ಕನ್ನಡ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳ ಸಿನಿಮಾ ಹಾಗೂ ಕಿರುತೆರೆಗಳಲ್ಲಿ ನಟಿಸಿರುವ ನಟಿಗೆ ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ಅಂಗಗಳ ಫೋಟೊ ಕಳುಹಿಸಿದ್ದ ಕಾಮುಕನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಟೆಂಪ್ಲೆಟನ್ ಅಂಡ್ ಪಾರ್ಟನ್ ಕಂಪನಿಯಲ್ಲಿ ಡೆಲಿವರಿ ಮ್ಯಾನೇಜರ್ ಆಗಿರುವ ಕೇರಳ ಮೂಲದ ನವೀನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ನವೀನ್ ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಫ್ರೆಂಡ್ ಕಳುಹಿಸಿದ್ದ ಫ್ರೆಂಡ್ ರಿಕ್ವೆಸ್ಟ್ ಅನ್ನು 41 ವರ್ಷದ ನಟಿ ರಜಿನಿ ಸ್ವೀಕರಿಸದ ಕಾರಣ ಮೆಸೆಂಜರ್ ನಲ್ಲಿ ಪದೇಪದೆ ಮೆಸೇಜ್, ನಿಂದನೆ ಹಾಗೂ ಅಶ್ಲೀಲ ಕಮೆಂಟ್ ಹಾಗೂ ಖಾಸಗಿ ಅಂಗದ ಫೋಟೊ ಹಾಗೂ ವೀಡಿಯೋ ಕಳುಹಿಸಿ ಕಿರುಕುಳ ನೀಡುತ್ತಿದ್ದ.
ನಟಿ ನವೀನ್ ಅಕೌಂಟ್ ಬ್ಲಾಕ್ ಮಾಡಿದ್ದರಿಂದ ಮತ್ತೊಂದು ಖಾತೆಯಿಂದ ನವೀನ್ ಅಶ್ಲೀಲ ಸಂದೇಶಗಳನ್ನು ಕಳುಹಿಸುವುದನ್ನು ಮುಂದುವರಿಸಿದ್ದ. ನವೆಂಬರ್ 1ರಂದು ನವೀನ್ ಮತ್ತೆ ಸಂದೇಶ ಕಳುಹಿಸಿದ್ದರಿಂದ ಆತನ ಗುರುತು ಪತ್ತೆ ಹಚ್ಚಲು ಒಮ್ಮೆ ಭೇಟಿ ಮಾಡಿ ಬುದ್ದಿವಾದ ಕೂಡ ನಟಿ ಹೇಳಿದ್ದರು.
ಕೆಲವು ಸಮಯ ಸುಮ್ಮನಿದ್ದ ನವೀನ್ ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿದ್ದರಿಂದ ನೊಂದ ನಟಿ ಬೆಂಗಳೂರಿನ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ನವೀನ್ ನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದ ನಟಿ ರಜಿನಿ, ಸಾಕಷ್ಟು ಧಾರವಾಹಿಗಳಲ್ಲೂ ನಟಿಸಿದ್ದಾರೆ.


