Menu

ಎಸ್‌ಬಿಐಗೆ 2,000 ಕೋಟಿ ರೂ. ವಂಚನೆ: ಅನಿಲ್‌ ಅಂಬಾನಿ ವಿರುದ್ಧ ಸಿಬಿಐ ದಾಳಿ

ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾಗೆ 2,000 ಕೋಟಿ ರೂ.ಗಳಿಗೂ ಹೆಚ್ಚು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ಅದರ ನಿರ್ದೇಶಕ ಅನಿಲ್‌ ಅಂಬಾನಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಕೇಂದ್ರೀಯ ತನಿಖಾ ದಳ ದಾಳಿ ನಡೆಸಿದೆ.
ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ಅನಿಲ್‌ ಅಂಬಾನಿಗೆ ಸಂಬಂಧಿಸಿದ ಮುಂಬೈನಲ್ಲಿರುವ ಆರು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಬ್ಯಾಂಕ್ ಹಣವನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗಿದೆ ಮತ್ತು ಸಾಲಗಳನ್ನು ಬೇರೆಡೆಗೆ ತಿರುಗಿಸಲಾಗಿದೆಯೇ ಎಂಬುದನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯ ಭಾಗವಾಗಿ ಈ ದಾಳಿ ನಡೆಸಲಾಗಿದೆ.
ಎಸ್‌ಬಿಐ ಆರ್‌ಸಿಒಎಂ ಮತ್ತು ಅನಿಲ್‌ ಅಂಬಾನಿ ವಂಚನೆ ಎಸಗಿದ್ದಾರೆ ಎಂದು ಜೂನ್ 24 ರಂದು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ವರದಿ ಕಳುಹಿಸಿತ್ತು. ಜಾರಿ ನಿರ್ದೇಶನಾಲಯ
ಅಂಬಾನಿ ಅವರನ್ನು ಅವರ ಸಮೂಹ ಕಂಪನಿಗಳ ವಿರುದ್ಧ ಕೋಟ್ಯಂತರ ರೂಪಾಯಿ ಮೌಲ್ಯದ ಬ್ಯಾಂಕ್ ಸಾಲ ವಂಚನೆಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಪ್ರಶ್ನಿಸಿದ ವಾರಗಳ ನಂತರ ಸಿಬಿಐ ದಾಳಿ ನಡೆಸಿದೆ.
ಯೆಸ್ ಬ್ಯಾಂಕಿನಿಂದ 2017 ಮತ್ತು 2019 ರ ನಡುವೆ 3,000 ಕೋಟಿ ರೂ. ಸಾಲಗಳನ್ನು ಬೇರೆ ಕಡೆ ಹೂಡಿಕೆ ಮಾಡಿದ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ. ರಿಲಯನ್ಸ್ ಕಮ್ಯುನಿಕೇಷನ್ಸ್ 14,000 ಕೋಟಿ ರೂ.ಗಳಿಗೂ ಹೆಚ್ಚಿನ ವಂಚನೆ ಮಾಡಿದೆ ಎಂದು ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ.

Related Posts

Leave a Reply

Your email address will not be published. Required fields are marked *