ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿರುವ ಭಾರತ ವಾಯುಪಡೆ ನಡೆಸಿರುವ ಭಯೋತ್ಪಾದಕರ ತಾಣಗಳ ಮೇಲಿನ ದಾಳಿ ” ಆಪರೇಷನ್ ಸಿಂಧೂರ್” ಪಾಕ್‌ನಲ್ಲಿ ಗೂಗಲ್ ಟ್ರೆಂಡ್ ಆಗಿದೆ. ಅಲ್ಲಿನ ಜನತೆ ಸಿಂಧೂರ್ ಪದದ ಅರ್ಥವೇನು ಎಂದು ಹುಡುಕಾಟ ನಡೆಸುತ್ತಿದ್ದಾರೆ.
ಗೂಗಲ್‌ನಲ್ಲಿ ವಾಯುದಾಳಿ, ಭಾರತೀಯ ಸೇನೆ, ಭಾರತ ಮತ್ತು ಆಪರೇಷನ್ ಸಿಂಧೂರದ ಬಗ್ಗೆ ಪಾಕಿಸ್ತಾನಿಗಳು ತೀವ್ರ ಹುಡುಕಾಟ ನಡೆಸಿದ್ದಾರೆ. ʻಸಿಂಧೂರʼದ ಬಗ್ಗೆ ತಿಳಿದುಕೊಳ್ಳಲು ಕಾತುರರಾಗಿದ್ದಾರೆ. ಆಪರೇಷನ್ ಸಿಂಧೂರ್, ಇಂಡಿಯಾ ಆಪರೇಷನ್ ಸಿಂಧೂರ್, ಸಿಂಧೂರ್ ಅಟ್ಯಾಕ್, ವಾಟ್ ಈಸ್ ಆಪರೇಷನ್ ಸಿಂಧೂರ್… ಹೀಗೆ ಸರ್ಚಿಂಗ್ ಮಾಡುತ್ತಿದ್ದಾರೆ. ಇದರೊಂದಿಗೆ ಪಾಕಿಸ್ತಾನ ಸೇನೆಯ ಮುಂದಿನ ಕಾರ್ಯಾಚರಣೆಯ ಬಗ್ಗೆಯೂ ಹುಡುಕಾಡುತ್ತಿರುವುದು ಗೂಗಲ್ ಟ್ರೆಂಡ್ಸ್‌ನಲ್ಲಿ ಕಾಣಿಸುತ್ತಿವೆ.
ಸಿಂಧೂರ ಎಂಬ ಪದವು ಭಾರತೀಯರಲ್ಲಿ ಶುಭಕರ, ಶಕ್ತಿ, ರಕ್ಷಣೆ, ಸಮೃದ್ಧಿ, ಸೌಭಾಗ್ಯ, ಶಕ್ತಿ ದೇವತೆ ಪಾರ್ವತಿ, ದುರ್ಗಾ ಶಕ್ತಿಯ ಸಂಕೇತದ ಜೊತೆಗೆ ಸೇನೆಯ ಧೈರ್ಯ, ತ್ಯಾಗ, ಶೌರ್ಯ ಮತ್ತು ದೇಶವನ್ನು ರಕ್ಷಿಸುವ ಸಂಕಲ್ಪದ ದ್ಯೋತಕವೆಂಬ ನಂಬಿಕೆಯೂ ಇದೆ.
ಪಹಲ್ಗಾಮ್‌ನಲ್ಲಿ 26 ಮಹಿಳೆಯರ ಸಿಂಧೂರ ಅಳಿಸಿದ ಉಗ್ರರ ದಾಳಿಗೆ ಭಾರತ ನಡೆಸಿದ ಪ್ರತೀಕಾರ ಇದಾಗಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ಭಾರತೀಯ ಸೇನೆ ನಡೆಸಿರುವ ಪ್ರತೀಕಾರದ ದಾಳಿಯಲ್ಲಿ 100 ಉಗ್ರರು ಸಾವನ್ನಪ್ಪಿದ್ದಾರೆ. ಜೈಶ್ ಎ ಮೊಹಮ್ಮದ್, ಲಷ್ಕರ್ ಎ ತೈಬಾ (ಎಲ್‌ಇಟಿ) ಮತ್ತು ಇಜ್ಬುಲ್ ಮುಜಾಹಿದ್ದೀನ್ ಉಗ್ರರ ಪ್ರಧಾನ ಕಚೇರಿಗಳನ್ನು ಧ್ವಂಸಗೊಳಿಸಲಾಗಿದೆ.