Tuesday, February 24, 2026
Menu

ಶಾಲಾ ಮಕ್ಕಳಿಗೆ ಮೊಬೈಲ್ ಬೇಕಿಲ್ಲ: ರಾಜ್ಯ ಸರ್ಕಾರದ ಚಿಂತನೆ

ಈಗ ಮಕ್ಕಳ  ಕೈಗೆ ದೊರೆಯುವ ಮೊಬೈಲ್ ಫೋನ್‌ನಲ್ಲಿ ಮಾಹಿತಿಗಳ ಮಹಾ ಕಣಜವೇ ಇದೆ !ಇದರಲ್ಲಿರುವ ಒಳ್ಳೆಯ ಅಂಶಗಳಿಗಿಂತ ಬೇಡವಾದ, ಅನರ್ಥಕಾರಿ ಹಾಗೂ ಅಸಭ್ಯಕಾರಿ ಮಾಹಿತಿಗಳ ಕಡೆಯೇ ಮಕ್ಕಳು ಆಕರ್ಷಿತರಾಗಿರುವುದರಿಂದ ಇದು ಪಾಠ -ಪ್ರವಚನಗಳ ಮೇಲೆ ಕೆಟ್ಟ ಪರಿಣಾಮ ಬೀರಿ ಸಾಮಾಜಿಕ ದುರಂತಗಳಿಗೆ ಎಡೆಮಾಡಿಕೊಟ್ಟಿದೆ.

ಹದಿನಾರು ವರ್ಷದೊಳಗಿನ ಮಕ್ಕಳು ಶಾಲೆ, ಶಿಕ್ಷಣ ಸಂಸ್ಥೆಗಳಲ್ಲಿ ಮೊಬೈಲ್ ಬಳಸುವುದನ್ನು ನಿಷೇಧಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿರುವುದು ಗಮನಾರ್ಹ. ರಾಜ್ಯ ಸರ್ಕಾರದಿಂದ ಇದೊಂದು ಸಕಾರಾತ್ಕಕ ಚಿಂತನೆ ಎಂಬುದರಲ್ಲಿ ಎರಡು ಮಾತಿಲ್ಲ. ಪುಸ್ತಕ ಓದುವುದು ಮತ್ತು ಪೆನ್, ಪೆನ್ಸಿಲ್ ಬಳಸಿ ನೋಟ್ಸ್ ಮಾಡಿಕೊಳ್ಳುವುದು ಮತ್ತು ವಿದ್ಯಾರ್ಥಿಗಳು ಹೀಗೆ ತಾವೇ ಮಾಡಿಕೊಂಡ ನೋಟ್ಸ್ ಅನ್ನು ಮತ್ತೆ ನೀಟ್ ನೋಟ್ಸ್ ಮಾಡುವುದು- ಇವೆಲ್ಲ ಸೃಜಶೀಲ ಶೈಕ್ಷಣಿಕ ಚಟುವಟಿಕೆ ಗಳು ಇಂದು ಶಾಲೆಗಳಲ್ಲಿ ನೇಪಥ್ಯಕ್ಕೆ ಸರಿದಿವೆ. ಇದಕ್ಕೆ ಬೊಬೈಲ್ ಬಳಕೆ ಕಾರಣವೆಂದು ಹೇಳುವ ಅಗತ್ಯವೇ ಇಲ್ಲ.

ಸ್ಮಾರ್ಟ್‌ಫೋನ್‌ಗಳಿಂದು ಶಾಲಾ ಮಕ್ಕಳ ಮೇಲೆ ಗಂಭೀರ ಪರಿಣಾಮವನ್ನು ಬೀರಿದೆ. ಇದರ ವ್ಯಾಮೋಹಕ್ಕೆ ಸಿಲುಕಿದ ಮಕ್ಕಳು ಶಿಕ್ಷಕರು ನೀಡುವ ಹೋಂ ವರ್ಕ್ ಅನ್ನು ಸರಿಯಾಗಿ ಮಾಡದೆ ಮನೆಯಲ್ಲಿ ಅಥವಾ ತಮ್ಮ ಸ್ನೇಹಿತರ ಜೊತೆ ಸೇರಿ ಮೊಬೈಲ್ ಗೇಮ್‌ನಲ್ಲಿ ತೊಡಗಿರುವುದು ಕಳವಳಕಾರಿ ವಿದ್ಯಮಾನ. ಶಾಲೆಗಳ ತರಗತಿಗಳಲ್ಲಿಯೇ ಮಕ್ಕಳು ಮೊಬೈಲ್ ಚಾಟಿಂಗ್ ಮಾಡುವುದು ವಿಡಿಯೋ ಗೇಮಿಂಗ್ ಆಡುವುದು ಇವೆಲ್ಲ ಅನಿಷ್ಟಗಳೂ ಇಂದು ಮಕ್ಕಳ ಮೇಲೆ ಮತ್ತು ಪ್ರಾಥಮಿಕ ಶಿಕ್ಷಣದ ಕೆಟ್ಟ ಪರಿಣಾಮವನ್ನು ಬೀರಿದೆ. ಈ ಮೊಬೈಲ್ ಬಳಕೆ ಕೇವಲ ಮಕ್ಕಳ ಮೇಲಲ್ಲ. ಶಾಲೆಯ ಕೊಠಡಿಯಲ್ಲಿ ಪಾಠ ಮಾಡುವ ಶಿಕ್ಷಕರ ಮೇಲೆ ಕೂಡಾ ಅಡ್ಡ ಪರಿಣಾಮವನ್ನು ಬೀರಿದೆ.

ಒಂದು ಕಾಲದಲ್ಲಿ ಕೆಲ ಶಿಕ್ಷಕರು ಕಲಿಯುವ ಮಕ್ಕಳಿಗೆ ಹೆಚ್ಚಿನ ಮಾಹಿತಿ ನೀಡುವ ವಿಷಯದಲ್ಲಿ ಹಿಂದೇಟು ಹಾಕುತಿದ್ದರು. ಪಠ್ಯಪುಸ್ತಕ ಮತ್ತು ಬರವಣಿಗೆ ಕಲಿಸದೆ ಮತ್ತು ಓದಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನೂ ನೀಡದೆ ವಿದ್ಯಾರ್ಥಿಗಳನ್ನು ಅಂಧಃಕಾರದಲ್ಲಿ ನೂಕುತಿದ್ದರು. ಆದರೆ ಈಗ ಮಕ್ಕಳಿಗೆ ಕೈಗೆ ದೊರೆಯುವ ಮೊಬೈಲ್ ಫೋನ್‌ನಲ್ಲಿ ಮಾಹಿತಿಗಳ ಮಹಾ ಕಣಜವೇ ಇದೆ !ಇದರಲ್ಲಿರುವ ಒಳ್ಳೆಯ ಅಂಶಗಳಿಗಿಂತ ಬೇಡವಾದ ಮತ್ತು ಅನರ್ಥಕಾರಿ ಮತ್ತು ಅಸಭ್ಯಕಾರಿ ಮಾಹಿತಿಗಳ ಕಡೆಯೇ ಮಕ್ಕಳು ಆಕರ್ಷಿತರಾಗಿದ್ದು ಇದು ಮಕ್ಕಳ ಪಾಠ -ಪ್ರವಚನಗಳ ಸುಪ್ತ ಕಲಿಕೆಗೆ ಅಡ್ಡಿಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಹದಿನಾರು ವರ್ಷದ ವಯಸಿನ ಮಕ್ಕಳು ಶಾಲೆಗಳಲ್ಲಿ ಮತ್ತು ಪಬ್ಲಿಕ್‌ನಲ್ಲಿ ಇದನ್ನು ಬಳಸದಂತೆ ಎಚ್ಚರಿಕೆ ವಹಿಸುವ ಸೂಕ್ತ ಕಾನೂನು ಕೂಡಾ ರಾಜ್ಯ ಸರ್ಕಾರವೀಗ ರಚಿಸುವುದು ಇದು ಸಕಾಲ.

ಯಾವುದೇ ತಂತ್ರಜ್ಞಾನ ವಿರಲಿ. ಸಮಾಜ ಮತು ಸಾಮಾಜಿಕ ಬದುಕಿನ ಮೇಲೆ ಹಾನಿಕಾರಕ ಪರುಣಾಮ ಬೀರುವುದೆಂದಾಗ ಸರ್ಕಾರಗಳು ಇದನ್ನು ನಿಗ್ರಹಿಸಲು ಸೂಕ್ತ ಕಾಯಿದೆಗಳನ್ನು ರಚಿಸಲು ಹಿಂಜರಿಯಬಾರದು. ಇದೇ ತಂತ್ರಜ್ಞಾನವನ್ನು ವಿಪರೀತವಾಗಿ ಅಪ್ಪಿಕೊಂಡು ಮಕ್ಕಳ ಮೊಬೈಲ್ ಬಳಕೆ ಪರವಾಗಿ ವಾದವನ್ನು ಮಂಡಿಸುವವರೂ ಇದ್ದಾರೆ ! ಆದರೆ ಅಪ್ರಾಪ್ತರ ಕೈಯಲ್ಲಿ ಏನೇ ಇದ್ದರೂ ಇದು ಮಂಗನ ಕೈಯಲ್ಲಿ ಮಾಣಿಕ್ಯ ಇದ್ದಂತೆ ಜಾಗತಿಕ ಮಟ್ಟದ ಎಲ್ಲ ಕಾನೂನಿನಲ್ಲಿಯೂ ಮೈನರ್  ರುಗಳನ್ನು ಹದ್ದು ಬಸ್ತಿನಲ್ಲಿಡುವ ಶಾಸನಗಳಿಗೆ ಮಾನ್ಯತೆ ಇದೆ ಎಂಬುದನ್ನು ನಾವು ಮರೆಯಬಾರದು.

Related Posts

Leave a Reply

Your email address will not be published. Required fields are marked *