21 ಮೋಟಾರ್ ಸೈಕಲ್ ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸಿ,ಮಾಲೀಕರಿಗೆ ಮುಟ್ಟಿಸುವ ಕೆಲಸ ಸಿಂಧನೂರಿನ ಪೊಲೀಸರು ಮಾಡುತ್ತಿದ್ದಾರೆ, ಇವರ ಕೆಲಸ ಶ್ಲಾಘನೀಯ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಪುಟ್ಟ ಮಾದಯ್ಯ ಹೇಳಿದರು.
ನಗರದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಳಗನೂರ್ ಪೊಲೀಸ್ ಠಾಣೆಯ ಪಿಎಸ್ಐ ಎರಿಯಪ್ಪ ಹಾಗೂ ಅವರ ತಂಡದವರು ಕ್ರಿಯಾಶೀಲರಾಗಿ ಬೈಕ್ ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ರಾಗಲಪರ್ವಿ ಗ್ರಾಮದಲ್ಲಿ ಮಾರ್ಚ್ 22 ರಂದು ಒಂದು ಬೈಕ್ ಕಳ್ಳತನ ಆಗಿತ್ತು, ಅದರ ಮಾಲೀಕರಾದ ಬಸವ ಪ್ರಕಾಶ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಬಳಗನೂರು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ, 21 ಬೈಕ್ ಕಳ್ಳತನ ಮಾಡಿರುವ ಆರೋಪಿ ಉದಯ ನಾಗೇಶ್ ಅವರನ್ನು ಬಂಧಿಸಲಾಗಿದೆ, ಇನ್ನುಳಿದ ಆರೋಪಿಗಳನ್ನು ವಿತರಣೆಯಲ್ಲಿ ಒಳಪಡಿಸಿದ್ದಾರೆ ಎಂದರು.
ಅಕ್ರಮ ಮರಳು ಸಾಗಣೆ ಹಾಗೂ ಜೂಜಾಟಗಳಿಗೆ ತಕ್ಷಣವೇ ಕ್ರಮ: ಅಕ್ರಮ ಮರಳು ಮಾರಾಟ ಮಾಡುವರ ವಿರುದ್ಧ ಹಾಗೂ ನಂಬರ್ ಪ್ಲೇಟ್ ಇಲ್ಲದೆ ವಾಹನ ಚಲಾಯಿಸುವವರ ವಿರುದ್ಧ ಮತ್ತು ಜೂಜಾಟ ಆಡುವರ ವಿರುದ್ಧ ತಕ್ಷಣವೇ ಕ್ರಮ ಜರುಗಿಸಲಾಗುತ್ತದೆ, ಯಾರೂ ಕಾನೂನು ವಿರುದ್ಧ ಹೋಗಬಾರದು ಪ್ರತಿಯೊಬ್ಬರು ಕಾನೂನಿಗೆ ಗೌರವ ಕೊಡುವ ಕೆಲಸ ಮಾಡಬೇಕು ಎಂದರು.
ಡ್ರಗ್ಸ್‌ಗೆ ಕಡಿವಾಣ: ಮಾದಕ ವಸ್ತುಗಳಿಗೆ ಯಾರೂ ಬಲಿಯಾಗಬಾರದು, ಇತ್ತೀಚಿಗೆ ಸಿಂಧನೂರಲ್ಲಿ ಡ್ರಗ್ಸ್ ಇಂಜೆಕ್ಷನ್ ಕೊಡುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ, ಇದರ ಬಗ್ಗೆ ಕೂಡಲೇ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಕಠಿಣ ಕ್ರಮ ಜರುಗಿಸುವಂತೆ ಹಾಗೂ ಮಾರಾಟಗಾರರ ಬಂಧಿಸಲು ಪೊಲೀಸ್ ಅಧಿಕಾರಿಗಳಿಗೆ ತಿಳಿಸಲಾಗುತ್ತದೆ ಎಂದರು.
ಹೆಲ್ಮೆಟ್ ಧರಿಸಿ, ಜೀವ ಉಳಿಸಿಕೊಳ್ಳಿ: ಪ್ರತಿಯೊಬ್ಬರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಕೊಂಡು ಬೈಕ್ ಚಲಾಯಿಸಬೇಕು,ಇತ್ತೀಚೆಗೆ ಹೆಲ್ಮೆಟ್ ಧರಿಸದೆ ಇದ್ದದ್ದಕ್ಕೆ ಅನೇಕ ಅಪಘಾತಗಳು, ಸಾವು ಸಂಭವಿಸಿವೆ. ಪ್ರತಿಯೊಬ್ಬರು ಹೆಲ್ಮೆಟ್ ಧರಿಸಿ ಮೋಟಾರ್ ಸೈಕಲ್ ಚಲಾಯಿಸಬೇಕು. ಇಲ್ಲವಾದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. .