Menu

ಛೂ ಮಂತರ್ ಹೇಳಲು ಜೀ ಕನ್ನಡ ಬರುತ್ತಿದ್ದಾರೆ ಶರಣ್!

choo mantar

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಇದೇ ಮೊದಲ ಬಾರಿಗೆ ಭಾನುವಾರ  ಮಧ್ಯಾಹ್ನ 3 ಗಂಟೆಗೆ ಶರಣ್ ಅಭಿನಯದ ‘ಛೂ ಮಂತರ್ ಸಿನಿಮಾ  ಪ್ರದರ್ಶನಗೊಳ್ಳಲಿದೆ.

ಡೈನಮೊ (ಶರಣ್), ಆರ್ ಜೆ (ಚಿಕ್ಕಣ್ಣ), ಆಕಾಂಕ್ಷಾ (ಅದಿತಿ) ಮತ್ತು ನಕುಲ್ ಛೂಮಂತರ್ ಆ್ಯಂಡ್ ಕಂಪನಿ ಎಂಬ ಘೋಸ್ಟ್ ಹಂಟರ್ ನಡೆಸುತ್ತಿರುತ್ತಾರೆ ಮತ್ತು ಇವರಿಗೆ ಆತ್ಮಗಳ ಭೇಟೆಯಾಡೋದು ಕೆಲಸವಾಗಿರುತ್ತದೆ. ಭಾರತದ ಟಾಪ್ 10 ಹಾಂಟೆಡ್ ಹೌಸ್ ಗಳ ಸಾಲಿಗೆ ಉತ್ತರಾಖಂಡದ ನೈನಿತಾಲ್ ನಲ್ಲಿರುವ ಮಾರ್ಗನ್ ಹೌಸ್ ಸೇರ್ಪಡೆಯಾಗಿರುವ ವಿಷಯ ತಿಳಿಯುತ್ತದೆ.

ಬ್ರಿಟಿಷರ ಕಾಲದ ನಿಧಿ ಇರುವ ಈ ಮಾರ್ಗನ್ ಹೌಸ್ ಗೆ ಹೋಗ್ತಾರೆ. ಹಾಸ್ಯದಿಂದ ಶುರುವಾಗುವ ಈ ಚಿತ್ರ ಅಲ್ಲಿ ನಿಜವಾಗಿಯೂ ದೆವ್ವದ ಕಾಟ ಇರುವುದು ತಿಳಿದು ಸೀರಿಯಸ್ ಟ್ವಿಸ್ಟ್ ಪಡೆಯುತ್ತದೆ.  ಆ ಮನೆಯಲ್ಲಿರುವ ಅತೃಪ್ತ ಆತ್ಮಗಳು ದೆವ್ವಗಳು ಇವರ ತಂಡಕ್ಕೆ ಹೇಗೆ ಕಾಟ ಕೊಡುತ್ತವೆ? ಡೈನಮೋ ಮತ್ತು ತಂಡ ಇದರಿಂದ ಹೇಗೆ ಹೊರಬರುತ್ತಾರೆ ಎನ್ನುವುದೇ ಈ ಚಿತ್ರದ ಕಥೆ.

ನಟ ಶರಣ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹಾರರ್ ಹಾಗು ಕಾಮಿಡಿ ಸಿನಿಮಾ  ‘ಛೂ ಮಂತರ್’ ಗೆ  ನವನೀತ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಟಿ ಅದಿತಿ ಪ್ರಭುದೇವ, ಚಿಕ್ಕಣ್ಣ, ಗುರುಕಿರಣ್, ಪ್ರಥಮ್, ಮೇಘನಾ ಗಾಂವ್ಕಾರ್, ರಜಿನಿ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಶರಣ್-ಚಿಕ್ಕಣ್ಣ ಜೋಡಿ ವೀಕ್ಷಕ ಪ್ರಭುಗಳಿಗೆ ಹಾಸ್ಯದ ಕಚಗುಳಿ ನೀಡುವುದರಲ್ಲಿ ಎರಡನೇ ಮಾತಿಲ್ಲ. ಹಾರರ್ ಕಥೆಯ ಜೊತೆಗೆ ಕಾಮಿಡಿ ಟಚ್ ಇರುವ ‘ಛೂ ಮಂತರ್’ ವೀಕ್ಷಕರಿಗೆ ಮನರಂಜನೆಯ ಹಬ್ಬವೇ ಸರಿ.

ಆತ್ಮಗಳ ಕಾಟದಿಂದ ಗೌತಮ್ ಮತ್ತು ತಂಡ ಹೇಗೆ ಹೊರಗೆ ಬರುತ್ತೆ ಅಥವಾ ಅಲ್ಲಿಯೇ ಸಿಕ್ಕಿ ಹಾಕಿಕೊಳ್ಳುತ್ತಾರಾ ಅಂತ ತಿಳ್ಕೊಳೋಕೆ ವೀಕ್ಷಿಸಿ ‘ಛೂ ಮಂತರ್’ ಭಾನುವಾರ  ಮಧ್ಯಾಹ್ನ 3 ಗಂಟೆಗೆ.

Related Posts

Leave a Reply

Your email address will not be published. Required fields are marked *