ಅನುಮತಿ ಪಡೆಯದ ಬೆಟ್ಟಿಂಗ್ ಆ್ಯಪ್ ಬಗ್ಗೆ ಪ್ರಮೋಟ್ ಮಾಡಿದ ಕಿರುತರೆ ನಟಿಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾನ್ಯತೆ ಪಡೆಯದ ಬೆಟ್ಟಿಂಗ್ ಆ್ಯಪ್ ಗಳ ಪ್ರಮೋಟ್ ಮಾಡಿ ಕಿರುತರೆ ನಟಿಯರು ಹಾಗೂ ಸೋನು ಶ್ರೀನಿವಾಸ್ ಗೌಡ, ದೀಪಕ್ ಗೌಡ, ವರುಣ್ ಅರಾದ್ಯ, ದಚ್ಚು ಸೇರಿದಂತೆ ರೀಲ್ಸ್ ಸ್ಟಾರ್ಸ್ ಗಳು ಪೊಲೀಸ್ ವಿಚಾರಣೆ ಎದುರಿಸು ವಂತಾಗಿದೆ.
ನೂರಕ್ಕು ಹೆಚ್ಚು ಕಿರುತರೆ ನಟ ನಟಿಯರು, ರೀಲ್ಸ್ ಸ್ಟಾರ್ಸ್‌ಗಳನ್ನು ಈ ಹಿಂದೆ ನಟಿ ತಮನ್ನಾ ಗೆ ಇಡಿ ಡ್ರಿಲ್ ಮಾಡಿದ ರೀತಿ ಸೈಬರ್ ಪೊಲೀಸರು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಐಪಿಎಲ್ ಬೆಟ್ಟಿಂಗ್ ಹೆಸರಲ್ಲಿ ಜನರಿಗೆ ವಂಚಿಸುವ ಜಾಹೀರಾತಿನ ಬಗ್ಗೆ ಸ್ಪಷ್ಟನೆ ಕೊಡುವಂತೆ ನೋಟಿಸ್ ನಲ್ಲಿ ಕೇಳಲಾಗಿದೆ.
ರೀಲ್ಸ್ ಸ್ಟಾರ್ ಗಳು , ಕಿರುತರೆ ನಟಿಯರು ಇನ್ ಸ್ಟಾ ಗ್ರಾಂ ಪೇಜ್ ಗಳಲ್ಲಿ ಐಪಿಎಲ್ ಬೆಟ್ಟಿಂಗ್ ಸಂಬಂದ ಜಾಹೀರಾತು ಬಿತ್ತರಿಸಿದ್ದರು. ಈ ಬಗ್ಗೆ ಸೈಬರ್ ಪೊಲೀಸರಿಗೆ ವಕೀಲರೊಬ್ಬರಿಂದ ದೂರು ಸಲ್ಲಿಕೆಯಾಗಿದೆ. ಈ ದೂರಿನ ಆಧಾರದ ಮೇಲೆ ಸೋಶಿಲ್ ಮೀಡಿಯಾ ಪೇಜ್‌ಗಳನ್ನ ಪರಿಶೀಲನೆ ನಡೆಸಿದ ಸೈಬರ್ ಪೊಲೀಸರು ನೋಟಿಸ್ ಕೊಟ್ಟು ವಿಚಾರಣೆ ಬರುವಂತೆ ಸೂಚನೆ ನೀಡಿದ್ದಾರೆ.