ರಷ್ಯಾದಲ್ಲಿ ತಾಂತ್ರಿಕ ದೋಷದಿಂದ ವಿಮಾನವೊಂದು ಆ ದೇಶದ ಪೂರ್ವ ಅಮುರ್ ಪ್ರದೇಶದಲ್ಲಿ ಪತನಗೊಂಡಿದ್ದು, 50 ಮಂದಿ ಮೃತಪಟ್ಟಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಸೈಬೀರಿಯಾ ಮೂಲದ ಅಂಗಾರ ವಿಮಾನಯಾನ ಸಂಸ್ಥೆಯ ವಿಮಾನ ಚೀನಾ ಗಡಿಯಲ್ಲಿರುವ ಅಮುರ್ ಪ್ರದೇಶದ ಟಿಂಡಾ ಪಟ್ಟಣದ ಬಳಿ ರಾಡಾರ್‌ನಿಂದ ಸಂಪರ್ಕ ಕಳೆದುಕೊಂಡಿತು. ಇದಾಗಿ ಕೆಲವೇ ಕ್ಷಣಗಳಲ್ಲಿ ಪತನಗೊಂಡಿರುವುದು ದೃಢಪಟ್ಟಿದೆ.
ಟಿಂಡಾದಿಂದ ಹದಿನೈದು ಕಿಲೋಮೀಟರ್ ದೂರದಲ್ಲಿ, ಇಳಿಜಾರಿನಲ್ಲಿ ಆನ್ -24 ವಿಮಾನದ ಅವಶೇಷಗಳು ಕಂಡುಬಂದಿವೆ. ವಿಮಾನ ಸಂಪೂರ್ಣವಾಗಿ ನಾಶವಾಗಿದೆ. ಬೆಳಗ್ಗೆ 7.30ಕ್ಕೆ ಖಬರೋವ್ಸ್ಕ್‌ನಿಂದ ವಿಮಾನ ಹೊರಟಿತ್ತು ರಾಡಾರ್‌ನಿಂದ ಕಣ್ಮರೆಯಾಗಿ ಟಿಂಡಾ ವಿಮಾನ ನಿಲ್ದಾಣದಿಂದ ಕೆಲವೇ ಕಿಲೋಮೀಟರ್‌ಗಳ ದೂರದಲ್ಲಿ ಕರೆಗಳಿಗೆ ಪ್ರತಿಕ್ರಿಯಿಸಲು ವಿಫಲವಾಯಿತು.
ಈ ಪ್ಯಾಸೆಂಜರ್ ವಿಮಾನದಲ್ಲಿ 6 ಮಕ್ಕಳು ಮತ್ತು ಆರು ಸಿಬ್ಬಂದಿ ಸೇರಿ ೫೦ ಮಂದಿ ಇದ್ದರು ಎಂದು ಪ್ರಾದೇಶಿಕ ಗವರ್ನರ್ ವಾಸಿಲಿ ಓರ್ಲೋವ್ ಹೇಳಿದ್ದಾರೆ.