ಮೆಜೆಸ್ಟಿಕ್ ನ ದಾರಿ ಉದ್ದಕ್ಕೂ ಪ್ರೈವೇಟ್ ಬಸ್‌ಗಳ ನಿಲುಗಡೆಯಿಂದ ಬಹಳಷ್ಟು ಸಮಸ್ಯೆಗಳಾಗುತ್ತಿದ್ದರೂ ಕೇಳುವವರೇ ಇಲ್ಲ. ಏಕೆಂದರೆ ಪೊಲೀಸ್‌ಗೆ ದಿನಕ್ಕೆ 200ರೂ. ಕೊಟ್ರೆ ಮೆಜೆಸ್ಟಿಕ್ ದಾರಿಯುದ್ದ ಬಸ್ ಪಾರ್ಕಿಂಗ್‌ಗೆ ಜಾಗ ಸಿಗುತ್ತದೆ.
ಖಾಸಗಿ ಬಸ್ ಹಾಬಳಿಯಿಂದ ಟ್ರಾಫಿಕ್ ಜಾಮ್ ಆಗುತ್ತಿದ್ದರೂ ಪೊಲೀಸರು ತಲೆ ಕೆಡಿಸಿಕೊಳ್ಳುವುದಿಲ್ಲ. ತಮ್ಮ ಜೇಬು ತುಂಬಿಸುವುದೇ ಅವರಿಗೆ ಮುಖ್ಯವಾಗಿದೆ. ಉಪ್ಪಾರಪೇಟೆ ಠಾನೆಯ ಪೊಲೀಸರು ಸ್ಥಳಕ್ಕೆ ಬಂದು ಖಾಸಗಿ ಬಸ್ ಒಂದರಿಂದ ದಿನಕ್ಕೆ ೨೦೦ ರೂ. ತೆಗೆದುಕೊಳ್ಳುತ್ತಿದ್ದಾರೆ. ವಾರ, ತಿಂಗಳು ಲೆಕ್ಕದಲ್ಲೂ ಸೆಟಲ್ಮೆಂಟ್ ಮಾಡ್ಕೊಳ್ತಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಪೊಲೀಸರ ಲಂಚ ವಸೂಲಿಯಿಂದಾಗಿ ಮೆಜೆಸ್ಟಿಕ್ ರೋಡಲ್ಲಿ ಖಾಸಗಿ ಬಸ್‌ಗಳ ಪಾರ್ಕಿಂಗ್‌ಗೆ ಕಾರಣವಾಗಿ ಸಾರ್ವಜನಿಕರ ಸಂಚಾರವನ್ನು ಹೈರಾಣಾಗಿಸುತ್ತದೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ವಹಿಸಬೇಕೆಂಬ ಆಸಕ್ತಿ ಹೊಂದಿಲ್ಲ.