ಸ್ಮೈಲಿಂಗ್ ಬುದ್ದ ಖ್ಯಾತಿಯ ಹಿರಿಯ ಅಣು ವಿಜ್ಞಾನಿ ಆರ್.ಚಿದಂಬರಂ ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಆರ್.ಚಿದಂಬರಂ 1974 ಮತ್ತು 1998ರಲ್ಲಿ ಪೋರ್ಖಾಣು ಅಣು ಬಾಂಬ್ ಸ್ಫೋಟ ಪ್ರಯೋಗದ ಹಿಂದಿನ ಪ್ರಮುಖ ಪಾತ್ರ ವಹಿಸಿದ್ದರು.
ಭಾರತ ಅಣು ಆಯೋಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಚಿದಂಬರಂ ನಂತರ ಕೇಂದ್ರ ಸರ್ಕಾರದ ವಿಜ್ಞಾನದ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದರು.
ಭಾರತ ಅಣು ಸಾಮರ್ಥ್ಯ ಹೆಚ್ಚಿಸಿಕೊಳ್ಳುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಚಿದಂಬರಂ ಅವರ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಪದ್ಮ ವಿಭೂಷಣ್ ಪ್ರಶಸ್ತಿ ನೀಡಿ ಗೌರವಿಸಿದೆ.
ಭಾರತದಲ್ಲಿ ನಡೆದ 1974 ಮತ್ತು 1998ರ ಪೋರ್ಖಾಣ್ ಅಣು ಸ್ಫೋಟ ಪ್ರಯೋಗ ಯಶಸ್ಸಿನ ಹಿಂದೆ ಚಿದಂಬರಂ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ ದೇಶದಲ್ಲಿ ನಡೆದ ಎರಡೂ ಅಣು ಪ್ರಯೋಗದ ಹಿಂದೆ ಇವರು ಇದ್ದರು ಎಂಬುದು ಮಹತ್ವದ್ದಾಗಿದೆ.