ಕನ್ನಡ ಸಾರಸ್ವತ ಲೋಕದ ಧ್ರುವ ನಕ್ಷತ್ರ, ಹಿರಿಯ ಸಾಹಿತಿ ಎಸ್. ಎಲ್. ಭೈರಪ್ಪ ಅವರು ಬುಧವಾರ ಮಧ್ಯಾಹ್ನ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಸಾವನ್ನಪ್ಪಿದ್ದಾರೆ. ನಾಳೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಪಾರ್ಥೀವ ಶರೀರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಹಾಸನ ಜಿಲ್ಲೆಯ ಸಂತೇಶಿವರದಲ್ಲಿ ಜನಿಸಿದ್ದ ಭೈರಪ್ಪ ಅವರ ಸಾಹಿತ್ಯಯಾತ್ರೆ ಸುಮಾರು ಆರು ದಶಕಗಳಷ್ಟು ವಿಶಾಲವಾಗಿದೆ. ಭೈರಪ್ಪರು ಕಾದಂಬರಿ, ವಿಮರ್ಶೆ, ಪ್ರಬಂಧ ಹಾಗೂ ಆತ್ಮಕಥನ ಸಾಹಿತ್ಯದಲ್ಲಿ ತಮ್ಮದೇ ಆದ ವಿಶಿಷ್ಟ ಗುರುತು ಮೂಡಿಸಿದ್ದಾರೆ. ಓದುಗರ ಮನಸ್ಸನ್ನು ತಲುಪಿದ ಭೈರಪ್ಪರ ಕೃತಿಗಳು ಕನ್ನಡದ ಗಡಿಗಳನ್ನು ದಾಟಿ ಹಲವು ಭಾಷೆಗಳಿಗೆ ಅನುವಾದಗೊಂಡು ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದಿವೆ. ಭೈರಪ್ಪ ಅವರು ಬರೆದಿದ್ದ ಪ್ರಸಿದ್ಧ ಕಾದಂಬರಿಗಳು ಯಾವುವು, ಅವರ ಯಾವೆಲ್ಲಾ ಕಾದಂಬರಿಗಳು ದೃಶ್ಯರೂಪ ಪಡೆದುಕೊಂಡಿದ್ದವು? ಇಲ್ಲಿದೆ ಮಾಹಿತಿ
ಭೈರಪ್ಪನವರ ಪ್ರಸಿದ್ಧ ಕಾದಂಬರಿಗಳು
•ಭೀಮಕಾಯ (1958)
•ಬೆಳಕು ಮೂಡಿತು (1959)
•ಧರ್ಮಶ್ರೀ (1961)
•ದೂರ ಸರಿದರು (1962)
•ಮತದಾನ (1965)
•ವಂಶವೃಕ್ಷ (1965)
•ಜಲಪಾತ (1967)
•ನಾಯಿ ನೆರಳು (1968)
•ತಬ್ಬಲಿಯು ನೀನಾದೆ ಮಗನೇ (1968)
•ಗೃಹಭಂಗ (1970)
•ನಿರಾಕರಣ (1971)
•ಗ್ರಹಣ (1972)
•ದಾಟು (1973)
•ಅನ್ವೇಷಣ (1976)
•ಪರ್ವ (1979)
•ನೆಲೆ (1983)
•ಸಾಕ್ಷಿ (1986)
•ಅಂಚು (1990)
•ತಂತು (1993)
•ಸಾರ್ಥ (1998)
•ಮಂದ್ರ (2001)
•ಆವರಣ (2007)
•ಕವಲು (2010)
•ಯಾನ (2014)
•ಉತ್ತರಕಾಂಡ (2017)
ಆತ್ಮಕಥನ
•ಭಿತ್ತಿ (1996)
ವಿಮರ್ಶೆ, ಪ್ರಬಂಧ ಮತ್ತು ತತ್ತ್ವಚಿಂತನೆ
•ಸತ್ಯ ಮತ್ತು ಸೌಂದರ್ಯ (1966)
•ಸಾಹಿತ್ಯ ಮತ್ತು ಪ್ರತೀಕ (1967)
•ಕಥೆ ಮತ್ತು ಕಥಾವಸ್ತು (1969)
•ನಾನು ಏಕೆ ಬರೆಯುತ್ತೇನೆ? (1980)
•ಸಂದರ್ಭ: ಸಂವಾದ (2011)
ಸಿನಿಮಾಗಳಾದ ಕಾದಂಬರಿಗಳು
ವಂಶವೃಕ್ಷ (1972)
ತಬ್ಬಲಿಯು ನೀನಾದೆ ಮಗನೆ (1977)
ಮತದಾನ (2001)
ನಾಯಿ ನೆರಳು (2006)
ಎಸ್ ಎಲ್ ಭೈರಪ್ಪ ಅವರ ‘ಗೃಹಭಂಗ’ ಕಾದಂಬರಿ ಧಾರಾವಾಹಿ ರೂಪದಲ್ಲಿ ಹೊರಬಂದಿದೆ.