ಧರ್ಮಸ್ಥಳದಲ್ಲಿ ಶವಗಳ ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳು ಬುಧವಾರ 13ರ ಬದಲು 11ಎ ಸ್ಥಳದಲ್ಲಿ ಶೋಧಕಾರ್ಯ ನಡೆಸಿದೆ.
ಧರ್ಮಸ್ಥಳದಲ್ಲಿ ನೇತ್ರಾವತಿ ನದಿಯ ಸಮೀಪದಲ್ಲಿ ಎಸ್ ಐಟಿ ಶೋಧ ಕಾರ್ಯ 8ನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾರ 13 ಹಾಗೂ ಕೊನೆಯ ಪಾಯಿಂಟ್ ಬದಲು 14ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯ ನಡೆಸಿದೆ.
ಬಂಗ್ಲೆಗುಡದಲ್ಲಿ ಈ ಹಿಂದೆ ದಿಢೀರನೆ ನಡೆಸಿದ ಶೋಧಕಾರ್ಯದ ವೇಳೆ ಪತ್ತೆಯಾದ ಅಸ್ಥಿಪಂಜರದ 140 ಮೂಳೆ ತುಂಡುಗಳ ಜಾಗವನ್ನು 14ನೇ ಪಾಯಿಂಟ್ ಎಂದು ಗುರುತಿಸಲಾಗಿದ್ದು, ಇದಕ್ಕೆ 11ಎ ಪಾಯಿಂಟ್ ಎಂದು ಎಸ್ ಐಟಿ ಗುರುತಿಸಿದೆ.
11ಎ ಪಾಯಿಂಟ್ ನಲ್ಲಿ ಶೋಧ ಕಾರ್ಯ ಆರಂಭಗೊಂಡಿದ್ದು, ಡಿಜಿಪಿ ಅನುಚೇತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಲ್ಲಿನ ಶೋಧ ಕಾರ್ಯ ಪೂರ್ಣಗೊಳಿಸಿದ ನಂತರ 13ನೇ ಪಾಯಿಂಟ್ ನಲ್ಲಿ ಶೋಧ ನಡೆಸಲು ಎಸ್ ಐಟಿ ತೀರ್ಮಾನಿಸಲಾಗಿದೆ.