ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ 16ನೇ ಬಾರಿ ಬಜೆಟ್ ಮಂಡಿಸುವ ಮೂಲಕ ಇತಿಹಾಸ ಬರೆದರೆ, ಅತ್ಯಂತ ದೀರ್ಘಾವಧಿಯ ಬಜೆಟ್ ಮಂಡಿಸಿ ಮತ್ತೊಂದು ದಾಖಲೆ ಬರೆದಿದ್ದಾರೆ.
ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ಬುಧವಾರ ಬಜೆಟ್ ಮಂಡಿಸಿದರು. ಈ ಬಾರಿ 3 ಗಂಟೆ 30 ನಿಮಿಷಗಳ ಕಾಲ ಬಜೆಟ್ ಮಂಡಿಸುವ ಮೂಲಕ ಅತೀ ಹೆಚ್ಚು ಅವಧಿಯ ಬಜೆಟ್ ಮಂಡಿಸಿದರು.
ಬುಧವಾರ 10.16 ಕ್ಕೆ ಬಜೆಟ್ ಮಂಡಿಸಲು ಆರಂಭಿಸಿದ ಸಿದ್ದರಾಮಯ್ಯ ಮಧ್ಯಾಹ್ನ 1.42 ಕ್ಕೆ ಮುಗಿಸಿದರು. ಈ ಮೂಲಕ ಸುಮರು 3 ಗಂಟೆ 30 ನಿಮಿಷಗಳ ಕಾಲ ಬಜೆಟ್ ಮಂಡಿಸಿದರು.
ಈ ಹಿಂದೆ ಸಿದ್ದರಾಮಯ್ಯ ೩ ಗಂಟೆ 20 ನಿಮಿಷ ಬಜೆಟ್ ಮಂಡಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಈ ಬಾರಿ ಮಂಡಿ ನೋವಿನ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಸಿದ್ದರಾಮಯ್ಯ ಕುಳಿತುಕೊಂಡೇ ಸುದೀರ್ಘ ಬಜೆಟ್ ಮಂಡಿಸಿದರು.
ಸಿದ್ದರಾಮಯ್ಯ ಈ ಬಾರಿ 4 ಲಕ್ಷ 9 ಸಾವಿರ ಕೋಟಿ ಬಜೆಟ್ ಮಂಡಿಸಿದ್ದು, ಇದರಲ್ಲ 1 ಲಕ್ಷ ಕೋಟಿ ರೂ. ಸಾಲ ತೋರಿಸಿದ್ದಾರೆ. ಇದುವರೆಗೆ ಮಂಡಿಸಿದ ಬಜೆಟ್ ಗಾತ್ರದಲ್ಲೇ ಈ ಬಾರಿ ಬಜೆಟ್ ಗಾತ್ರ ದೊಡ್ಡದಾಗಿದೆ. ಅಲ್ಲದೇ ಸಾಲದ ಪ್ರಮಣದಲ್ಲೂ ಏರಿಕೆಯಾಗಿದೆ.