ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಿರುವ ಪ್ರಕರಣದಲ್ಲಿ ಎಸ್ ಐಟಿ ಅಧಿಕಾರಿಗಳು 9 ಮತ್ತು 10ನೇ ಸ್ಥಳದಲ್ಲಿ ಯಾವುದೇ ಕುರುಹು ಪತ್ತೆಯಾಗಿಲ್ಲ.
ತೀವ್ರ ಕುತೂಹಲ ಕೆರಳಿಸಿದ್ದ 9 ಮತ್ತು 10ನೇ ಸ್ಥಳದಲ್ಲಿ ಶನಿವಾರ ಶೋಧ ಕಾರ್ಯ ನಡೆದಿದ್ದು, ಯಾವುದೇ ಕುರುಹು ಪತ್ತೆಯಾಗಿಲ್ಲ.
ಇದುವರೆಗೂ ನಡೆದ ಶೋಧ ಕಾರ್ಯದಲ್ಲಿ 6ನೇ ಪಾಯಿಂಟಲ್ಲಿ ತಲೆಬುರುಡೆ, ಕೈಕಾಲು ಮೂಳೆಯ ತುಂಡುಗಳು ಪತ್ತೆಯಾಗಿವೆ. 7ನೇ ಪಾಯಿಂಟನಲ್ಲಿ ಕರ್ಚೀಫ್ ಪತ್ತೆಯಾಗಿದೆ.
ಧರ್ಮಸ್ಥಳದಲ್ಲಿ ಕಳೆದ 12 ವರ್ಷಗಳಲ್ಲಿ ನೂರಾರು ಶವ ಹೂತು ಹಾಕಿದ್ದೇನೆ ಎಂದು ನ್ಯಾಯಾಲಯಕ್ಕೆ ತಪ್ಪೊಪ್ಪಿಗೆ ನೀಡಿದ್ದ ದೂರುದಾರ 9ನೇ ಸ್ಥಳದಲ್ಲಿ 6ರಿಂದ 7 ಶವಗಳನ್ನು ಹೂತಿದ್ದು, ಈ ಜಾಗದ ಶೋಧ ಕಾರ್ಯ ಮೊದಲು ನಡೆಸುವಂತೆ ಆಗ್ರಹಿಸಿದ್ದ.
ಆದರೆ ಎಐಟಿ ಪೊಲೀಸರು ಮೊದಲ ಪಾಯಿಂಟ್ ನಿಂದಲೇ ಶೋಧ ಕಾರ್ಯ ಆರಂಭಿಸಿದ್ದಾರೆ. 8ನೇ ಸ್ಥಳದಿಂದ 9ನೇ ಸ್ಥಳಕ್ಕೆ 50 ಮೀ. ಅಂತರವಿದ್ದು, 9, 10 ,11 ಮತ್ತು 12ನೇ ಸ್ಥಳಗಳು ಒಂದರ ಪಕ್ಕ ಒಂದು ಇವೆ.