Menu

ಶುಭಾಂಶು ಶುಕ್ಲಾ ಗಗನ ಯಾತ್ರೆ 5ನೇ ಬಾರಿ ಮುಂದೂಡಿಕೆ

isro

ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಕರೆದೊಯ್ಯುವ ಆಕ್ಸಿಯೋಮ್-4 ಮಿಷನ್ ಉಡಾವಣೆಯನ್ನು ಐದನೇ ಬಾರಿಗೆ ಜೂನ್ 22, 2025ಕ್ಕೆ ಮುಂದೂಡಲಾಗಿದೆ.

ಭಾರತ, ಹಂಗೇರಿ ಮತ್ತು ಪೋಲೆಂಡ್‌ನಿಂದ ಗಗನಯಾತ್ರಿಗಳನ್ನು ಒಳಗೊಂಡ ಈ ಮಿಷನ್ ಜೂನ್ 19 ರಂದು ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ನ ಫಾಲ್ಕನ್ ೯ ರಾಕೆಟ್‌ನಲ್ಲಿ ಉಡಾವಣೆಯಾಗಬೇಕಿತ್ತು.

ನಾಸಾ, ಆಕ್ಸಿಯೋಮ್ ಸ್ಪೇಸ್ ಮತ್ತು ಸ್ಪೇಸ್‌ಎಕ್ಸ್ ಈಗ ಜೂನ್ 22, 2025 ರ ಭಾನುವಾರದಂದು ಆಕ್ಸಿಯೋಮ್ ಮಿಷನ್ ೪ ಅನ್ನು ಉಡಾವಣೆ ಮಾಡುವ ಗುರಿಯನ್ನು ಹೊಂದಿವೆ” ಎಂದು ಆಕ್ಸಿಯೋಮ್ ಸ್ಪೇಸ್ ಹೇಳಿಕೆಯಲ್ಲಿ ತಿಳಿಸಿದೆ.

ಈ ಮಿಷನ್ ಮೂಲತಃ ಮೇ 29 ರಂದು ಉಡಾವಣೆಯಾಗಬೇಕಿತ್ತು, ಆದರೆ ಫಾಲ್ಕನ್ ೯ ರಾಕೆಟ್‌ನ ಸನ್ನದ್ಧತೆಯ ವಿಳಂಬ, ಹವಾಮಾನ ಪರಿಸ್ಥಿತಿಗಳು, ದ್ರವ ಆಮ್ಲಜನಕ ಸೋರಿಕೆ ಮತ್ತು ಐಎಸ್‌ಎಸ್‌ನ ಸೇವಾ ಮಾಡ್ಯೂಲ್‌ನ ದೋಷಗಳಿಂದಾಗಿ ಜೂನ್ 8, 10, 11 ಮತ್ತು ಈಗ ಜೂನ್ 22ಕ್ಕೆ ಮುಂದೂಡಲಾಗಿದೆ.

Related Posts

Leave a Reply

Your email address will not be published. Required fields are marked *