ಬೆಂಗಳೂರಿನ ಹೊರವಲಯ ಆನೇಕಲ್‌ನಲ್ಲಿ ಕಂಟೈನರ್ ಚಾಲಕ ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದಿದ್ದು ಎರಡು ಮಂದಿ ಮೃತಪಟ್ಟಿದ್ದಾರೆ, ಐದಕ್ಕೂ ಹೆಚ್ಚು ಮಂದಿ ಗಂಬೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿಲ್ಲಿಸಿದ್ದ ವಾಹನ, ಚಲಿಸುತ್ತಿದ್ದ ವಾಹನಗಳ ಮೇಲೆ ಕಂಟೈನರ್ ಹರಿದಿದೆ. ವಾಹನಗಳಿಗೆ ಡಿಕ್ಕಿಯಾದರೂ ನಿಲ್ಲಿಸದೆ ತೆರಳಿದ ಚಾಲಕನನ್ನು ಪೊಲೀಸರು 14 ಕಿಲೋಮೀಟರ್ ಬೆನ್ನಟ್ಟಿದ್ದಾರೆ. ಅನೇಕಲ್ ಪಟ್ಟಣ ಸಮೀಪದ ಬೆಸ್ತಮಾನಹಳ್ಳಿಯಿಂದ ಚಂದಾಪುರದವರೆಗೆ ಅಪಘಾತ ನಡೆದಿದೆ. ಡಿಕ್ಕಿ ಹೊಡೆದ ಹೆಚ್ಚಿನ ವಾಹನಗಳು ಪಾರ್ಕ್ ಮಾಡಿದ್ದ ವಾಹನಗಳಾಗಿತ್ತು. ಜನ ಯಾರೂ ಇರದ ಕಾರಣ ಸಾವಿನ ನೋವಿನ ಸಂಖ್ಯೆ ತಗ್ಗಿದೆ.
ವಾಹನಗಳಿಗೆ ಡಿಕಕಿ ಹೊಡೆದು ಅತ ವೇಗದಿಂದ ಸಾಗುತ್ತಿದ್ದ ಕಂಟೈನರ್‌ನ್ನು ಪೊಲೀಸರು ಚೇಸ್ ಮಾಡಿದರೂ ಚಾಲಕ ನಿಲ್ಲಿಸಿರಲಿಲ್ಲ. ಹೊಸೂರು ಹೆದ್ದಾರಿ ಚಂದಾಪುರದಲ್ಲಿ ಸಾರ್ವಜನಿಕರು ಸತತವಾಗಿ ಕಲ್ಲು ತೂರಿದ ಕಾರಣ ಚಾಲಕ ಗಾಯಗೊಂಡು ವಾಹನ ನಿಲ್ಲಿಸಿದ್ದಾನೆ.
ಚಾಲಕನ ಹಿಡಿದು ಸಾರ್ವಜನಿಕರು ಬಡಿಗೆ, ಕಲ್ಲುಗಳಿಂದ ಹೊಡೆದಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಚಾಲಕನ ವಶಕ್ಕೆ ಪಡೆದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಚಾಲಕನನ್ನು ಆಸ್ಪತ್ರೆಗೆ ದಾಖ ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿ ಸಿಸಿಟಿವಿ ದೃಶ್ಯಗಳ ಪರಿಶೀಲನೆ ಕೈಗೊಂಡಿದ್ದಾರೆ. ಚಾಲಕನ ಹಿನ್ನಲೆ ಸೇರಿದಂತೆ ಮಾಹಿತಿಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.


