Menu

ನಕಲಿ ರಾಯಭಾರ ಕಚೇರಿಯಲ್ಲಿ 300 ಕೋಟಿ ರೂ. ಹಗರಣ, 162 ಬಾರಿ ಫಾರಿನ್‌ ಟ್ರಿಪ್‌ ಮಾಡಿದ ಆರೋಪಿ

ಪಶ್ಚಿಮ ಆರ್ಕ್ಟಿಕಾ, ಸಬ್ರೋಗಾ, ಪೌಲ್ವಿಯಾ ಮತ್ತು ಲೊಡೋನಿಯಾದಂತಹ ರಾಷ್ಟ್ರಗಳ ನಕಲಿ ರಾಯಭಾರ ಕಚೇರಿಯಲ್ಲಿ 300 ಕೋಟಿ ರೂ. ಹಗರಣ ನಡೆದಿದ್ದು, ಆರೋಪಿ ಹರ್ಷವರ್ಧನ್‌ 162 ಬಾರಿ ಫಾರಿನ್‌ ಟ್ರಿಪ್‌ ಹೋಗಿಬಂದಿರುವ ಪ್ರಕರಣ ತನಿಖಾಧಿಕಾರಿಗಳನ್ನು ಬೆಚ್ಚಿ ಬೀಳಿಸಿದೆ.

ಯುಪಿ ಎಸ್‌ಟಿಎಫ್‌ ನಡೆಸಿದ ತನಿಖೆಯಲ್ಲಿ ಅಂತರರಾಷ್ಟ್ರೀಯ ಶಸ್ತ್ರಾಸ್ತ್ರ ವ್ಯಾಪಾರಿ ಅದ್ನಾನ್ ಖಶೋಗ್ಗಿ ಮತ್ತು ವಂಚಕ ಅಹ್ಸಾನ್‌ ಅಲಿ ಸಯೀದ್‌ಗೆ ಹರ್ಷವರ್ಧನ್‌ನನ್ನು ಚಂದ್ರಸ್ವಾಮಿ  ಪರಿಚಯಿಸಿದ್ದ. ಹೈದರಾಬಾದ್‌ನಲ್ಲಿ ಜನಿಸಿದ್ದ ಸಯೀದ್‌ ಜೈನ್‌ ಈಗ ಟರ್ಕಿ ಪ್ರಜೆಯಾಗಿದ್ದಾರೆ. ಹರ್ಷವರ್ಧನ್‌ ಜೈನ್‌ ಸಯೀದ್‌ ಜೈನ್‌ ಜೊತೆ ಸೇರಿ 25 ನಕಲಿ ಕಂಪನಿಗಳನ್ನು ತೆರೆಯಲು ಎಂಟು ವರ್ಷಗಳಿಂದ ಕೆಲಸ ಮಾಡಿದ್ದ. ಇದರಲ್ಲಿ 300 ಕೋಟಿ ಹಗರಣ ನಡೆದಿರುವುದು ಪತ್ತೆಯಾಗಿದೆ.

ಅಂತಾರಾಷ್ಟ್ರೀಯ ವಂಚಕ ಸಯೀದ್ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ವೆಸ್ಟರ್ನ್ ಅಡ್ವೈಸರಿ ಗ್ರೂಪ್ ಎಂಬ ಕಂಪನಿ ನಡೆಸುತ್ತಿದ್ದ. ನಂತರ ಇದನ್ನು ಬ್ರೋಕರೇಜ್‌ ಕಂಪನಿ ಆಗಿ ಬದಲಾಯಿಸಲಾಗಿತ್ತು. ಈ ವೇಳೆ ಸಾಲ ಪಡೆಯುವವರಿಗೆ ಸಹಾಯ, ಮಾರ್ಗದರ್ಶನ ಮಾಡುವ ಭರವಸೆ ನೀಡಿ 300 ಕೋಟಿ ರೂ. ಸಂಗ್ರಹ ಮಾಡಿದ್ದ. ಬಳಿಕ ಸ್ವಿಸ್‌ ನಿಂದ ಕಂಪನಿಯನ್ನೇ ಇಲ್ಲದಂತೆ ಮಾಡಿದ್ದ. ಈ ಪ್ರಕರಣದಲ್ಲಿ ಸಯೀದ್‌ ಜೈನ್‌ 2022ರಲ್ಲಿ ಬಂಧಿತನಾಗಿದ್ದ. ಅದಕ್ಕೆ ಮೊದಲು ಆತ ನಕಲಿ ರಾಯಭಾರ ಕಚೇರಿ ನೆಟ್‌ವರ್ಕ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂಬುದನ್ನ ಯುಪಿ ಎಸ್‌ಟಿಎಫ್‌ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಶಂಕಿತ ಹರ್ಷವರ್ಧನ್ ಜೈನ್‌ನನ್ನು ಯುಪಿ ಎಸ್‌ಟಿಎಫ್ ಬಂಧಿಸಿ ನಕಲಿ ಅಂಚೆ ಚೀಟಿಗಳು, ಪಾಸ್‌ಪೋರ್ಟ್‌ಗಳು, ರಾಜತಾಂತ್ರಿಕ ನೋಂದಣಿ ಫಲಕಗಳು, ವಿದೇಶಿ ಮತ್ತು ದೇಶೀಯ ನಗದು ವಶಪಡಿಸಿಕೊಳ್ಳಲಾಗಿತ್ತು. ಆರೋಪಿಯು ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳ ಕಾರುಗಳನ್ನು ಹೊಂದಿದ್ದ. ಪ್ರಧಾನಿ, ರಾಷ್ಟ್ರಪತಿ ಮತ್ತು ಇತರ ಗಣ್ಯರೊಂದಿಗೆ ತನ್ನ ಮಾರ್ಫ್‌ ಮಾಡಿದ ಪೋಟೊಗಳನ್ನು ಬಳಸಿಕೊಂಡು ಜನರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ್ದ. ದೇಶದಲ್ಲಿ ವ್ಯಕ್ತಿಗಳು ಮತ್ತು ಕಂಪನಿಗಳಿಗೆ ದಲ್ಲಾಳಿ ಮಾಡುವುದು ಮತ್ತು ಶೆಲ್ ಕಂಪನಿಗಳ ಮೂಲಕ ಹವಾಲಾ ದಂಧೆಯನ್ನು ನಡೆಸುವುದು ಪತ್ತೆಯಾಗಿತ್ತು.

ಹರ್ಷವರ್ಧನ್ ಚಂದ್ರಸ್ವಾಮಿ ಮತ್ತು ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ವ್ಯಾಪಾರಿ ಅದ್ನಾನ್ ಖಶೋಗ್ಗಿ ಅವರೊಂದಿಗೆ ಈ ಹಿಂದೆ ಸಂಪರ್ಕ ಹೊಂದಿದ್ದ ಎಂದು ತನಿಖೆಗಳು ಬಹಿರಂಗಗೊಂಡಿತತ್ತು. 2011 ರಲ್ಲಿ ಆತನ ಬಳಿ ಅಕ್ರಮ ಸ್ಯಾಟಲೈಟ್ ಫೋನ್ ಪತ್ತೆಯಾಗಿತ್ತು, ಕವಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Related Posts

Leave a Reply

Your email address will not be published. Required fields are marked *