Menu

ಅಮ್ಯೂಸ್ ಮೆಂಟ್ ಪಾರ್ಕ್‌ಗೆ ಶಿವಸಮುದ್ರ ಸೂಕ್ತ ಸ್ಥಳ

ಮಂಡ್ಯ ಜಿಲ್ಲೆಯ  ವಿಶ್ವ ಪ್ರಸಿದ್ಧ ಕೃಷ್ಣರಾಜಸಾಗರ ಜಲಾಶಯ (ಕೆಆರ್‌ಎಸ್) ಹತ್ತಿರ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಿಸಲು ಸರ್ಕಾರ ಮುಂದಾಗಿದೆ. ಆದರೆ, ಮಂಡ್ಯ ರೈತ ಸಂಘ ಸರ್ಕಾರದ ಈ ನಿರ್ಧಾರ ವಿರೋಧ ಮಾಡುತ್ತಿದೆ. ರೈತರ ‘ಕನ್ನಂಬಾಡಿ ಕಟ್ಟೆ’ ಬಗ್ಗೆಯ ಕಾಳಜಿ ಸೂಕ್ತವಾಗಿದೆ.

ಸರ್ಕಾರ ಆ ಪಾರ್ಕ್ ಅನ್ನು ಮಳವಳ್ಳಿ ತಾಲೂಕಿನ ಶಿವಸಮುದ್ರ ಬಳಿ ಏಕೆ ನಿರ್ಮಿಸ ಬಾರದು? ಶಿವಸಮುದ್ರ ಎಂದೊಡನೆ ನನ್ನ ಬಾಲ್ಯದಲ್ಲಿ ಬಲ್ಬ್ ಎಂದೇ ಕರೆಯುತ್ತಿದ್ದ ಅದನ್ನು ನೋಡಿದ ನೆನಪು ಈಗಲೂ ಹೆಚ್ಚ ಹಸಿರಿನಂತೆ ಮನಸ್ಸಿನಲ್ಲಿ ಇದೆ. ಅಲ್ಲಿನ ಉದ್ಯಾನವನದಲ್ಲಿ ಸಹಪಾಠಿಗಳ ಜೊತೆ ತಿಂಡಿ ತಿಂದಿದ್ದು, ಸುಮಾರು 450 ಅಡಿ ಆಳದಲ್ಲಿ 1902ರಲ್ಲಿ ಅಂದಿನ ಮೈಸೂರಿನ ದಿವಾನರಾಗಿದ್ದ ಕೆ.ಶೇಷಾದ್ರಿ ಅಯ್ಯರ್ ನಿರ್ಮಿಸಿದ್ದ ಜಲವಿದ್ಯುತ್ ಸ್ಥಾವರ, ಅಲ್ಲಿನ ಜಲಪಾತ ನೋಡಿ ಖುಷಿ ಪಟ್ಟದ್ವಿ. ಹೌದು, ಅಂದು ಮಂಡ್ಯ ಜಿಯ ಗಡಿಭಾಗದಲ್ಲಿನ ಶಿವಸಮುದ್ರದಲ್ಲಿರುವ ಗಗನಚುಕ್ಕಿ ಜಲಪಾತ ತಾಣದ ಕಡೆ ಹೋಗಿ ಅಲ್ಲಿನ ಪ್ರಕೃತಿ ಸೌಂದರ್ಯದ ಜೊತೆಗೆ ಸುಮಾರು 300 ಅಡಿ ಆಳಕ್ಕೆ ಹಾಲ್ನೊರೆಯಂತೆ ಧುಮುಕುತ್ತಿದ್ದ ಜಲಧಾರೆ ನೋಡಿ ಕಣ್ಣು ತುಂಬಿಕೊಳ್ಳುತ್ತಿದ್ದರು. ಸುಮಾರು 450 ಅಡಿ ಆಳದಲ್ಲಿರುವ ಕೆ. ಶೇಷಾದ್ರಿಅಯ್ಯರ್ ಜಲವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಟ್ರ್ಯಾಲಿ ಮೂಲಕ ಕೆಳಗಿಳಿದು ನೋಡಿ ಪುಳಕಿತರಾಗುತ್ತಿದ್ದರು, ಅಲ್ಲಿನ ಉದ್ಯಾನವನ ದಲ್ಲಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ದೇಶ-ವಿದೇಶಿಯ ಪ್ರವಾಸಿಗರು ಕುಳಿತು ಆನಂದಪಡುತ್ತಿದ್ದರು.

ಕ್ರಮೇಣ ತಮಿಳುನಾಡಿನ ಎಲ್‌ಟಿಟಿಇ ಭಯೋತ್ಪಾದಕರ ಭಯದಿಂದಾಗಿ ಜಲವಿದ್ಯುತ್ ಕೇಂದ್ರಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಯಿತು. ಪರಿಣಾಮ ಪ್ರವಾಸಿಗರು ಅತ್ತ ಮುಖ ಮಾಡದೆ ಹೋದದ್ದು, ಅಲ್ಲಿನ ಉದ್ಯಾನವನಗಳ ನಿರ್ಲಕ್ಷಿಸಿ  ಅಲ್ಲಿನ ಅಭಿವೃದ್ಧಿ ಕಡೆಗಣನೆಯಿಂದ ಒಂದು ಕಾಲದಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಶಿವಸಮುದ್ರ ಪ್ರವಾಸಿ ಕೇಂದ್ರ ಇಂದು ಯಾರಿಗೂ ಬೇಡವಾಗಿದೆ. ಅಂದು ಪ್ರವಾಸಿಗರ ಸ್ವರ್ಗದಂತೆ ಕಾಣುತ್ತಿದ್ದದ್ದು ಇಂದು ಕಳೆಗುಂದಿದೆ.
ಇಲ್ಲಿನ ಗಡಿ ಭಾಗದ ಚಾಮರಾಜನಗರ  ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ದ್ವೀಪವಿದೆ. ಶ್ರೀರಂಗಪಟ್ಟಣ ಬಿಟ್ಟರೆ ಕಾವೇರಿ ನದಿಯಿಂದ ಉಂಟಾಗಿ ರುವ ಎರಡನೇ ದೊಡ್ಡ ದ್ವೀಪ. ಐತಿಹಾಸಿಕ ಹಿನ್ನೆಲೆಯ ಈ ದ್ವೀಪದಲ್ಲಿ ಹೊಯ್ಸಳರ ಕಾಲದ ಶ್ರೀರಂಗನಾಥಸ್ವಾಮಿ, ಸೋಮೇಶ್ವರ, ವೀರಭದ್ರಸ್ವಾಮಿ ಶಕ್ತಿ ದೇವತೆಯ ದೇಗುಲಗಳು, ಹಜರತ್ ಸೈಯದ್ ದರ್ಗಾ ಮೊದಲಾದವುಗಳು ಇವೆ. ಜೊತೆಗೆ ಭರಚುಕ್ಕಿ ಜಲಪಾತ ಪ್ರವಾಸಿಗರನ್ನು ತನ್ನ ಕಡೆ ಸಳೆಯುತ್ತದೆ. ಇದು ಸಹ ಧಾರ್ಮಿಕ ಹಾಗೂ ಪ್ರವಾಸ ಕೇಂದ್ರವಾಗಿದೆ. ಇಷ್ಟೆ ಕಥೆ ಹೇಳುವುದಕ್ಕೆ ಕಾರಣ, ಸರ್ಕಾರ ಕೆಆರ್‌ಎಸ್ ಬಳಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಿಸಲು ಮುಂದಾಗಿರುವುದನ್ನು ಬಿಟ್ಟು ಬ್ಲಫ್ ಎಂದೇ ಪ್ರಸಿದ್ಧಿ ಪಡೆದಿದ್ದ ಮಳವಳ್ಳಿ ತಾಲ್ಲೂಕಿನ ಶಿವಸಮುದ್ರ ಬಳಿ ಆ ಪಾರ್ಕ್ ಅನ್ನು ನಿರ್ಮಿಸಿದರೆ ಹಳೆಯ ವೈಭವ ಮರು ಕಳಿಸಿ ಅದು ಮತ್ತೆ ವಿಶ್ವವಿಖ್ಯಾತ ಪ್ರವಾಸಿ ಕೇಂದ್ರವಾಗಿ ಅಂದು ಹೊಸ ಲೋಕ ರೂಪುಗೊಳ್ಳುತ್ತದೆ.

ಅಮ್ಯೂಸ್ ಪಾರ್ಕ್‌ನಲ್ಲಿ ಎತ್ತರದ ಕಾವೇರಿ ಪ್ರತಿಮೆ ಸ್ಥಾಪಿಸುವ ಉzಶವಿದೆ. ಜಾಯಿಂಟ್ ವೀಲ್ ಮೊದಲಾದವನ್ನು ನಿರ್ಮಿಸಬೇಕಾದರೆ ಆಳವಾದ ಅಡಿಪಾಯ ಬೇಕಾಗುತ್ತದೆ. ಅದನ್ನು ಮಾಡುವಾಗ ಶತಮಾನದ ಅಂಚಿನಲ್ಲಿರುವ ಕನ್ನಂಬಾಡಿ ಕಟ್ಟೆಗೆ ಅಪಾಯ ತಪ್ಪಿದ್ದಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಮಿರ್ಜಾ ಇಸ್ಮಾಯಿಲ್ ಅವರ ಕಾಲದಲ್ಲಿ ನಿರ್ಮಿತವಾದ ಪಾರಂಪರಿಕ ಬೃಂದಾವನಕ್ಕೆ ಪೆಟ್ಟು ಬೀಳುತ್ತದೆ. ಬರೀ ಮಂಡ್ಯ ಜಿಯ ಜನತೆಗೆ ಮಾತ್ರವಲ್ಲ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಮುಂತಾದ ನಗರದ ನಾಗರಿಕರಿಗೆ ಕುಡಿಯುವ ನೀರು ಸಿಗಲು ಕಾರಣವಾದ ಕನ್ನಡಿಗರ ಜೀವನಾಡಿ ಕನ್ನಂಬಾಡಿ ಕಟ್ಟೆ ರಕ್ಷಣೆಯ ದೃಷ್ಟಿಯಿಂದ ಇಲ್ಲಿ ಪಾರ್ಕ್ ನಿರ್ಮಿಸುವುದು ಸೂಕ್ತವಲ್ಲ.

ಮಳವಳ್ಳಿ ತಾಲ್ಲೂಕಿನ ಬ್ಲಫ್ ಹತ್ತಿರ, ಗಗನಚುಕ್ಕಿ ಜಲಪಾತ ಹತ್ತಿರ ವಿಶಾಲವಾದ ಜಾಗವಿದೆ. ಕೊಳ್ಳೇಗಾಲ ತಾಲ್ಲೂಕಿನ ಶಿವನಸಮುದ್ರ ದ್ವೀಪ ಈ ಪರಿಸರದಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಿಸಿದರೆ, ಅಲ್ಲಿ ಒಂದು ಹೊಸ ಜಗತ್ತನ್ನೇ ಸೃಷ್ಟಿ ಮಾಡಬಹುದು. ಇದರಿಂದ ಅಲ್ಲಿನ ಪ್ರವಾಸೋದ್ಯಮದಿಂದ ಅಲ್ಲಿನ ರೈತರಿಗೆ, ಯುವಕರಿಗೆ ಉದ್ಯೋಗ ದೊರೆಯುತ್ತದೆ. ರಾಜ್ಯ ಸರ್ಕಾರ ಈ ಬಗ್ಗೆ ಚಿಂತನೆ ಮಾಡುವುದು ಸೂಕ್ತ.

– ಸಿ. ಸಿದ್ದರಾಜು ಆಲಕೆರೆ, ಮಂಡ್ಯ

Related Posts

Leave a Reply

Your email address will not be published. Required fields are marked *