ಉಕ್ರೇನ್ ಮೇಲೆ ಇದೇ ಮೊದಲ ಬಾರಿ ರಷ್ಯಾ ಶಬ್ದಕ್ಕಿಂತ 10 ಪಟ್ಟು ವೇಗದ ಹೈಪರ್ ಸಾನಿಕ್ ಓರ್ಶೊನಿಕ್ ಕ್ಷಿಪಣಿ ದಾಳಿ ನಡೆಸಿದೆ.
ಶುಕ್ರವಾರ ರಾತ್ರಿ ರಷ್ಯಾ ಡ್ರೋಣ್ ಹಾಗೂ ಡ್ರೋಣ್ ಮೂಲಕ ಕ್ಷಿಪಣಿಗಳ ದಾಳಿ ನಡೆಸಿದೆ. ಕೀವ್ ನಲ್ಲಿ ದಾಳಿಯಲ್ಲಿ ಕನಿಷ್ಠ 4 ಮಂದಿ ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ನಿವಾಸದ ಮೇಲೆ ಉಕ್ರೇನ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ರಷ್ಯಾದ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.
ಪೂರ್ವ ಉಕ್ರೇನ್ ನ ಲೀವ್ ಮೇಲೆ 13 ಖಂಡಾಂತರ ಕ್ಷಿಪಣಿ ಹಾಗೂ 22 ಕ್ರೂಸ್ ಕ್ಷಿಪಣಿ ಮತ್ತು 242 ಡ್ರೋಣ್ ಮೂಲಕ ದಾಳಿ ನಡೆಸಲಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡೈಮರ್ ಝೆಲೆಸ್ಕಿ ಹೇಳಿಕೆ ನೀಡಿದ್ದಾರೆ.
ಆದರೆ ರಷ್ಯಾ ಓರ್ಶೊನಿಕ್ ಎಂಬ ಹೈಪರ್ ಸಾನಿಕ್ ಕ್ಷಿಪಣ ಮೂಲಕ ದಾಳಿ ನಡೆಸಿದ್ದನ್ನು ದೃಢಪಡಿಸಿದ್ದು, ಇದು ಶಬ್ದಕ್ಕಿಂತ 10 ಪಟ್ಟು ವೇಗವಾಗಿ ಸಂಚರಿಸಲಿದೆ. ವಿಶೇಷ ಅಂದರೆ ಈ ಅಸ್ತ್ರವನ್ನು ರಷ್ಯಾ ಇತಿಹಾಸದಲ್ಲೇ ಎರಡನೇ ಬಾರಿ ಬಳಸಿದೆ.
ಓರ್ಶೊನಿಕ್ ಗಂಟೆಗೆ 13 ಸಾವಿರ ಕಿ.ಮೀ. ವೇಗದಲ್ಲಿ ಪ್ರಯಾಣಿಸುತ್ತದೆ. 2024 ನವೆಂಬರ್ ನಲ್ಲಿ ರಷ್ಯಾ ಈ ಕ್ಷಿಪಣಿಯನ್ನು ಮೊದಲ ಬಾರಿ ಉಕ್ರೇನ್ ನ ಕೇಂದ್ರ ನಗರವಾದ ಡಿಂಪ್ರೊ ಮೇಲೆ ಬಳಸಿತ್ತು. ಈ ಕ್ಷಿಪಣಿ 5,500 ಕಿ.ಮೀ. ಗರಿಷ್ಠ ದೂರ ತಲುಪುವ ಸಾಮರ್ಥ್ಯ ಹೊಂದಿದೆ.
ಉಕ್ರೇನ್ ಮೇಲೆ ರಷ್ಯಾ 2022 ಫೆಬ್ರವರಿಯಲ್ಲಿ ಯುದ್ಧ ಆರಂಭಿಸಿದ್ದು, 4 ವರ್ಷ ಕಳೆದರೂ ಯುದ್ಧ ನಿಲ್ಲುವ ಸೂಚನೆ ಸಿಗುತ್ತಿಲ್ಲ.


