Tuesday, December 30, 2025
Menu

ಕೃಷಿ ಸಚಿವರ ತವರಲ್ಲೇ ಆರಂಭವಾಗದ ಭತ್ತ ಖರೀದಿ ಕೇಂದ್ರ: ಆರ್‌ ಅಶೋಕ

ಸಿಎಂ @siddaramaiah ನವರೇ, ಡಿಸೆಂಬರ್ ಆರಂಭದಲ್ಲೇ ಆರಂಭವಾಗಬೇಕಿದ್ದ ಭತ್ತ ಖರೀದಿ ಕೇಂದ್ರ ಇನ್ನೂ ಯಾಕೆ ಆರಂಭ ಆಗಿಲ್ಲ? ನಿಮ್ಮ ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ನಿದ್ದೆ ಮಾಡುತ್ತಿದ್ದಾರಾ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಪ್ರಶ್ನಿಸಿದ್ದಾರೆ.

ಭತ್ತ ಖರೀದಿ ಕೇಂದ್ರಗಳನ್ನು ಕೂಡಲೇ ತೆರೆದು ದಲ್ಲಾಳಿಗಳ ಹಾವಳಿಯಿಂದ ರೈತರಿಗೆ ಆಗುತ್ತಿರುವ ನಷ್ಟ ತಪ್ಪಿಸದಿದ್ದರೆ ಮತ್ತೊಮ್ಮೆ ರೈತರ ಪ್ರತಿಭಟನೆ ವಿಕೋಪಕ್ಕೆ ತಿರುಗುವುದು ಗ್ಯಾರೆಂಟಿ. ಉತ್ತಮ ಮಳೆಯಿಂದಾಗಿ ಮಂಡ್ಯ, ಮೈಸೂರು ಭಾಗದಲ್ಲಿ ಭತ್ತದ ಬೆಳೆಯಲ್ಲಿ ಉತ್ತಮ ಫಸಲು ಬಂದಿದೆ. ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸದೆ ಸೂಕ್ತ ಬೆಲೆ ಕೊಡದೆ, ದಾಸ್ತಾನಿಗೆ ಜಾಗವಿಲ್ಲ, ತೇವಾಂಶ ಜಾಸ್ತಿ ಇದೆ ಎಂದು  ಅನ್ನದಾತರನ್ನು ಸತಾಯಿಸುತ್ತಿದೆ ಈ ರೈತ ವಿರೋಧಿ @INCKarnataka ಸರ್ಕಾರ ಎಂದು ಕಿಡಿ ಕಾರಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ  ಪೋಸ್ಟ್‌ ಮಾಡಿರುವ ಆರ್‌ ಅಶೋಕ, ಕೇಂದ್ರ ಸರ್ಕಾರ ಕ್ವಿಂಟಲ್ ಭತ್ತಕ್ಕೆ ₹2362 ಬೆಂಬಲ ಬೆಲೆ ಘೋಷಿಸಿದೆ. ಕೇರಳ, ಒಡಿಸ್ಸಾ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ನೀಡುತ್ತಿರುವಂತೆ ರಾಜ್ಯ ಸರ್ಕಾರದ ವತಿಯಿಂದ ಕ್ವಿಂಟಲ್ ಭತ್ತಕ್ಕೆ ₹500 ಪ್ರೋತ್ಸಾಹ ಧನವಾಗಿ ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿ ಕೇಂದ್ರಗಳ ಮೂಲಕ ಭತ್ತ ಖರೀದಿ ಮಾಡಿ ರೈತರ ನೆರವಿಗೆ ಬನ್ನಿ ಎಂದಿದ್ದಾರೆ.

ತೇವಾಂಶ ಕಡಿಮೆ ಮಾಡಿಕೊಂಡು ಬನ್ನಿ, ದಾಸ್ತಾನಿಗೆ ಸ್ಥಳವಿಲ್ಲ ಎನ್ನುವ ಕುಂಟು ನೆಪಗಳನ್ನು ಕೊಡುವುದು ಬಿಟ್ಟು, ಪಂಜಾಬ್ ಇನ್ನಿತರ ರಾಜ್ಯಗಳ ಮಾದರಿಯಲ್ಲಿ ಭತ್ತ ಖರೀದಿ ಕೇಂದ್ರಗಳಲ್ಲೇ ಒಣಗಿಸುವ ಯಂತ್ರ ಅಳವಡಿಸಿ ಖರೀದಿ ಪ್ರಕ್ರಿಯೆ ತ್ವರಿತಗೊಳಿಸಿ. ದಲ್ಲಾಳಿಗಳ ಶೋಷಣೆಯಿಂದ ರೈತರನ್ನು ರಕ್ಷಿಸಿ.ಕಬ್ಬು, ಮೆಕ್ಕೆಜೋಳದ ನಂತರ ನಿಮ್ಮ ಸರ್ಕಾರದ ಈ ರೈತ ವಿರೋಧಿ ಧೋರಣೆ ಭತ್ತ ಖರೀದಿಯಲ್ಲೂ ಮುಂದುವರೆದರೆ ಈ ಬಾರಿ ರೈತರ ಕೆಂಗಣ್ಣಿಗೆ ಗುರಿಯಾಗಿ ಸರ್ಕಾರ ಧೂಳೀಪಟ ಆಗುವುದು ಮಾತ್ರ ಗ್ಯಾರೆಂಟಿ ಎಂದು ಬರೆದುಕೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *