ಹುಬ್ಬಳ್ಳಿ: ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕೇಂದ್ರ ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕರಾಗಿದ್ದ ಅನಂತ್ ಕುಮಾರ್ ಬಳಸಿದ ಪೀಠೋಪಕರಣಗಳ ಮ್ಯೂಸಿಯಂ ಏಪ್ರಿಲ್ 28ರಂದು ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ದೆಹಲಿಯ ಅನಂತಕುಮಾರ್ ನಿವಾಸದಲ್ಲಿ ಇರಿಸಲಾಗಿದ್ದ ಪೀಠೋಪಕರಣಗಳನ್ನು ಹುಬ್ಬಳ್ಳಿಗೆ ತಂದು ಸುಂದರ ಮ್ಯೂಸಿಯಂ ನಿರ್ಮಿಸಲಾಗಿದೆ.
ನೂರಾರು ನಾಯಕರು ಊಟ-ತಿಂಡಿ ಮಾಡಿದ ಡೈನಿಂಗ್ ಕೋಣೆ, ಹಲವಾರು ಜನರ ಸಮಸ್ಯೆಗಳನ್ನು ಪರಿಹಾರ ಮಾಡಿ ಅನುಕೂಲ ಮಾಡಿ ಕೊಟ್ಟ ಗೃಹ ಕಚೇರಿ, ಕರ್ನಾಟಕ ಅಷ್ಟೇ ಅಲ್ಲ ಬಿಹಾರ, ಛತ್ತೀಸಗಡ್, ಮಹಾರಾಷ್ಟ್ರ, ಮಧ್ಯ ಪ್ರದೇಶ ಆದಿಯಾಗಿ ಭಾರತದ ಎಲ್ಲ ರಾಜ್ಯಗಳಲ್ಲಿ ಪಕ್ಷ ಕಟ್ಟಲು ಸಹಕಾರಿಯಾದ ನೂರಾರು ಸಭೆಗಳನ್ನು ನಡೆಸಿದ ಹಜಾರ-ಡ್ರಾಯಿಂಗ್ ರೂಮ್ ನ್ನು ಹಾಗೂ ತನ್ನ ಸಣ್ಣ ವಯಸ್ಸಿನಲ್ಲಿ ಪ್ರಭುದ್ಧತೆಯಿಂದ ದೊಡ್ಡ ಕೆಲಸ ಮಾಡಲು ಅನಂತಕುಮಾರ್ ಅವರಿಗೆ ನಿರಂತರ ಶಕ್ತಿ ನೀಡಿದ ದೇವರಮನೆಯನ್ನು ಯಥಾವತ್ತಾಗಿ ಜೋಡಿಸಲಾಗಿದೆ.
27 ಏಪ್ರಿಲ್ ಭಾನುವಾರ ದಂದು ಬೆಳಗ್ಗೆ 8:30 ರಿಂದ ವೀಕ್ಷಣೆಯ ವಿಶೇಷ ಕಾರ್ಯಕ್ರಮ ಮತ್ತು 9:30 ರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಾಯಂಕಾಲ 4 ಗಂಟೆಗೆ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಿದೆ.