ಗದಗ: ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಂಬುಲೆನ್ಸ್‌ನಲ್ಲಿಯೇ ಸಿಬ್ಬಂದಿಯೇ ಹೆರಿಗೆ ಮಾಡಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಜಿಲ್ಲೆಯ ಗಾವರವಾಡದಿಂದ ಜಿಮ್ಸ್ ಆಸ್ಪತ್ರೆ ತೆರಳೋ ಮಾರ್ಗ ಮಧ್ಯೆ ಹೆರಿಗೆ ಮಾಡಿಸಲಾಗಿದೆ. 108 ಅಂಬುಲೆನ್ಸ್ ನಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಕರೆದೊಯ್ಯಲಾಗಿತ್ತು.
ಮಾರ್ಗ ಮಧ್ಯೇ ಹೆರಿಗೆ ನೋವು ಜಾಸ್ತಿಯಾಗಿತ್ತು. ಹೀಗಾಗಿ ಅಂಬುಲೆನ್ಸ್ ನಲ್ಲೇ 108 ಸಿಬ್ಬಂದಿ ಬಸವರಾಜ ಕಂಬಳಿ ಹಾಗೂ ಮಹೇಶ ರಾಮಣ್ಣವರ ಅವರು ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ಚಿನ್ನವ್ವ ಸುಂಕದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ.
ಹೆಚ್ಚಿನ ಚಿಕಿತ್ಸೆಗೆ ಗದಗನ ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಆಂಬುಲೆನ್ಸ್ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.