ಮೈಸೂರು: ಐದು ವರ್ಷ ಪೂರ್ಣಾವಧಿ ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆಯಲಿದ್ದಾರೆಂಬ ಯತೀಂದ್ರ ಹೇಳಿ ಅವರ ವೈಯುಕ್ತಿಕ ಹೇಳಿಕೆಯಾಗಿದೆ. ನಮ್ಮಲ್ಲಿ ಹೈಕಮಾಂಡ ಹೇಳುವವರೆಗೂ ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆಯುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಮೈಸೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಯತೀಂದ್ರ ಅವರು ಅವರಿಗಿರೂವ ಮಾಹಿತಿ ಮೇರೆಗೆ ಮಾತನಾಡಿರಬಹುದು. ಆದರೆ, ನಮ್ಮಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದೆ. ಹೈಕಮಾಂಡ್ ಒಂದು ವೇಳೆ ನಾಳೆಯೇ ಬದಲಾವಣೆ ಮಾಡಿದರೆ ಬದಲಾಗಬಹುದು, ಮುಂದುವರೆಸಿದರೆ ಮುಂದುವರೆಯಲು ಬಹುದಾಗಿದೆ. ಹೀಗಾಗಿ ಹೈಕಮಾಂಡ್ ಅಂತಿಮವಾಗಿ ನಿರ್ಧಾರ ಕೈಗೊಳ್ಳಲಿದೆ ಎಂದರು.
ನನ್ನ ಗಮನಕ್ಕೆ ಬಂದಂತೆ ಎಲ್ಲಿಯೂ ಸಿಎಂ ಅಧಿಕಾರ ಹಂಚಿಕೆಯ ಪ್ರಸ್ತಾಪವೇ ನಡೆದಿಲ್ಲ. ಅಂತಹ ಪ್ರಸ್ತಾಪವೇ ಇಲ್ಲ ಎಂದ ಮೇಲೆ ಬದಲಾವಣೆ ಪ್ರಶ್ನೆಗಳೇ ಇಲ್ಲ. ಸಿದ್ದರಾಮಯ್ಯ ಅವರನ್ನು ಸಿಎಂ ಎಂದು ಹೈಕಮಾಂಡ್ ಘೋಷಣೆ ಮಾಡಿದೆ. ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದೆ. ಸಮಯ ಸಂದರ್ಭ ನೋಡಿ ಬದಲಾವಣೆ ಮಾಡಬೇಕಾ ಅಥವಾ ಮುಂದುವರೆಸುವ ಬಗ್ಗೆಯಾಗಲಿ ತೀರ್ಮಾನಿಸಲಿದೆ ಎಂದು ತಿಳಿಸಿದರು.
ಸಿಎಂ ಸ್ಥಾನ ಕುರಿತು ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಇದೆಲ್ಲಾ ಕೇವಲಮಾದ್ಯಮಗಳ ಸೃಷ್ಠಿಯಾಗಿದೆ. ಹಾಗೊಂದು ವೇಳೆಅಧಿಕಾರ ಗೊಂದಲ ಇದ್ದಿದ್ದರೆ, ಸಿ ಎಲ್ ಪಿ ಸಭೆಯಲ್ಲಿ ಶಾಸಕರು ಕೇಳುತ್ತಿದ್ದರು. ಯಾರು ಕೂಡ ಆ ಬಗ್ಗೆ ಮಾತನಾಡಿಲ್ಲ ಹಾಗಾಗಿ ಯಾವ ಗೊಂದಲ ಇಲ್ಲ ಎಂದು ಅರ್ಥ ಎಂದರು.
ಇನ್ನೂ ಅನೇಕರಿಗೆ ಹಾಗೂ ಸ್ವತಃ ನನಗೆ ಕೆಲವು ಕಡೆ ಪರಮೇಶ್ವರ್ ಮುಂದಿನ ಸಿಎಂ ಎಂದು ಕಾರ್ಯಕರ್ತರು ಜೈ ಜೈ ಎನ್ನುತ್ತಾರೆ ಹಾಗೆ ಅಂದ ಕೂಡಲೇ ಸಿಎಂ ಆಗಲು ಆಗುತ್ತಾ.? ಅದೆಲ್ಲವನ್ನೂ ಹೈಕಮಾಂಡ್ ನಿರ್ಧಾರ ಮಾಡಬೇಕು. ನಾನು ಹೋದ ಮೇಲೆ ಇನ್ನೊಬ್ಬರ ಪರ ಜೈಕಾರ ಕೂಗುತ್ತಾರೆ. ಹೀಗಾಗಿ ಘೋಷಣೆಗಳಿಗೆ ಹೆಚ್ಚಿನ ಮಹತ್ವ ಕೊಡಬೇಕಾಗಿಲ್ಲ. ಇನ್ನೂ ಅಧಿಕಾರ ಹಂಚಿಕೆ ವಿಚಾರದಲ್ಲಿ ಎಲ್ಲಾ ಶಾಸಕರು ಮಾತನಾಡುತ್ತಿದ್ದಾರೆ. ಅವರವರ ಅಭಿಪ್ರಾಯ ಹೇಳುತ್ತಿದ್ದಾರೆ.ಆದರೆ ಅಂತಿಮವಾಗಿ ಪಕ್ಷದ ಹೈಕಮಾಂಡ್ ತಿರ್ಮಾನಿಸಲಿದೆ. ನಾನು ಸಿಎಂ ಆಗುವುದಕ್ಕೂ ಹೈಕಮಾಂಡ್ ತೀರ್ಮಾನಿಸಿದಾಗ ಎಂದು ತಮ್ಮ ಪರ ವಿವಿಧೆಡೆ ಘೋಷಣೆ ಕೂಗಿದ ಕುರಿತು ಸ್ಪಷ್ಟೀಕರಣ ನೀಡಿದರು.


