ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ವೇಳಾ ಪಟ್ಟಿ ಪ್ರಕಟವಾಗಿವೆ. ಫೆ.28 ರಿಂದ ಮಾರ್ಚ್ 17 ರ ವರೆಗೆ ದ್ವಿತೀಯ ಪಿಯುಸಿ ಹಾಗೂ ಮಾರ್ಚ್ 18 ರಿಂದ ಏಪ್ರಿಲ್ 2 ರ ವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆದರೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1:15 ಗಂಟೆ ವರೆಗೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ದ್ವೀತಿಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಹೀಗಿದೆ, ಫೆಬ್ರವರಿ 28- ಕನ್ನಡ, ಅರೇಬಿಕ್, ಮಾರ್ಚ್ 2- ಭೂಗೋಳ ಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ, ಮಾರ್ಚ್ 3- ಇಂಗ್ಲಿಷ್, ಮಾರ್ಚ್ 4- ತಮಿಳು,ತೆಲುಗು,ಮಲಯಾಳಂ, ಮರಾಠಿ,ಉರ್ದು,ಸಂಸ್ಕೃತ ಫ್ರೆಂಚ್. ಮಾರ್ಚ್ 5- ಇತಿಹಾಸ, ಮಾರ್ಚ್ 6- ಭೌತಶಾಸ್ತ್ರ, ಮಾರ್ಚ್ 7- ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ,ಭೂಗರ್ಭ ಶಾಸ್ತ್ರ. ಮಾರ್ಚ್ 9- ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ, ಮಾರ್ಚ್ 10- ಅರ್ಥಶಾಸ್ತ್ರ, ಮಾರ್ಚ್ 11- ತರ್ಕಶಾಸ್ತ್ರ,ವಿದ್ಯುನ್ಮಾನಶಾಸ್ತ್ರ,ಗೃಹ ವಿಜ್ಞಾನ, ಮಾರ್ಚ್ 12- ಹಿಂದಿ, ಮಾರ್ಚ್ 13- ರಾಜ್ಯಶಾಸ್ತ್ರ, ಮಾರ್ಚ್ 14- ಲೆಕ್ಕಶಾಸ್ತ್ರ, ಗಣಿತ, ಮಾರ್ಚ್ 16- ಸಮಾಜಶಾಸ್ತ್ರ,ಜೀವಶಾಸ್ತ್ರ,ಗಣಕ ವಿಜ್ಞಾನ. ಮಾರ್ಚ್ 17- ಹಿಂದುಸ್ತಾನಿ, ಸಂಗೀತ, ರೀಟೇಲ್ ಆಟೋಮೊಬೈಲ್, ಆರೋಗ್ಯ ರಕ್ಷಣೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ 1 ವೇಳಾಪಟ್ಟಿ: ಮಾರ್ಚ್ 18-ಪ್ರಥಮ ಭಾಷೆ, ಮಾರ್ಚ್ 23-ವಿಜ್ಞಾನ, ಮಾರ್ಚ್ 25-ದ್ವೀತಿಯ ಭಾಷೆ, ಮಾರ್ಚ್ 28-ಗಣಿತ, ಮಾರ್ಚ್ 30-ತೃತೀಯ ಭಾಷೆ, ಏಪ್ರಿಲ್ 2-ಸಮಾಜ ವಿಜ್ಞಾನ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ 2 ವೇಳಾಪಟ್ಟಿ: ಮೇ 18-ಪ್ರಥಮ ಭಾಷೆ, ಮೇ 19- ವಿಜ್ಞಾನ, ಮೇ 20- ದ್ವೀತಿಯ ಭಾಷೆ, ಮೇ 21- ಗಣಿತ, ಮೇ 22- ತೃತೀಯ ಭಾಷೆ, ಮೇ 23- ಸಮಾಜ ವಿಜ್ಞಾನ.


