Monday, September 08, 2025
Menu

ಸೆಮಿಕಾನ್ ಇಂಡಿಯಾ 2025 ಮುಕ್ತಾಯ; ಸೆಮಿಕಂಡಕ್ಟರ್ ವ್ಯವಸ್ಥೆಯ ಬೆಳವಣಿಗೆಗೆ ವೇಗವರ್ಧನೆಯ ಗುರಿ

semi condector

ನವದೆಹಲಿ:  ಸೆಮಿಕಾನ್ ಇಂಡಿಯಾ 2025 ಯಶಸ್ವಿಯಾಗಿ ತನ್ನ ಮೂರು ದಿನದ ಕಾರ್ಯಕ್ರಮವನ್ನು ನವದೆಹಲಿಯ ಯಶೋಭೂಮಿಯಲ್ಲಿ ಮುಕ್ತಾಯಗೊಳಿಸಿದ್ದು, ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ಉದ್ಯಮದಲ್ಲಿ ಮಹತ್ವದ ಹೆಜ್ಜೆ ಗುರುತನ್ನು ಮೂಡಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ಶ್ರೀಯುತ ನರೇಂದ್ರ ಮೋದಿಯವರು “ಅತಿ ಸಣ್ಣ ಚಿಪ್ ಅನ್ನು ಭಾರತದಲ್ಲಿ ತಯಾರಿಸುವ ಮೂಲಕ ಇಡೀ ವಿಶ್ವದಲ್ಲೇ ಬದಲಾವಣೆ ಉಂಟುಮಾಡುವ ದಿನ ದೂರವಿಲ್ಲ” ಎಂದಿದ್ದಾರೆ. ಉದ್ಯಮದ ಚಿಂತಕರು ಈ ಕಾರ್ರ್ಯಕ್ರಮದಲ್ಲಿ ಭಾಗವಹಿಸಿದ್ದರು ಮತ್ತು ಸಂದರ್ಶಕರು, ಸ್ಟಾರ್ಟಪ್‌ಗಳು, ಹೂಡಿಕೆದಾರರು, ಅನ್ವೇಷಕರು, ಶಿಕ್ಷಣ ತಜ್ಞರು ಹಾಗೂ ವಿದ್ಯಾರ್ಥಿಗಳು ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಪ್ರಮುಖ ವಿವರಗಳು :

ಪ್ರತಿಷ್ಠಿತ ಭೇಟಿ: ಪ್ರಧಾನಿ ಶ್ರೀ ನರೇಂದ್ರ ಮೋದಿ, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವ ಜಿತಿನ್ ಪ್ರಸಾದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಉದ್ಯಮದ ಲೀಡರ್‌ಗಳು, ಸ್ಟಾರ್ಟಪ್‌ಗಳು, ಅನ್ವೇಷಕರ ಜೊತೆಗೆ ಸಂವಾದ ನಡೆಸಿದರು ಮತ್ತು ಭಾರತದ ಸೆಮಿಕಂಡಕ್ಟರ್ ವಲಯವನ್ನು ಮುನ್ನಡೆಸುವುದಕ್ಕೆ ಸರ್ಕಾರದ ಬದ್ಧತೆಯನ್ನು ಸೂಚಿಸಿದರು.

ವಿಶ್ವದರ್ಜೆಯ ಉದ್ಘಾಟನೆ ಕಾರ್ಯಕ್ರಮ: ಒಂಬತ್ತು ಜಾಗತಿಕ ಸಿಎಕ್ಸ್‌ಒ ಸ್ಪೀಕರ್‌ಗಳು ಈ ಕಾರ್ಯಕ್ರಮದಲ್ಲಿ ಹಾಜರಿದ್ದು, ಜಾಗತಿಕ ಮಟ್ಟದಲ್ಲಿ ಹೊಸ ಮಾನದಂಡವನ್ನು ಇದು ನಿಗದಿ ಮಾಡಿದೆ.

ಆತ್ಮನಿರ್ಭರ ಚಿಪ್‌ಗಳ ರೂಪುರೇಷೆ: ಡಿಸೈನ್ ಲಿಂಕ್ಡ್ ಇನ್ಸೆಂಟಿವ್ (ಡಿಎಲ್‌ಐ) ಅಡಿಯಲ್ಲಿ 23 ಚಿಪ್ ಡಿಸೈನ್ ಪ್ರಾಜೆಕ್ಟ್‌ಗಳ ಮಂಜೂರಾದ ಪಟ್ಟಿಯಲ್ಲಿನ 5 ಸ್ಟಾರ್ಟಪ್‌ಗಳು ಕಾರ್ಯಕ್ರಮದ 2ನೇ ದಿನದಂದು ಪ್ರಧಾನ ಮಂತ್ರಿಯವರಿಗೆ ರೂಪುರೇಷೆಯನ್ನು ಸಲ್ಲಿಸಿದ್ದು, ಸೆಮಿಕಂಡಕ್ಟರ್ ಚಿಪ್ ಡಿಸೈನ್‌ನಲ್ಲಿ ಭಾರತದ ಪರಿಣಿತಿ ಮತ್ತು ಸ್ವಾವಲಂಬನೆಯ ಗುರಿಯನ್ನು ವಿವರಿಸಿವೆ.

ಪ್ರದರ್ಶಕರಿಂದ ಉತ್ತಮ ಪ್ರತಿಕ್ರಿಯೆ: ಪ್ರದರ್ಶನ ವಿಭಾಗವು ಅತ್ಯಂತ ದಟ್ಟಣೆಯಿಂದ ಕೂಡಿತ್ತು ಮತ್ತು ಉತ್ತಮ ಗುಣಮಟ್ಟದ ಮೂಲಸೌಕರ್ಯವನ್ನು ಒಳಗೊಂಡಿತ್ತು. 48 ದೇಶಗಳ 350 ಕ್ಕೂ ಹೆಚ್ಚು ಸಂದರ್ಶಕರು ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಅನ್ವೇಷಣೆಗಳನ್ನು ಪ್ರದರ್ಶಿಸಿದವು

ಉತ್ತಮ ಸಂದರ್ಶಕರ ತೊಡಗಿಸಿಕೊಳ್ಳುವಿಕೆ: ಕಾರ್ಯಕ್ರಮದಲ್ಲಿ 20,000 ಕ್ಕೂ ಹೆಚ್ಚು ಸಂದರ್ಶಕರು ಭಾಗವಹಿಸಿದ್ದು, ಭಾರತದ ಸೆಮಿಕಂಡಕ್ಟರ್ ಎಕೋಸಿಸ್ಟಮ್‌ನಲ್ಲಿ ಉದ್ಯಮ ಮತ್ತು ಶೈಕ್ಷಣಿಕ ವಲಯದ ಆಸಕ್ತಿ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಪ್ರದರ್ಶಿಸಿತು.

ವಿಶೇಷ ವೈಶಿಷ್ಟ್ಯಗಳು: ಕಾರ್ಯಕ್ರಮದಲ್ಲಿ ವರ್ಕ್‌ಫೋರ್ಸ್‌ ಡೆವಲಪ್‌ಮೆಂಟ್ ಪೆವಿಲಿಯನ್‌, ಸ್ಟಾರ್ಟಪ್ ಪೆವಿಲಿಯನ್ ಮತ್ತು 6 ಕಂಟ್ರಿ ರೌಂಡ್ ಟೇಬಲ್‌ಗಳು ಇದ್ದು, ಉತ್ತಮ ಒಳನೋಟಗಳನ್ನು ನೀಡಿದವು ಮತ್ತು ನೆಟ್‌ವರ್ಕಿಂಗ್ ಮತ್ತು ಸಹಬಾಗಿತ್ವಕ್ಕೆ ಅವಕಾಶ ನೀಡಿದವು.

Related Posts

Leave a Reply

Your email address will not be published. Required fields are marked *