Menu

ಸಿಗರೇಟ್ ಮಾದರಿ ಸಮೋಸ, ಜಿಲೇಬಿ ಪ್ಯಾಕ್ ಮೇಲೂ ಜಾಗೃತಿ ಬರಹ: ಕೇಂದ್ರ ಆದೇಶ

samosa

ಧೂಮಪಾನ ಆರೋಗ್ಯಕ್ಕೆ ಹಾನಿಕಾರ. ಸಿಗರೇಟು ಸೇವನೆಯಿಂದ ಕ್ಯಾನ್ಸರ್ ಮುಂತಾದ ಮಾರಣಾಂತಿಕ ಕಾಯಿಲೆಗಳು ಬರುತ್ತವೆ ಎಂದು ಸಿಗರೇಟು ಪ್ಯಾಕ್ ಮೇಲೆ ಬಳಸುವ ಜಾಗೃತಿ ಬರಹ ಮಾದರಿಯಲ್ಲಿ ಆಹಾರ ಪೊಟ್ಟಣಗಳ ಮೇಲೂ ಜಾಗೃತಿ ಬರಹ ಹಾಕಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿದೆ.

ಜನರಲ್ಲಿ ಆರೋಗ್ಯ ಪದ್ಧತಿಯ ಜಾಗೃತಿ ಮೂಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಸಮೋಸ, ಜಿಲೇಬಿ, ವಡಾ ಪಾವ್, ಪಕೋಡಾ ಮತ್ತು ಚಾಯ್ ಬಿಸ್ಕತ್ ಮುಂತಾದ ಪ್ಯಾಕೇಟ್ ಆಹಾರ ಪೊಟ್ಟಣಗಳ ಮೇಲೆ ಜಾಗೃತಿ ಬರಹ ಪ್ರಕಟಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಆದೇಶ ಹೊರಡಿಸಿದೆ.

ಆಧುನಿಕ ಜೀವನ ಶೈಲಿಯಿಂದ ಆಹಾರ ಪದ್ಧತಿ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಹಾರಗಳಲ್ಲಿ ಹೆಚ್ಚಿನ ಮಟ್ಟದ ಎಣ್ಣೆ, ಸಕ್ಕರೆ ಮತ್ತು ಟ್ರಾನ್ಸ್ ಕೊಬ್ಬಿನಾಂಶ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಆದೇಶ ಹೊರಡಿಸಿದೆ.

ಸಿದ್ಧಪಡಿಸಿದ ಆಹಾರ ಪೊಟ್ಟಣಗಳಲ್ಲಿನ ಪೋಷಕಾಂಶಗಳು, ಬೊಜ್ಜಿಗೆ ಕಾರಣವಾಗುವ ಅಂಶಗಳನ್ನು ಕಂಪನಿಗಳು ಪ್ರಕಟಿಸಬೇಕಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವ ಕೇಂದ್ರದ ಮಹತ್ವದ ಅಭಿಯಾನ ಮಹಾರಾಷ್ಟ್ರದ ನಾಗ್ಪುರದಲ್ಲಿ ಆರಂಭವಾಗುತ್ತಿದೆ.

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಪ್ರಾಯೋಗಿಕವಾಗಿ ನಾಗ್ಪುರದಲ್ಲಿ ಆರಂಭಿಸಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ಕೆಫೆಟೇರಿಯಾಗಳು ಮತ್ತು ಸಾರ್ವಜನಿಕ ಊಟದ ಸ್ಥಳಗಳು ಆಹಾರ ಕೌಂಟರ್‌ಗಳ ಪಕ್ಕದಲ್ಲಿ ಪ್ರಕಾಶಮಾನವಾದ, ಓದಲು ಸುಲಭವಾದ ಎಚ್ಚರಿಕೆ ಫಲಕಗಳನ್ನು ಪ್ರದರ್ಶಿಸಲು ಪ್ರಾರಂಭಿಸಲಾಗಿದೆ.

Related Posts

Leave a Reply

Your email address will not be published. Required fields are marked *