ಧರ್ಮಸ್ಥಳದಲ್ಲಿ ಸೌಜನ್ಯ ಕೊಲೆಗೆ ಸಂಬಂಧಿಸಿದಂತೆ ಆಕೆಯ ಕುಟುಂಬಸ್ಥರು ಯಾರ ವಿರುದ್ಧ ಆರೋಪ ಮಾಡಿದ್ದಾರೋ ಆ ವ್ಯಕ್ತಿಗಳಾದ ಧೀರಜ್ ಕೆಲ್ಲಾ, ಮಲ್ಲಿಕ್ ಜೈನ್, ಉದಯ್ ಜೈನ್‌ಗೆ ಎಸ್‌ಐಟಿ ಬುಲಾವ್ ನೀಡಿದೆ.
ಪ್ರಕರಣದ ಆರೋಪಿಯಾಗಿ ಹೆಸರು ಕೇಳಿ ಬಂದಿದ್ದ ಉದಯ್ ಜೈನ್ ಎಸ್‌ಐಟಿ ಸೂಚನೆಯಂತೆ ಬೆಳ್ತಂಗಡಿ ಕಚೇರಿಗೆ ಹಾಜರಾಗಿದ್ದಾರೆ. ನಾನು ಯಾವುದೇ ವಿಚಾರಣೆಗೆ ಸಿದ್ಧನಿದ್ದೇನೆ, ಸತ್ಯ ಹೇಳೋರಿಗೆ ಹೆದರಿಕೆ ಇಲ್ಲ, ಸೌಜನ್ಯ ಕೊಲೆ ವಿಚಾರದಲ್ಲಿ ನನ್ನ ಬ್ರೈನ್ ಮ್ಯಾಪಿಂಗ್ ಮಾಡಿದ್ದಾರೆ, ಸೌಜನ್ಯ ತಾಯಿಯ ಮೇಲೆ ನಮಗೆ ಗೌರವ ಇದೆ, ಅವರಿಗೆ ಹೇಳಿಕೊಟ್ಟಿದ್ದು ತಿಮರೋಡಿ, ಆಮೇಲೆ ಗಿರೀಶ್ ಮಟ್ಟಣ್ಣನವರ್ ಬಂದಿರುವುದು ಎಂದು ಮಾಧ್ಯಮವೊಂದಕ್ಕೆ ಉದಯ್ ಜೈನ್ ತಿಳಿಸಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿಗೆ ಪೊಲೀಸ್, ಇಡಿ, ಸಿಬಿಐ, ಎಸ್‌ಐಟಿ ಮೇಲೆ ನಂಬಿಕೆ ಇಲ್ಲ, ಈ ಬುರುಡೆ ಪ್ರಕರಣ ಧರ್ಮಸ್ಥಳದ ಹೆಸರು ಹಾಳು ಮಾಡಲು ನಡೆದ ಷಡ್ಯಂತ್ರ., ಸೌಜನ್ಯ ಕುಟುಂಬಸ್ಥರು ನಮ್ಮನ್ನು ಬಾಣವಾಗಿ ಬಳಸುತ್ತಿದ್ದಾರೆ. ಸಿಬಿಐ ತನಿಖೆಗೂ ನಾವು ಸಂಪೂರ್ಣ ಒಳಗಾಗಿದ್ದೇವೆ ಎಂದಿದ್ದಾರೆ.
ಸೌಜನ್ಯ ತಾಯಿ ಎಸ್ ಟಿಗೆ ಕೊಟ್ಟ ದೂರು ಅಥವಾ ಚಿನ್ನಯ್ಯ ನೀಡಿದ ಹೇಳಿಕೆಯ ಕಾರಣಕ್ಕೆ ವಿಚಾರಣೆಗೆ ನನ್ನ ಕರೆದಿರಬಹುದು, ಬುರುಡೆ ಪ್ರಕರಣದ ದಿಕ್ಕು ಬದಲಿಸುವ ಹುನ್ನಾರ ಇದು ಎಂದು ಉದಯ್ ಜೈನ್ ಹೇಳಿದ್ದಾರೆ.