ಲಿಂಗಸುಗೂರು ಪುರಸಭೆ ವ್ಯಾಪ್ತಿಯಲ್ಲಿ ಬರುವ ಕಸಬಾಲಿಂಗಸುಗೂರು ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿಗೆ ಸಿದ್ದಪ್ಪ ಬೀರಪ್ಪ (6) ಎಂಬ ವರ್ಷದ ಮಗು ಮೃತಪಟ್ಟಿದೆ.
ಬಾಲಕ ಸಂಜೆ ಬಯಲು ಬಹಿರ್ದೆಸೆಗೆ ಹೋದಾಗ ಐದಾರು ಬೀದಿ ನಾಯಿಗಳ ಹಿಂಡು ದಾಳಿ ಮಾಡಿದೆ. ಪುರಸಭೆ ಅಧಿಕಾರಿಗಳು ಬೀದಿ ನಾಯಿಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳದೆ ಇರುವ ಕಾರಣ ಬಾಲಕ ಬಲಿಯಾಗಿರುವುದಾಗಿ ಪೋಷಕರು, ಸಂಬಂಧಿಕರು ಆರೋಪಿಸಿದ್ದಾರೆ.