Menu

ಸಿದ್ದರಾಮಯ್ಯರಿಗೆ ಕಪಟ ಬುದ್ಧಿ ಇಲ್ಲ, ಶಿವಕುಮಾರ್‌ಗೆ ಸಿಎಂ ಸ್ಥಾನ ಖಚಿತ: ಹುಲಿಗೆಮ್ಮದೇವಿ ಆರಾಧಕಿ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಿಕೆ ಶಿವಕುಮಾರ್ ಅವರನ್ನು ತಮ್ಮನಂತೆ ನೋಡಿಕೊಂಡಿದ್ದಾರೆ. ಸಿದ್ದರಾಮಯ್ಯನವರ ಹತ್ತಿರ ಕಪಟ ಬುದ್ಧಿ ಇಲ್ಲ. ಹೀಗಾಗಿ ಅವರು ಖುಷಿಯಿಂದಲೇ ಶಿವಕುಮಾರ್‌ಗೆ ಸ್ಥಾನ ಬಿಟ್ಟುಕೊಡುತ್ತಾರೆ, ಶಿವಕುಮಾರ್‌ ಸಿಎಂ ಆಗುವುದು ಖಚಿತ ಎಂದು ಗದುಗಿನ ದೇವಿ ಆರಾಧಕಿ ಭೈಲಮ್ಮ ಬಾಳಮಣ್ಣವರ ಭವಿಷ್ಯ ಹೇಳಿದ್ದಾರೆ.

ಕೆಲವೊಂದಿಷ್ಟು ಜನರು ನಾನು ಸಿಎಂ ಆಗಬೇಕು, ನೀನು ಆಗಬೇಕು ಎಂದು ಕಾಯ್ದು ಕುಳಿತಿದ್ದಾರೆ. ಇಬ್ಬರ ಕಚ್ಚಾಟದಲ್ಲಿ ಮೂರನೆಯವರಿಗೆ ಲಾಭ ಆಗುವುದೆಂದು ಭಾವಿಸಿದ್ದಾರೆ, ಆದರೆ ಅದ್ಯಾವುದೂ ನಡೆಯುವುದಿಲ್ಲ, ಅವರು ಯಾರೂ ಸಿಎಂ ಆಗುವುದಿಲ್ಲ. ಡಿಕೆ ಶಿವಕುಮಾರ್ ಅವರೇ ಸಿಎಂ ಆಗುವುದು ಎಂದು ಭೈಲಮ್ಮ ತಿಳಿಸಿದ್ದಾರೆ.

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಮುಖ್ಯಮಂತ್ರಿ ಸ್ಥಾನದ ಹಂಚಿಕೆಯ ವಿವಾದ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕಾವು ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ಗದುಗಿನ ದೇವಿ ಆರಾಧಕಿ ಭೈಲಮ್ಮ ಬಾಳಮಣ್ಣವರ ಎಂಬವರು ಡಿಕೆ ಶಿವಕುಮಾರ್ ಅವರು ಸಿಎಂ ಆಗುತ್ತಾರೆ ಎಂದು ಹೇಳಿರುವ ಭವಿಷ್ಯವಾಣಿ‌ ರಾಜ್ಯದಲ್ಲಿ ಭಾರಿ ಚರ್ಚೆಯನ್ನು ಹುಟ್ಟು ಹಾಕಿದೆ.

ಹುಲಿಗೆಮ್ಮದೇವಿ ಆರಾಧಕಿ, ಗದುಗಿನ ರಾಚೋಟೇಶ್ವರ ನಗರದ ನಿವಾಸಿ ಭೈಲಮ್ಮ ಬಾಳಮಣ್ಣವರ ಅವರು, ದೇವರ ಗದ್ದುಗೆ ಹಾಕಿ, ದೇವಿ ಕೊಡವನ್ನು ಎತ್ತುವ ಮೂಲಕ ಭವಿಷ್ಯ ಹೇಳಿದ್ದಾರೆ. “ಹುಲ್ಲಿಗೆಮ್ಮ ದೇವಿ ಹೇಳಿದ್ದಾಳೆ, ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ. ಎರಡು ತಿಂಗಳ ಒಳಗಾಗಿ ಅವರು ಸಿಎಂ ಆಗುತ್ತಾರೆ. ಅವರು ಮುಂದಿನ ಎರಡೂವರೆ ವರ್ಷ ರಾಜ್ಯವನ್ನು ಆಳುತ್ತಾರೆ ” ಎಂದು ಭೈಲಮ್ಮ ಬಾಳಮಣ್ಣವರ ಹೇಳಿದ್ದಾರೆ.

ಹುಲಿಗೆಮ್ಮದೇವಿ ನೀಡಿರುವ ಭವಿಷ್ಯವಾಣಿ ಸುಳ್ಳು ಆಗುವುದಿಲ್ಲ ಎಂದು ಭೈಲಮ್ಮ ಬಾಳಮಣ್ಣವರ ದೃಢವಾಗಿ ಹೇಳಿದ್ದಾರೆ. ಸಿಎಂ ಆದ ಬಳಿಕ ಶಿವಕುಮಾರ್ ದೇವಿಯನ್ನು ನೆನಪಿಸಿಕೊಂಡು ಮುಂದಿನ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *