Menu

ಅರಸೀಕೆರೆಯಲ್ಲಿ ಒಂದೇ ದಿನ ಹೃದಯಾಘಾತದಿಂದ ಉಸಿರು ಚೆಲ್ಲಿದ ಅತ್ತಿಗೆ,ನಾದಿನಿ

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ  ಅತ್ತಿಗೆ ಮತ್ತು ನಾದಿನಿ ಒಂದೇ ದಿನ ಹೃದಯಾಘಾತಕ್ಕೊಳಗಾಗಿ ಮೃತಪಟಟ್ಟಿದ್ದಾರೆ.  ಅರಸೀಕೆರೆ ತಾಲೂಕು ಗಂಗಾಮತಸ್ಥ ಸಂಘದ ಅಧ್ಯಕ್ಷರಾದ ಕೇಶವಮೂರ್ತಿ ಅವರ ಸಹೋದರಿ ಜಾವಗಲ್ ಗ್ರಾಮದ ಪಿಎಸಿಎಸ್ ಹಾಲಿ ನಿರ್ದೇಶಕಿ ಹಾಗೂ ಮಾಜಿ ಅಧ್ಯಕ್ಷೆ, ಗ್ರಾ.ಪಂ ಮಾಜಿ ಸದಸ್ಯೆ ವೈ.ಡಿ ಸಾವಿತ್ರಮ್ಮ (64) ತವರೂರು ಯಳವಾರೆ ಗ್ರಾಮದ ಮಗಳ ಮನೆಯಲ್ಲಿ ಹೃದಯಾಘಾತದಿಂದ ಅಸು ನೀಗಿದ್ದರು.

ಮೃತ ವೈ.ಡಿ ಸಾವಿತ್ರಮ್ಮ  ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಯಳವಾರೆ ಗ್ರಾಮದಿಂದ ಜಾವಗಲ್ ಗ್ರಾಮಕ್ಕೆ ತೆರಳುತ್ತಿದ್ದ ಕೇಶವಮೂರ್ತಿಯವರ ಪತ್ನಿ ನಾಗರತ್ನಮ್ಮ (67) ಮಾರ್ಗ ಮಧ್ಯೆ  ತೀವ್ರ ಹೃದಯಾಘಾತಕ್ಕೆ ಒಳಗಾಗಿ ಪ್ರಾಣಪಕ್ಷಿ ಹಾರಿ ಹೋಗಿದೆ.

ಒಂದೇ ದಿನ ಅತ್ತಿಗೆ ಮತ್ತು ನಾದಿನಿಯ ಸಾವು ಎರಡೂ ಕುಟುಂಬಸ್ಥರಿಗೆ ತೀವ್ರ ಅಘಾತ ತರುವುದರ ಜೊತೆಗೆ ಅತೀವ ನೋವು ಹಾಗೂ ದುಃಖ ಉಂಟು ಮಾಡಿದೆ.  ಮೃತ ವೈ.ಡಿ ಸಾವಿತ್ರಮ್ಮ ಅವರಿಗೆ ಮಗ ಮತ್ತು ಮಗಳಿದ್ದು, ಅಂತ್ಯಕ್ರಿಯೆಯು ಜಾವಗಲ್ ಗ್ರಾಮದಲ್ಲಿ ನೆರವೇರಿತು.  ನಾಗರತ್ನಮ್ಮ ಅವರಿಗೆ  ಪತಿ, ಮೂವರು ಪುತ್ರರು ಮತ್ತು ಇಬ್ಬರು ಹೆಣ್ಣುಮಕ್ಕಳಿದ್ದು, ಯಳವಾರೆ ಗ್ರಾಮದಲ್ಲಿ ನಡೆಯಿತು.

Related Posts

Leave a Reply

Your email address will not be published. Required fields are marked *