ಚಿಕ್ಕಮಗಳೂರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಗ್ರಾಹಕರು ಅಡವಿಟ್ಟಿದ್ದ ಚಿನ್ನವನ್ನು ಸಿಬ್ಬಂದಿಯೇ ಮಾರಿ ನಕಲಿ ಚಿನ್ನ ಇರಿಸಿ ವಂಚಿಸಿರುವ ಪ್ರಕರಣಗಳು ಬಯಲಾಗಿವೆ. ಗ್ರಾಹಕರು ಅಡವಿಟ್ಟ ಅಸಲಿ ಚಿನ್ನಾಭರಣಗಳನ್ನು ಬ್ಯಾಂಕ್ ಸಿಬ್ಬಂದಿಯೇ ಮಾರಿ ಬದಲಿಗೆ ನಕಲಿ ಚಿನ್ನ ಇಟ್ಟು ವಂಚನೆ ಮಾಡಿದ್ದಾರೆ ಎಂಬ ಆರೋಪ ದೃಢಪಟ್ಟಿದೆ.
ಶಾಖಾ ಮ್ಯಾನೇಜರ್ ಸಂದೀಪ್ ಕೊಲ್ಲೂರಿ, ಸಿಬ್ಬಂದಿ ನಾರಾಯಣಸ್ವಾಮಿ, ಪ್ರಶಾಂತ್, ಲಾವಣ್ಯ ಮತ್ತು ಶ್ವೇತಾ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. 2020 ರಿಂದ 2025ರವರೆಗೆ ಅಂದರೆ ಸುಮಾರು ಐದು ವರ್ಷಲ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಗ್ರಾಹಕರು ಚಿನ್ನ ಅಡವಿಟ್ಟು ಗೋಲ್ಡ್ ಲೋನ್ ಪಡೆದಿದ್ದರು. ಲೋನ್ ಮೊತ್ತವನ್ನು ಗ್ರಾಹಕರಿಗೆ ನೀಡಿದ ಬಳಿಕ ಅಸಲಿ ಚಿನ್ನವನ್ನು ಮಾರಿ ನಕಲಿ ಚಿನ್ನ ಇಟ್ಟಿದ್ದಾರೆ. ಹೆಚ್ಚುವರಿ ಗೋಲ್ಡ್ ಲೋನ್ ಮಾಡಿಸಿ ಹಣ ಲೂಟಿ ಮಾಡಿದ್ದಾರೆ ಎಂಬ ಆರೋಪವಿದೆ.
ಲೋನ್ ಕ್ಲಿಯರ್ ಮಾಡಿದ ನಂತರವೂ ಅಸಲಿ ಚಿನ್ನ ಹಿಂದಿರುಗಿಸದೆ ಇರುವುದರಿಂದ ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಸಂತ್ರಸ್ತರು ಬೆಂಗಳೂರು ಕೇಂದ್ರ ಕೇಂದ್ರ ಕಚೇರಿಗೂ ದೂರು ನೀಡಿದ್ದಾರೆ.
ಈ ಹಿಂದೆ ಕೆನರಾ ಬ್ಯಾಂಕ್‌ನಲ್ಲಿ ಅಡವಿಟ್ಟ ಚಿನ್ನದ ತೂಕದಲ್ಲಿ ಕಡಿಮೆಯಾಗಿರುವ ಬಗ್ಗೆ ಗ್ರಾಹಕರು ದೂರು ನೀಡಿದ್ದರು. ಎಸ್‌ಬಿಐ ಬ್ಯಾಂಕಿನಲ್ಲೂ ಚಿನ್ನದ ಲಾಕರ್ ಗ್ರಾಹಕರಿಗೆ ಗೊತ್ತಿಲ್ಲದೆಯೇ ಬೇರೆ ಗ್ರಾಹಕರಿಗೆ ಆ ಲಾಕರ್ ನೀಡರುವುದು ಸುದ್ದಿಯಾಗಿತ್ತು. ರಾಷ್ಟ್ರೀಕೃತ ಬ್ಯಾಂಕ್‌ಗಳು ವಿಶ್ವಾರ್ಹವೆಂದು ಅಲ್ಲಿ ಸಾರ್ವಜನಿಕರು ವ್ಯವಹಾರಕ್ಕೆ ಆದ್ಯತೆ ನೀಡುತ್ತಿರುವಾಗ ಇತ್ತೀಚೆಗೆ ಆ ಬ್ಯಾಂಕ್‌ಗಳಲ್ಲಿ ನಡೆಯುತ್ತಿರುವ ಅವಾಂತರಗಳು ಗ್ರಾಹಕರಲ್ಲಿ ಆತಂಕ ಉಂಟು ಮಾಡುತ್ತಿವೆ.


