Menu

ರೌಡಿಶೀಟರ್ ಶಿವಪ್ರಕಾಶ್ ಕೊಲೆ: ತಾವೇ ಕೊಲೆ ಮಾಡಿರುವುದಾಗಿ ಐವರು ಪೊಲೀಸ್‌ಗೆ ಶರಣು

ರೌಡಿಶೀಟರ್ ಶಿವಪ್ರಕಾಶ್/ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಿ ನಗರ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ತಾವೇ ಕೊಲೆ ಮಾಡಿರುವುದಾಗಿ ಹೇಳಿ ಐವರು ಬಂದು ಪೊಲೀಸರಿಗೆ ಶರಣಾಗಿದ್ದಾರೆ.ಪೊಲೀಸರು ಆರೋಪಿಗಳಾದ ಕಿರಣ್, ವಿಮಲ್ ಸೇರಿ ಐವರನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿ ಕಿರಣ್ ಹಾಗೂ ಪ್ರಕರಣದ ಎ1 ಆರೋಪಿ ಜಗದೀಶ್ ಬಾವ ಬಾಮೈದರಾಗಿದ್ದಾರೆ. ಕಿರಣ್‌ನನ್ನು ವಿಚಾರಣೆಗೆ ಒಳಪಡಿಸಿ ಎ1 ಆರೋಪಿಯ ಬಗ್ಗೆ ಪೊಲೀಸರು ಮಾಹಿತಿ ಪಡೆಯಲು ಮುಂದಾಗಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ನನಗೂ ಬಿಕ್ಲು ಶಿವಗೆ ವೈಷಮ್ಯಇತ್ತು. ಕೊಲೆ ಮಾಡುವಾಗ ವೀಡಿಯೊದಲ್ಲಿರುವುದು ನಾನು ಮಾತ್ರ. ಪ್ರಕರಣದಲ್ಲಿ ನನ್ನ ಭಾವ ಪ್ರಕರಣದ ಎ1 ಆರೋಪಿ ಜಗದೀಶನ ಪಾತ್ರ ಇಲ್ಲ. ನನ್ನ ಮತ್ತು ಬಿಕ್ಲು ಶಿವು ಮಧ್ಯೆ ಇದ್ದ ಮನಸ್ತಾಪಕ್ಕೆ ನಾನೇ ಹತ್ಯೆ ಮಾಡಿದೆ ಎಂದು ಆರೋಪಿ ಕಿರಣ್ ಹೇಳಿದ್ದಾನೆಂದು ಪೊಲೀಸ್ ಮೂಲಗಳು ಹೇಳಿವೆ.

ವೀಡಿಯೊದಲ್ಲಿರುವ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಹಲವು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇಇನ್ನು ಪ್ರಕರಣ ಸಂಬಂಧ ಮಾಜಿ ಸಚಿವ ಭೈರತಿ ಬಸವರಾಜುಗೆ ಪೊಲೀಸರು ನೋಟಿಸ್ ಕಳುಹಿಸಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಬಿಜೆಪಿ ಶಾಸಕ ಭೈರತಿ ಬಸವರಾಜ್​ ಸೇರಿದಂತೆ ಐವರ ವಿರುದ್ಧ ಎಫ್​​ಐಆರ್​ ದಾಖಲಾಗಿದೆ. ಕೊಲೆಗೆ ಭೈರತಿ ಬಸವರಾಜ್ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಿಕ್ಲು ಶಿವನ ತಾಯಿಯ ದೂರಿನ ಮೇರೆಗೆ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಬಿಕ್ಲು ಶಿವ ಕೊಲೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಕೊಲೆಯಾದವನ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ದೂರು ಕೊಟ್ಟ ತಕ್ಷಣ ಏಕಾಏಕಿ ನನ್ನ ವಿರುದ್ಧ ಕೇಸ್​ ದಾಖಲಿಸಿದ್ದಾರೆ. ಈ ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಬೈರತಿ ಬಸವರಾಜ್‌ ಹೇಳಿದ್ದಾರೆ.
ಮಂಗಳವಾರ ರಾತ್ರಿ ಬಿಕ್ಲು ಶಿವ ಮನೆಯಿಂದ ಹೊರಗೆ ಪುಟ್ ಪಾತ್ ಮೇಲೆ ನಿಂತಿದ್ದ. ಸ್ಕಾರ್ಪಿಯೋ ಕಾರಿನಲ್ಲಿ ಕಾದು ಕುಳಿತಿದ್ದ 7ರಿಂದ 8 ಮಂದಿ ಬಿಕ್ಲು ಶಿವನ ಮೇಲೆ ಎರಗಿದ್ದರು. ಮಾರಾಕಸ್ತ್ರಗಳಿಂದ ಹೊಡೆದುಕೊಲೆ ಮಾಡಿದ್ದರು.

Related Posts

Leave a Reply

Your email address will not be published. Required fields are marked *