Menu

ರಷ್ಯಾ-ಉಕ್ರೇನ್‌ ಯುದ್ಧ ಶೀಘ್ರ ಕೊನೆ: ಟ್ರಂಪ್‌

ದೀರ್ಘಕಾಲದಿಂದ ನಡೆಯುತ್ತಿರುವ ರಷ್ಯಾ- ಉಕ್ರೇನ್‌ ನಡುವಿನ ಯುದ್ಧ ಶೀಘ್ರ ಕೊನೆಯಾಗುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಫ್ಲೋರಿಡಾದ ತನ್ನ ಖಾಸಗಿ ನಿವಾಸದಲ್ಲಿ ಟ್ರಂಪ್‌ ಮಹತ್ವದ ಸಭೆ ನಡೆಸಿದ ಬಳಿಕ ಈ ಹೇಳಿಕೆ ನೀಡಿದ್ದಾರೆ.

ನಾವು ಎರಡೂ ಕಡೆಯವರೊಂದಿಗೆ ಬಹಳ ಹತ್ತಿರವಾಗಿದ್ದೇವೆ. ಯುದ್ಧವನ್ನು ಕೊನೆಗೊಳಿಸುವ ಕರಡು ಒಪ್ಪಂದ ಬಹುತೇಕ ಪೂರ್ಣಗೊಂಡಿದೆ ಎಂದು ತಿಳಿಸಿದರು. ಝೆಲೆನ್ಸ್ಕಿ ಜೊತೆ ಸಭೆ ನಡೆಸುವ ಮೊದಲು ಟ್ರಂಪ್‌ ಪುಟಿನ್‌ಗೆ ದೂರವಾಣಿ ಕರೆ ಮಾಡಿ ಯುದ್ಧ ಕೊನೆಗೊಳಿಸುವ ಕುರಿತು ಮಾತುಕತೆ ನಡೆಸಿದ್ದರು. ಯುದ್ಧ ಕೊನೆಗೊಳಿಸುವ ಬಗ್ಗೆ ಟ್ರಂಪ್‌ ಉಕ್ರೇನ್‌ ಸಂಸತ್ತನ್ನು ಉದ್ದೇಶಿಸಿ ಮಾತನಾಡಲು ಮುಂದಾಗಿದ್ದಾರೆ.

ಟ್ರಂಪ್ ರೂಪಿಸಿದ ಶಾಂತಿ ಒಪ್ಪಂದಕ್ಕೆ 90% ಒಪ್ಪಿಗೆ ಇದೆ. ಟ್ರಂಪ್‌ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ನಾವು ಮಾತುಕತೆಯ ಅಂತಿಮ ಹಂತದಲ್ಲಿದ್ದೇವೆ ಎಂದು ಸಭೆಯ ಬಳಿಕ ಮಾತನಾಡಿದ ಝೆಲೆನ್ಸ್ಕಿ ಹೇಳಿದರು. ಮುಖ್ಯವಾಗಿ ಡಾನ್‌ಬಾಸ್ ಪ್ರದೇಶದ ಭವಿಷ್ಯದ ಬಗ್ಗೆ ಚರ್ಚೆ ನಡೆದಿದೆ. ರಷ್ಯಾ ಡಾನ್‌ಬಾಸ್ ಪ್ರದೇಶದ 90% ಜಾಗವನ್ನು ಆಕ್ರಮಿಸಿಕೊಂಡಿದೆ. ಲುಹಾನ್ಸ್ಕ್ ಸಂಪೂರ್ಣ ವಾಗಿ ಆಕ್ರಮಿಸಿಕೊಂಡಿದೆ ಎಂದರು.

Related Posts

Leave a Reply

Your email address will not be published. Required fields are marked *