Saturday, October 25, 2025
Menu

ರೋಹಿತ್- ಕೊಹ್ಲಿ ಭರ್ಜರಿ ಜೊತೆಯಾಟ: ಆಸ್ಟ್ರೇಲಿಯಾಗೆ 9 ವಿಕೆಟ್ ಆಘಾತ

rohit sharma

ಮಾಜಿ ನಾಯಕರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರ ಅಜೇಯ ಆಟದಿಂದ ಭಾರತ ತಂಡ 9 ವಿಕೆಟ್ ಗಳ ಭಾರೀ ಅಂತರದಿಂದ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದೆ.

ಸಿಡ್ನಿಯಲ್ಲಿ ಶನಿವಾರ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವನ್ನು 46.3 ಓವರ್ ಗಳಲ್ಲಿ ಆಲೌಟ್ ಮಾಡಿದ ಭಾರತ ತಂಡ ಸ್ಪರ್ಧಾತ್ಮಕ ಮೊತ್ತವನ್ನು 38 ಓವರ್ ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.  ಈ ಸೋಲಿನ ಹೊರತಾಗಿಯೂ ಆಸ್ಟ್ರೇಲಿಯಾ 2-1ರಿಂದ ಸರಣಿ ಗೆದ್ದುಕೊಂಡಿತು.

ಭಾರತ ತಂಡ ಆರಂಭದಲ್ಲೇ ನಾಯಕ ಶುಭಮನ್ ಗಿಲ್ (24) ಸಾಧಾರಣ ಮೊತ್ತಕ್ಕೆ ಕಳೆದುಕೊಂಡರೂ ರೋಹಿತ್ ಶರ್ಮ ಮತ್ತು ಗಿಲ್ ಮೊದಲ ವಿಕೆಟ್ ಗೆ 69 ರನ್ ಜೊತೆಯಾಟದಿಂದ ಉತ್ತಮ ಆರಂಭ ತಂದುಕೊಟ್ಟರು.

ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ರೋಹಿತ್ ಶರ್ಮ ಈ ಪಂದ್ಯದಲ್ಲಿ ಶತಕ ಸಿಡಿಸಿದರು. ಇದು ಅವರಿಗೆ 33ನೇ ಏಕದಿನ ಶತಕವಾಗಿದೆ. ರೋಹಿತ್ 105 ಎಸೆತಗಳಲ್ಲಿ ಶತಕ ಪೂರೈಸಿದರು. ರೋಹಿತ್ ಅಂತಿಮವಾಗಿ 125 ಎಸೆತಗಳಲ್ಲಿ 13 ಬೌಂಡರಿ ಮತ್ತು 3 ಸಿಕ್ಸರ್ ನೊಂದಿಗೆ 121 ರನ್ ಬಾರಿಸಿ ಅಜೇಯರಾಗಿ ಉಳಿದರು.

ಮತ್ತೊಂದೆಡೆ ಸತತ ಎರಡು ಶೂನ್ಯ ಸಂಪಾದನೆಯೊಂದಿಗೆ ಆಘಾತಗೊಂಡಿದ್ದ ಕಿಂಗ್ ಕೊಹ್ಲಿ ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಇನ್ನೂ ಫಾರ್ಮ್ ನಲ್ಲಿ ಇದ್ದೇನೆ ಎಂದು ಸಾಬೀತುಪಡಿಸಿದರು. ಕೊಹ್ಲಿ 56 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಅಂತಿಮವಾಗಿ 81 ಎಸೆತಗಳಲ್ಲಿ 7 ಬೌಂಡರಿ ಸಹಿತ 74 ರನ್ ಬಾರಿಸಿ ಔಟಾಗದೇ ಉಳಿದರು. ಇದು ಅವರ 75ನೇ ಅರ್ಧಶತಕವಾಗಿರುವುದು ವಿಶೇಷ.

Related Posts

Leave a Reply

Your email address will not be published. Required fields are marked *