ರಷ್ಯಾ ಈಗ ಹೇಳಿರುವ ಪ್ರಕಾರ ಚಂದ್ರನ ಮೇಲಿನ ಅಣುಸ್ಥಾವರ ಸ್ಥಾಪನೆಯ ಮೂಲ ಉದ್ದೇಶವಂತೂ ವೈಜ್ಞಾನಿಕ ಮುಂದಿನ ಆವಿಷ್ಕಾರಗಳಿಗೆ ಪೂರಕವೇ ವಿನಹ, ಈ ಯೋಜನೆಯಿಂದ ಯಾರಿಗೂ ಅಪಾಯವಿಲ್ಲ. ಆದರೆ ಈ ಮಾತುಗಳನ್ನು ಅಮೆರಿಕ, ಬ್ರಿಟನ್, ಫ್ರಾನ್ಸ್ ಮೊದಲಾದ ಅಗ್ರದೇಶಗಳು ಒಪ್ಪಿಕೊಳ್ಳುವುದು ಅನುಮಾನ.
ಮುಂದಿನ ದಶಕದ ಕೊನೆಯೊಳಗೆ ಉಪಗ್ರಹವಾದ ಚಂದ್ರನ ಮೇಲೆ ಅಣು ಸ್ಥಾವರವನ್ನು ನೆಲೆಗೊಳಿಸುವುದಾಗಿ ರಷ್ಯಾ ಘೋಷಿಸಿದೆ. ಕಳೆದ ಶತಮಾನದ ಅರವತ್ತರ ದಶಕದ ಆರಂಭದಲ್ಲಿ ನಭಲೋಕದ ಅತಿ ಸುಂದರ ಉಪಗ್ರಹವಾಗಿರುವ ಚಂದ್ರನಲ್ಲಿ ಪಾದಸ್ಪರ್ಶ ಮಾಡಿದ ಯೂರಿ ಗ್ಯಾಗರೀನ್ ಸೋವಿಯೋತ್ ರಷ್ಯಾ ಮೂಲದವರು. ೨೦೨೩ರಲ್ಲಿ ರಷ್ಯಾ ದೇಶದಿಂದ ಪ್ರಯೋಗಿ ಸಲಾದ ಮೂನ್ ಮಿಷನ್ ವೈಫಲ್ಯದ ಬಳಿಕ ರಷ್ಯಾ ಸ್ಪೇಸ್ ಕಾರ್ಪೋರೇಷನ್, ಚೀನಾ, ಅಮೆರಿಕ ಮತ್ತು ಭಾರತಕ್ಕೆ ಸವಾಲೊಡ್ಡುವ ಹಾದಿಯಲ್ಲಿ ನೂತನ ಸಾಹಸಗಳಿಗೆ ಈಗ ಮುಂದಾಗಿದೆ.
೨೦೩೬ರ ವೇಳೆಗೆ ಚಂದ್ರನಲ್ಲಿ ಅಣುಸ್ಥಾವರವನ್ನು ನೆಲೆಗೊಳಿಸಲಾಗುವುದು. ಈ ದಿಶೆಯಲ್ಲಿ ಸಕಲ ತಯಾರಿ ಈಗ ಆರಂಭವಾಗಿದೆ ಎಂದು ರಷ್ಯಾ ಸ್ಪೇಸ್ ಕಾರ್ಪೋರೇಷನ್ ವಕ್ತಾರರು ಹೇಳಿಕೆ ಯೊಂದನ್ನು ಬಿಡುಗಡೆ ಮಾಡಿರವುದು ಈಗ ಜಾಗತಿಕ ಮಟ್ಟದಲ್ಲಿ ವಿಜ್ಞಾನ, ಸಂಶೋಧಕರ ಹುಬ್ಬೇರಿಸಿದೆ. ಅನ್ಯಗ್ರಹದ ಮೇಲೆ ಪ್ರಪಂಚದ ಎಲ್ಲ ದೇಶಗಳಿಗೂ ಹಕ್ಕುಗಳಿವೆ. ಶತಮಾನಗಳಿಂದ ಮನುಷ್ಯನಾದವನಿಗೆ ಈ ಭೂಮಿಯ ಮೇಲೆ ತನ್ನ ಸಂಪೂರ್ಣ ಒಡೆತನ ಮತ್ತು ಅಧಿಪತ್ಯವನ್ನು ಸ್ಥಾಪಿಸಬೇಕೆಂಬ ಬಯಕೆಯೇನೋ ಇದೆ. ಗ್ರೀಕ್ ಚಕ್ರವರ್ತಿ ಅಲೆಗ್ಸಾಂಡರ್ , ಇಡೀ ಪ್ರಪಂಚ ವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ತನ್ನ ಸಮಸ್ತ ಸೈನ್ಯದೊಂದಿಗೆ ದಂಡೆತ್ತಿ ಬಂದಿದ್ದು ಇತಿಹಾಸ. ಆದರೆ ಬಾಹ್ಯಾಕಾಶ ತಂತ್ರಜ್ಞಾನದ ತೀವ್ರ ಪೈಪೋಟಿ ಇರುವಂತಹ ಈ ದಿನಗಳಲ್ಲಿ ರಷ್ಯಾ ಕೈಗೆತ್ತಿಕೊಂಡಿರುವ ಈ ಯೋಜನೆ ವಿಶ್ವದ ಗಮನ ಸೆಳೆದಿದೆ.
ಅನ್ಯಗ್ರಹ ಅಥವಾ ಉಪಗ್ರಹವನ್ನು ಗುರಿಯಾಗಿಟ್ಟುಕೊಂಡು ದೇಶವೊಂದು ಕೈಗೆತ್ತಿಕೊಳ್ಳುವ ಸಂಶೋಧನೆ ಮತ್ತು ಯೋಜನೆಗಳಿಗೆ ಬೇರೆ ದೇಶಗಳ ಅಡ್ಡಿ ಆಕ್ಷೇಪಗಳೇನೂ ಪರಿಣಾಮ ಬೀರು ವುದಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನ್ಯಗ್ರಹಗಳ ಮೇಲೆ ವಿವಿಧ ದೇಶಗಳ ಹಕ್ಕು ಮತ್ತು ಅಧಿಕಾರಗಳ ಬಗ್ಗೆ ಅಧಿಕಾರಪೂರ್ಣ ಚರ್ಚೆ ಇನ್ನೂ ಶುರುವಾಗಿಲ್ಲ. ಅದೇನೆ ಇರಲಿ. ರಷ್ಯಾ ಅಂತಹ ಸೂಪರ್ ಪವರ್ ಅನ್ಯಗ್ರಹದ ಮೇಲೆ ನೆಲೆಗೊಳಿಸುವ ಅಣುಸ್ಥಾವರ ಕೇಂದ್ರದ ವಿಷಯವಂತೂ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುವುದು ಖಂಡಿತ. ರಷ್ಯಾ ಈಗ ಹೇಳಿರುವ ಪ್ರಕಾರ ಅಣು ಸ್ಥಾವರದ ಮೂಲ ಉzಶವಂತೂ ವೈಜ್ಞಾನಿಕ ಮುಂದಿನ ಆವಿಷ್ಕಾರಗಳಿಗೆ ಪೂರಕವೇ ವಿನಹ, ಈ ಯೋಜನೆಯಿಂದ ಯಾರಿಗೂ ತೊಂದರೆ ಅಥವಾ ಬಾಧಕವಿಲ್ಲ. ಆದರೆ ಈ ಮಾತುಗಳಿಗೆ ಅಮೆರಿಕ, ಬ್ರಿಟನ್, ಫ್ರಾನ್ಸ್ ಮೊದಲಾದ ಅಗ್ರದೇಶಗಳು ಸಮ್ಮತಿಯನ್ನು ವ್ಯಕ್ತಪಡಿಸುವುದು ಅನುಮಾನ. ಈಗ ಭೂಮಿಯ ಮೇಲೆ ತನ್ನ ದೈತ್ಯ ಪರಮಾಣು ಶಕ್ತಿಯನ್ನು ಪ್ರದರ್ಶಿಸಿದ ಅಗ್ರ ದೇಶ ಗಳು, ರಷ್ಯಾ ಕೈಗೆತ್ತಿಕೊಂಡಿರುವ ಈ ಅಸಾಧಾರಣ ಯೋಜನೆಗೆ ಅಡ್ಡಿ ಆತಂಕಗಳು ಇಲ್ಲದೆ ಇಲ್ಲ. ಚೀನಾ ದೇಶದ ಸಹಯೋಗದೊಂದಿಗೆ ಈ ಯೋಜನೆ ಸಾಕಾರಗೊಳ್ಳಲಿದೆ ಎಂದು ರಷ್ಯಾ ಸ್ಪೇಸ್ ಕಾರ್ಪೋರೇಷನ್ ವಕ್ತಾರ ಹೇಳಿರುವುದು ಗಮನಾರ್ಹ. ಈ ಯೋಜನೆಯಿಂದ ಶುಕ್ರ ಗ್ರಹದ ಮುಂದಿನ ವೈಜ್ಞಾನಿಕ ಸಂಶೋಧನೆಗೆ ಸಹಾಯಕ ಎಂದು ವಕ್ತಾರರು ಹೇಳಿದ್ದಾರೆ. ಒಟ್ಟಿನಲ್ಲಿ ಚಂದ್ರನ ಮೇಲೆ ಅಣುಸ್ಥಾವರ ಎಂಬುದು ಮುಂದಿನ ದಿನಗಳಲ್ಲಿ ಬಹುಚರ್ಚಿತ ಅಂತಾರಾಷ್ಟ್ರೀಯ ವಿಚಾರವಾಗುವುದರಲ್ಲಿ ಸಂದೇಹವಿಲ್ಲ.


