹೇಳಿದರು.

ಒಮ್ಮೆ ಮನಸ್ಸು ಮುರಿದುಕೊಂಡ ಮೇಲೆ ಮುಗೀತು, ಪಕ್ಷಕ್ಕೆ ಯಾರು ರಾಜ್ಯಾಧ್ಯಕ್ಷರಾಗಬೇಕೆಂದು ತಾನು ಹೇಳೂದು ಇಲ್ಲ, ಒಂದು ವೇಳೆ ನಾನು ಹೇಳಿದ್ದೇಯಾದರೆ ಬಿಜೆಪಿ ನಾಯಕರು ಅವರನ್ನು ಟಾರ್ಗೆಟ್ ಮಾಡುತ್ತಾರೆ ಎಂದು ಯತ್ನಾಳ್ ಹೇಳಿದರು.

ಇದೇ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಶಾಸಕರು ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ನಡೆಸಲಾಗುತ್ತಿರುವ ತಂತ್ರ ಇದು ಎಂದು ಅವರು ಅಭಿಪ್ರಾಯಪಟ್ಟರು.

Related Posts

Leave a Reply

Your email address will not be published. Required fields are marked *