ಗಗನಯಾತ್ರಿ ಶುಭಾಂಶು ಶುಕ್ಲ 18 ದಿನಗಳ ಐತಿಹಾಸಿಕ ಬಾಹ್ಯಕಾಶ ಯಾನ ಮುಗಿಸಿ ಯಶಸ್ವಿಯಾಗಿ ಧರೆಗಿಳಿದಿದ್ದಾರೆ.
ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಗೋದ ಫೆಸಿಫಿಕ್ ಸಾಗರದಲ್ಲಿ ಡ್ರ್ಯಾಗನ್ ನೌಕೆಯಲ್ಲಿ 22 ಗಂಟೆಗಳ ಪ್ರಯಾಣ ಮುಗಿಸಿ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆ 2 ನಿಮಿಷಕ್ಕೆ ಯಶಸ್ವಿಯಾಗಿ ಭೂಮಿ ಸ್ಪರ್ಶವಾಗಿದೆ.
ಗ್ರೇಸ್ ಹೆಸರಿನ ಸ್ಪೇಸ್ ಎಕ್ಸ್ ನೌಕೆಯಲ್ಲಿ ಜೂನ್ 14ರಂದು ಮಧ್ಯಾಹ್ನ ಭೂಮಿಗೆ ಮರಳುವ ಪ್ರಯಾಣ ಆರಂಭಿಸಿದ್ದ ನಾಲ್ವರು ಗಗನಯಾತ್ರಿಗಳ ತಂಡ ಯಶಸ್ವಿಯಾಗಿ ಭೂಮಿ ಸ್ಪರ್ಶಿಸಿದ್ದಾರೆ. ಈ ಮೂಲಕ ಭಾರತೀಯರ ಕನಸು ನನಸಾಗಿದೆ.
ಶುಭಾಂಶು ಶುಕ್ಲ ಅಂತಾರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣಕ್ಕೆ ಹೋಗಿ ಬಂದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಶುಭಾಂಶು ಶುಕ್ಲ ಹೊತ್ತ ನೌಕೆ ಯಶಸ್ವಿಯಾಗಿ ಭೂಮಿಗೆ ಸ್ಪರ್ಶ ಮಾಡುತ್ತಿದ್ದಂತೆ ಹೆತ್ತವರು ಹಾಗೂ ಇಸ್ರೊ ವಿಜ್ಞಾನಿಗಳು ಸಂಭ್ರಮ ಆಚರಿಸಿದರು.
ಬಾಹ್ಯಕಾಶ ನಿಲ್ದಾಣದಿಂದ ಭೂಮಿಯವರೆಗೆ 76 ಲಕ್ಷ ಕಿ.ಮೀ. ದೂರ ಪ್ರಯಾಣ ಮಾಡಿದ್ದು, 288 ಬಾರಿ ಭೂಮಿಯನ್ನು ಗಗನಯಾತ್ರಿಗಳು ಪ್ರದಕ್ಷಿಣೆ ಹಾಕಿದ್ದಾರೆ. ಬಾಹ್ಯಕಾಶ ನಿಲ್ದಾಣದಲ್ಲಿ ಇದ್ದ 18 ದಿನಗಳಲ್ಲಿ ಗಗನಯಾತ್ರಿಗಳ ತಂಡ 60 ಅಧ್ಯಯನ ನಡೆಸಿದ್ದು, ಬಾಹ್ಯಕಾಶ ಕೇಂದ್ರದಲ್ಲಿ ಮೊಳಕೆ ಹೊಡೆಯುವ ಬೆಳವಣಿಗೆ ನಡೆಸಿದ ಭಾರತ ಪರೀಕ್ಷೆ ಯಶಸ್ವಿಯಾಗಿದೆ.